
ಕೆಜಿಎಫ್:ಜು:೩: ಸರ್ಕಾರಿ ಸೇವೆ ವೇಳೆ ಸರ್ಕಾರ ಒಂದು ಕಡೆಯಿಂದ ಮತ್ತೋಂದು ಕಚೇರಿಗೆ ವರ್ಗಾವಣೆ ಮಾಡುವುದು ಸಹಜವಾದ ಪ್ರಕ್ರಿಯೆ ಆದರೆ ಸರ್ಕಾರಿ ಸೇವೆ ವೇಳೆ ನಾವು ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯಲಿದೆ ಅದರ ತೃಪ್ತಿ ನನಗೆ ಇದೆ ಎಂದು ಹುಣಸುರು ಸಹಾಯಕ ಪ್ರಾದೇಶಿಕ ಸಾರಿಗೆ ಅದಿಕಾರಿಯಾಗಿ ವರ್ಗಾವಣೆಗೊಂಡಿರುವ ನಯಾಸ್ ಪಾಷ ಹೇಳಿದರು.
ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವರ್ಗಾವಣೆಗೊಂಡಿರುವ ನಯಾಸ್‌ಪಾಷ ರವರಿಗೆ ಬೀಳ್ಕೊಡುಗೆ ಹಾಗೂ ನೂತನವಾಗಿ ಎಆರ್‌ಟಿಒ ಆಗಿ ಅಧಿಕಾರಿ ಸ್ವೀಕರಿಸಿದ ಗಜೇಂದ್ರಬಾಬು ರವರನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು .
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಪ್ರಾಧೇಶಿಕ ಸಾರಿಗೆ ಅಧಿಕಾರಿ ನಯಾಸ್‌ಪಾಷ ನಾನು ೪ ವರ್ಷಗಳ ಸುಧೀರ್ಘವಾದ ಸೇವೆಯನ್ನು ಸಲ್ಲಿಸಿದ್ದು ನನ್ನ ಸೇವಾ ಅವದಿಯಲ್ಲಿ ಕಚೇರಿಯಲ್ಲಿ ಹಲವು ನೂತನವಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಯಶಸ್ವಿಯಾಗಿದ್ದೇವೆ ಆದೇ ರೀತಿ ಕಚೇರಿಯ ನೂತನ ಕಟ್ಟಡವನ್ನು ನಿರ್ಮೀಸಿದ್ದು ಕಟ್ಟಡದ ಉದ್ಘಾಟನೆಗೊಳ್ಳಬೇಕಿದೆ ಆದರೆ ಅಷ್ಟರಲ್ಲಿ ನಾನು ಇಲ್ಲಿಂದ ವರ್ಗಾವಣೆಗೊಳ್ಳುತ್ತಿರುವುದು ನನಗೆ ಮನಸಿಗೆ ನೋವು ತಂದಿದ್ದರು ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕಿದೆ ನಾನು ಇಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎಲ್ಲಾ ಡ್ರೈವಿಂಗ ಸ್ಕೂಲ್‌ಗಳ ಮಾಲಿಕರು ಹಾಗೂ ಸಾರ್ವನಿಕರು ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು.
ಕೆಜಿಎಫ್ ಸಹಾಯಕ ಪ್ರಾಧೇಶಿಕ ಸಾರಿಗೆ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗಜೇಂದ್ರಬಾಬು ಮಾತನಾಡಿ ನಾನು ರಾಮನಗರ ಸಹಾಯಕ ಪ್ರಾಧೇಶಿಕ ಕಚೇರಿಯಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದು ಇಲ್ಲಿನ ಎಲ್ಲಾ ಡ್ರೈವಿಂಗ್ ಸ್ಕೂಲ್ ಆಡಳಿತ ವರ್ಗ ಹಾಗೂ ಸಾರ್ವಜನಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಾನು ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸಲಿದ್ದು ಎಲ್ಲರು ಕಾನೂನು ಪಾಲನೆ ಮಾಡಬೇಕು ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಅನಿವಾರ್‍ಯವಾಗಲಿದೆ ಎಂದು ಹೇಳಿದರು.
ಈ ವೇಳೆ ಡ್ರೈವಿಂಗ್ ಶಾಲೆಯ ಮುಖ್ಯಸ್ಥ ಆಟೋ ಚಾಲಕರ ಸಂಘದ ಅಧ್ಯಕ್ಷ ಡಾ:ರಾಜಕುಮಾರ್, ವಿಜಯರಾಘವರೆಡ್ಡಿ ,ನಯೀಮ್‌ಪಾಷ, ಬಾಬು ,ವೆಂಕಟೇಶ್ ಹಾಗೂ ಕಚೇರಿ ಸಿಬ್ಬಂದಿಗಳಾದ ಸೂಪರ್‌ಡೇಂಟ್ ಆನಂದ ಹಾಗೂ ಇತರರು ಹಾಜರಿದ್ದರು.