Home ಜಿಲ್ಲೆ ಕಲಬುರಗಿ ಜಗತ್ತು ತೋರಿಸಿದ ತಾಯಿಗೆಜಗತ್ತು ಸ್ಮರಿಸುವಂತೆ ಮಾಡಬೇಕು:ಶಿವು ಮುಸ್ತಾಪುರೆ

ಜಗತ್ತು ತೋರಿಸಿದ ತಾಯಿಗೆಜಗತ್ತು ಸ್ಮರಿಸುವಂತೆ ಮಾಡಬೇಕು:ಶಿವು ಮುಸ್ತಾಪುರೆ

ಕಲಬುರಗಿ:ಮೇ.19:ದಿನದ 24 ತಾಸುಕುಟುಂಬದ ಏಳಿಗೆಗಾಗಿ ವಿಶ್ರಾಂತಿಇರದೆದುಡಿಯುವಜೀವಯಾವುದಾದರೂಇದ್ದರೆ, ಅದುತಾಯಿ. ಪ್ರೀತಿ, ಮಮತೆ, ವಾತ್ಸಲ್ಯಕ್ಕೆಇನ್ನೊಂದು ಹೆಸರೆತಾಯಿಎನ್ನುವಂತೆಪ್ರತಿಯೊಬ್ಬರುಇದರ ಬಗ್ಗೆ ಕಾಳಜಿ ವಹಿಸಬೇಕು.ಹಿಂದೆಂದಿಗಿಂತಲೂಇಂದುತಾಯಿಗೆಕೊಡುವಗೌರವಹೆಚ್ಚಾಗಿಜಗತ್ತೆ ಸ್ಮರಿಸುವಂತಾಗಬೇಕುಎಂದುಶಾರದಾಎಜ್ಯುಕೇಷನ್ ಟ್ರಸ್ಟಿನ ಉಪಾಧ್ಯಕ್ಷರಾದಶಿವು ಮುಸ್ತಾಪುರೆಮಾತನಾಡಿದರು.
ಇತ್ತೀಚೆಗೆ ಬಸವಕಲ್ಯಾಣತಾಲ್ಲೂಕಿನ ಮಂಠಾಳ ಗ್ರಾಮದಲ್ಲಿಅಂಡಗಿ ಪ್ರತಿಷ್ಠಾನ ಹಾಗೂ ಶಾರದಾಎಜ್ಯುಕೇಷನಲ್‍ಟ್ರಸ್ಟ್ ಸಂಯುಕ್ತಾಶ್ರಯದಲ್ಲಿತಾಯಂದಿರ ದಿನಾಚರಣೆ ಉದ್ಘಾಟಿಸಿ ಸಾಂಕೇತಿಕವಾಗಿತಾಯಂದಿರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಆಚರಿಸಲಾಯಿತು.
ತಾಯಿಋಣತೀರಿಸುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ ಹಾಗಾಗಿ ಪೂಜಿಸುವುದು, ಗೌರವಿಸುವುದು ಮಾತ್ರ ನಮ್ಮಕರ್ತವ್ಯ. ಇದುವೆ ನಮ್ಮ ಹಿಂದೂ ಸನಾತನಧರ್ಮದ ಸಂಸ್ಕøತಿಎನ್ನುತ್ತಾತಂದೆ-ತಾಯಿಯರನ್ನುದೇವರಂತೆಕಂಡುಗೌರವಿಸುವ ಸಂಸ್ಕøತಿ ನಮ್ಮಯುವ ಪೀಳಿಗೆಯ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದಲೇತಾಯಂದಿರ ದಿನಾಚರಣೆಆಯೋಜಿಸಲಾಗಿದೆಎಂದುಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಕಾಶಮುಸ್ತಾಪುರೆ ಸ್ವಾಗತಿಸಿದರು.ರೇಖಾಅಂಡಗಿ ವಂದಿಸಿದರು.
ಹಿರಿಯರಾದಶ್ರೀಮತಿ ಚನ್ನಮ್ಮ ಸಿರಗಾಪೂರ, ಮಹಾನಂದ ಮುಸ್ತಾಪುರೆ, ಭಾಗೀರಥಿ ಮುಸ್ತಾಪುರೆ, ಶೈಲಜಾದೇಶಮುಖ, ಶರಣಮ್ಮ ಮುಸ್ತಾಪುರೆ, ರಾಣಿ ಮುಸ್ತಾಪುರೆಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿಶಾರದಾಎಜ್ಯುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಬಸವರಾಜ ಮುಸ್ತಾಪುರೆÀಹಿರಿಯರಾದವೀರಣ್ಣ, ಗುರುಲಿಂಗಪ್ಪ, ಚಂದ್ರಕಾಂತ, ರಮೇಶ, ಪ್ರಕಾಶ, ವಿಶಾಲ, ಆನಂದ, ಅರವಿಂದ, ಶಿವು, ವಿನೋದ, ಬಸವರಾಜ ಹಾಗೂ ಇತರರು ಉಪಸ್ಥಿತರಿದ್ದರು.