
ಸಂಜೆ ವಾಣಿ ವಾರ್ತೆ
ಜಮಖಂಡಿ :ಫೆ.೨೧:ಸರ್ವಜ್ಞ ಕವಿಯು ತಮ್ಮ ತ್ರಿಪದಿಗಳ ಮೂಲಕ ಸಮಾಜದ ಮೇಲು ಕೀಳು ಎಂಬ ಭೇದಭಾವ ಹೋಗಲಾಡಿಸುವ ಪ್ರಯತ್ನ ಮಾಡಿದ್ದರು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಕುಂಬಾರಗಲ್ಲಿಯ ಕುಂಬಾರ ಗುಂಡಯ್ಯಾ ಸಮುದಾಯ ಭವನದಲ್ಲಿ ಏರ್ಪಡಿಸಿದ ತ್ರೀಪದಿ ಕವಿ ಸರ್ವಜ್ಞ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು
ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಅವುಗಳನ್ನು ನಾವು ಅರಿತುಕೊಂಡರೆ ನಮ್ಮ ಜೀವನ ಸರಳವಾಗಿ ಸಾಗುತ್ತದೆ ಎಂದರು
೧೬ನೇ ಶತಮಾನದಲ್ಲಿ ಸರ್ವಜ್ಞರು ಸರಿ ಸಮಾನವಾದಂತಹ ಸಮಾಜವನ್ನು ನಿರ್ಮಾಣ ಮಾಡೋಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ.೧೨ ನೇ ಶತಮಾನದಲ್ಲಿ ಬಸವಣ್ಣನವರ ಹೇಗೆ ವಚನಗಳ ಮೂಲಕ ಮೇಲು ಕೀಳು ಎಂಬ ಭಾವನೆಗಳನ್ನು ಹೊಗಲಾಡಿಸಲು ಪ್ರಯತ್ನ ಮಾಡಿದ್ದರು ಹಾಗೆ ೧೬ ಶತಮಾನದಲ್ಲಿ ಸರ್ವಜ್ಞರು ಮಾಡಿದರು ಆದರೆ ಇವತ್ತಿಗೂ ಕೂಡ ಜಾತಿ ವ್ಯವಸ್ತೆಯಿಂದ ಹೊರಗೆ ಬರೋಕ್ಕೆ ಸಾದ್ಯವಾಗುತ್ತಿಲ್ಲ ಆದರಿಂದ ಇಂತಹ ಶರಣರ ಜಯಂತಿಯನ್ನ ಅವರ ಹುಟ್ಟಿದ ದಿನಗಳಲ್ಲಿ ಮಾಡದೆ ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂಥ ಕೆಲಸವನ್ನು ಮಾಡಿದರೆ ಮಾತ್ರ ಶರಣರ ಜಯಂತಿಗೆ ನಿಜವಾಗಿಯೂ ಅರ್ಥ ಸಿಗುತ್ತದೆ ಎಂದರು
ಓಲೇಮಠದ ಶ್ರೀ ಆನಂದ ದೇವರು ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು
ಡಾ.ವಾಯ್.ವಾಯ್.ಕೊಕ್ಕನವರ ಉಪನ್ಯಾಸ ನೀಡಿದರು
ಬಸವರಾಜ ಹೊಳೆಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು
ಗುರುರಾಜ ಕುಂಬಾರ ನೀರುಪಿಸಿ ವಂಧಿಸಿದರು
ಶಹರ ಪೋಲಿಸ್ ಠಾಣೆ ಪಿಎಸೈ ಅನೀಲ ಕುಂಬಾರ,ನಿವೃತ್ತ ಪಿಎಸೈಗಳಾದ ಬಸವರಾಜ ಕುಂಬಾರ,ಹೆಚ್.ಎಮ್.ಹೊಸಮನಿ,ನಗರಸಭೆ ಮಾಜಿ ಅದ್ಯಕ್ಷ ಪರಮಾನಂದ ಗವರೋಜಿ,ನಗರಸಭೆ ಮಾಜಿ ಸದಸ್ಯ ಪರಮಾನಂದ ಚಿಗರಿ,ಬಸವರಾಜ ಹೊಳೆಪ್ಪಗೋಳ, ಮಲ್ಲಪ್ಪ ಬುಲಬುಲಿ,ಮುರಗೆಪ್ಪ ಬೆಳಕಿಂಡಿ ಸೇರಿದಂತೆ ಅನೇಕರು ಇದ್ದರು



























