ಕಲಬುರಗಿ:ಅ.11: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬೆಳಿಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೊತ್ತರ, ನಂತರ ಪಲ್ಲಕ್ಕಿ ಉತ್ಸವ ವೈಭದಿಂದ ನೆರವೇರಿತು. ನಂತರ ಪಂ ಶ್ರೀನಿವಾಸ ಪದಕಿ ಅವರಿಂದ ರಾಯರ ಮಹಿಮೆ ಕುರಿತು ಪ್ರವಚನ ನಡೆಯಿತು. ನಂತರ ತುಳಸಿ ಅರ್ಚನೆ, ಹಾಗೂ ನೈವೇದ್ಯ ಹಸ್ತೋದಕ ಮಹಾಮಂಗಳಾರತಿ, ಮಂತ್ರಪುಷ್ಪ ನೆರವೇರಿತು.
ಅರ್ಚಕರಾದ ಗುಂಡಾಚಾರ್ಯ ನರಿಬೋಳ, ಡಿ ವ್ಹಿ ಕುಲಕರ್ಣಿ, ಶಾಮರಾವ ಕುಲಕರ್ಣಿ, ಗೋಪಾಲರಾವ, ಗುರುರಾಜ ಕುಲಕರ್ಣಿ, ವಿಜಯಕುಮಾರ, ಸುಭಾಶ ದೇಶಪಾಂಡೆ, ಹಾಗೂ ಜಯತೀರ್ಥ ಮಹಿಳಾ ಭಜನಾ ಮಂಡಳಿಯ ಸದಸ್ಯರು ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.























