
ಅಕ್ರಮ ಸಂಪತ್ತು ಪತ್ತೆ
ಬೆಂಗಳೂರು, ಡಿ.೧೬- ರಾಜ್ಯದ ವಿವಿಧೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.
ಬೆಳಗಾವಿ, ಹಾವೇರಿ, ಚಿತ್ರದುರ್ಗ, ಧಾರವಾಡ, ಶಿವಮೊಗ್ಗ, ವಿಜಯ ನಗರ ಸೇರಿದಂತೆ ಮತ್ತಿತರ ಕಡೆ ಹತ್ತಾರು ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಸಂಪತ್ತು ಪತ್ತೆ ಮಾಡಿದ್ದು ಶೋಧ ಮುಂದುವರಿದಿದೆ.
ಬೆಳಗಾವಿ ಕೃಷಿ ವಿಜೆಲೆನ್ಸ್ ಉಪ ನಿರ್ದೇಶಕ ರಾಜಶೇಖರ ಮನೆ ಮೇಲೆ ಲೋಕಾ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಚಿತ್ರದುರ್ಗದ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಪೋಲೀಸ್ ವರಿಷ್ಢಾಧಿಕಾರಿ ಸಿದ್ಲಿಂಗಪ್ಪ ಡಿಎಸ್ ಪಿ ಕುರಬಗಟ್ಟಿ, ಹಾಗೂ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಧಾರವಾಡದ ಎರಡು ಮನೆ ಸೇರಿದಂತೆ ಬೆಳಗಾವಿ,ಹಾವೇರಿ, ಚಿತ್ರದುರ್ಗ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ
ಶಿವಮೊಗ್ಗದಲ್ಲಿ ದಾಳಿ
ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಅಧಿಕಾರಿಗೆ ಲೋಕಾಯುಕ್ತ ಶಾಕ್ ನೀಡಿದ್ದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ರೂಪ್ಲಾ ನಾಯ್ಕ್ ಮನೆ ಮೇಲೆ ದಾಳಿ ನಡೆಸಿದ್ದು ಶಿವಮೊಗ್ಗದ ಬಸವನಗುಡಿಯ ಬಾಡಿಗೆ ಮನೆಯಲ್ಲಿ ಶೋಧ ನಡೆಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಚೇರಿ ಮೇಲೆ ಸಹ ದಾಳಿ ನಡೆಸಿರುವ ಅಧಿಕಾರಿಗಳು ರೂಪ್ಲಾ ನಾಯ್ಕ್ ಕುಟುಂಬಸ್ಥರಿರುವ ಬೆಂಗಳೂರಿನ ನಿವಾಸದ ಮೇಲೆ ಲೋಕಾ ದಾಳಿ ನಡೆಸಿದ್ದಾರೆ.ಜೊತೆಗೆ ಚಿಕ್ಕಮಗಳೂರಿನ ಕಡೂರು ಮೂಲದ ರೂಪ್ಲಾ ನಾಯ್ಕ್ ರಸಹಾಯಕ ತಾಂಬೆ ಮನೆ ಮೇಲೆ ಸಹ ದಾಳಿ ನಡೆಸಲಾಗಿದೆ.
ಒಟ್ಟು ೬ ತಂಡಗಳಾಗಿ ದಾಳಿ ಮಾಡಿರುವ ಶಿವಮೊಗ್ಗ ಲೋಕಾಯುಕ್ತ ಟೀಮ್ ದಾಳಿ ನಡೆಸಿದೆ. ದಾಳಿ ಮಾಡಿ, ದಾಖಲೆ ಪರಿಶೀಲನೆ ನಡೆದಿದೆ.
ವಿಜಯನಗರದಲ್ಲಿ ದಾಳಿ
ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಮನೆ, ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಡಾ. ಶಂಕರ್ ನಾಯ್ಕ್ ಅವರು ವಿಜಯನಗರದ ಕಚೇರಿ, ಮನೆ ಮತ್ತು ಆಸ್ಪತ್ರೆ ಮೇಲೆ ದಾಳಿ ಮಾಡಿದ್ದಾರೆ.
ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ, ಸಚಿನ್ , ಪಿಐ ಅಮರೇಶ್, ರಾಜೇಶ್ ಲಮಾಣಿ ಮತ್ತು ಕೊಪ್ಪಳ, ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ




























