ಪ್ರಾಮಾಣಿಕತೆ ಮೆರೆದ ಶಿಕ್ಷಕರ ಕಾರ್ಯ ಮಾದರಿಯಾಗಿದೆ : ಸಿಪಿಐ ಠಾಕೂರ್

ಔರಾದ :ನ.೨೩: ರಸ್ತೆಯಲ್ಲಿ ಸಿಕ್ಕಿರುವ ದುಬಾರಿ ಬೆಲೆಯ ಮೊಬೈಲ ಮಾಲಿಕರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಶಿಕ್ಷಕನಿಗೆ ಸಿಪಿಐ ರಘವೀರಸಿಂಗ್ ಠಾಕೂರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಟ್ಟಣದ ಪ್ರತೀಕ ಉದಗಿರೆ ಎನ್ನುವ ವಿದ್ಯಾರ್ಥಿಯು ದುಬಾರಿ ಬೆಲೆಯ ಮೊಬೈಲ್ ಕಳೆದುಕೊಂಡಿದ್ದ, ಅದು ಎಕಲಾರ ಶಾಲೆಯ ಮುಖ್ಯ ಶಿಕ್ಷಕ ಪ್ರಭುರಾವ ಬಾಳೂರೆ ಅವರಿಗೆ ಸಿಕ್ಕಿತ್ತು ಅದನ್ನು ಅವರು ಸ್ವತಃ ಅವರ ಮನೆಗೆ ತೆರಳಿ ಮನೆಗೆ ತೆರಳಿ ಪೋನ್ ನೀಡಿದ್ದಾರೆ. ದುಬಾರಿ ವಸ್ತುಗಳು ಸಿಕ್ಕರೆ ಬಳಸಿಕೊಳ್ಳುವ ಈ ಕಾಲದಲ್ಲಿ ಮರಳಿ ಅದರ ಮಾಲೀಕರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಶಿಕ್ಷಕರ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ,ಸಂಸ್ಕಾರ, ಪ್ರಾಮಾಣಿಕತೆಯ ಪಾಠ ಭೋಧಿಸುವುದರ ಜೋತೆಗೆ ತನ್ನ ವೃತಿ ಜೀವನದಲ್ಲಿ ಪ್ರಮಾಣಿಕತೆ ಸೇವಾ ನಿಷ್ಠೆಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಯ ಕುಟುಂಬಕ್ಕೆ ತೆರಳಿ ಮೊಬೈಲ್ ನೀಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಶಿಕ್ಷಕರು ಮಾಡಿರುವಂತೆ ಇನ್ನೂಳಿದ ಪಟ್ಟಣ ಸೇರಿದಂತೆ ತಾಲೂಕಿನ ಯಾವುದೇ ಗ್ರಾಮದಲ್ಲಿಯೂ ರಸ್ತೆ ಸೇರಿದಂತೆ ಕಡೆಗಳಲ್ಲಿ ಸಿಕ್ಕಿರುವ ವಸ್ತುಗಳು ನಿಮ್ಮಂತೆ ಇನ್ನೊಬ್ಬರ ಬೆವರಿನಿಂದ ಬಂದಿರುವ ವಸ್ತುಗಳಾಗಿರುತ್ತವೆ ಎನ್ನುವುದು ಗಮನದಲ್ಲಿ ಇಟ್ಟಿಕೊಂಡು ಮಾಲಿಕರಿಗೆ ವಾಪಸ್ ನೀಡಿ ಇಲ್ಲವಾದಲ್ಲಿ ನಿಮ್ಮಗೆ ಹತ್ತಿರದ ಪೊಲೀಸ ಠಾಣೆಯಲ್ಲಿ ಅಧಿಕಾರಿಗಳಿಗೆ ಸಿಕ್ಕ ವಸ್ತುಗಳನ್ನು ಒಪ್ಪಿಸಿದಾಗ ನಮ್ಮ ಸಿಬ್ಬಂಧಿಗಳು ತನಿಖೆ ನಡೆಸಿ ನಿಜವಾದ ವಾರಸುದಾರರಿಗೆ ಒಪ್ಪಿಸುತ್ತಾರೆಂದು ಸಲಹೆ ನೀಡಿದರು.
ಪ್ರತೀಕ ಉದಗಿರೆ ಮತನಾಡಿ, ನನ್ನ ವಿದ್ಯಾರ್ಥಿ ಜೀವನಕ್ಕೆ ಅನುಕುಲವಾಗಲೆಂದು ನಮ್ಮ ತಂದೆ-ತಾಯಿಯರು ಮೊಬೈಲ ಕೊಡಿಸಿದ್ದರು, ರಾಜಸ್ಥಾನದ ಕೋಟಾದಲ್ಲಿ ಜೆಇಇ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವ ನಾನೂ ರಜೆ ಇರುವ ಹಿನ್ನಲೆಯಲ್ಲಿ ತಾಲೂಕಿಗೆ ಬಂದಿದ್ದೆ ನನ್ನ ಪೊನ್ ಕಳೆದು ಹೋದಾಗ ಅದರಲ್ಲಿರುವ ನನ್ನ ವಿದ್ಯಾಬ್ಯಾಸಕ್ಕೆ ಸಂಬAಧಿಸಿದ ಮಹತ್ವದ ಮಾಹಿತಿಗಳು ಇದ್ದವು, ದೇವರ ಸ್ವರುಪದಲ್ಲಿ ಬಾಳುರೆ ಸರ್ ಅವರಿಗೆ ಪೊನ್ ಸಿಕ್ಕಿ ನಮಗೆ ನೀಡಿದ್ದು ಸಂತೋಷದ ವಿಷಯವಾಗಿದೆ ಎಂದು ಪ್ರತೀಕ ತಿಳಿಸಿದ್ದಾರೆ.
ಮುಖಂಡ ಶಿವಕಾಂತ ಮಜಿಗೆ ಮಾತನಾಡಿ, ನಮ್ಮ ಶಿಕ್ಷಕರು ನಮ್ಮಂತವರಿಗೆ ಒಳ್ಳೆಯ ಸಂಸ್ಕಾರವನ್ನು ನೀಡುವುದರ ಜೋತೆಗೆ ಫೋನ ಕಳೆದುಕೊಂಡು ಕುಟುಂಬದ ಸದಸ್ಯರಿಗೆ ನೀಡಿ ನಮ್ಮಂತವರಿಗೆ ಮಾದರಿಯಾಗಿದ್ದಾರೆ.ಇವರಂತೆ ತಾಲೂಕಿನಲ್ಲಿ ಯಾವುದೆ ವಸ್ತು ಯಾರ ಕೈಗೂ ಸಿಕ್ಕಿದರು ಕೂಡಾ ಅವರು ನಿಜವಾದ ವಾರಸುದಾರರಿಗೆ ಒಪ್ಪಿಸುವಂತಹ ಕೆಲಸ ಮಾಡಲು ಮುಂದಾಗಬೇಕೆAದು ಸಲಹೆ ನೀಡಿದರು.
ಈ ವೇಳೆ ರಸ್ತೆಯಲ್ಲಿ ಸಿಕ್ಕಿರುವ ಮೋಬೈಲ್ ಅದರ ವಾರಸುದಾರರಿಗೆ ಒಪ್ಪಿಸಿರುವ ಶಿಕ್ಷಕ ಪ್ರಭುರಾವ ಬಾಳುರೆ ಅವರನ್ನು ಸಿಪಿಐ ರಘುವೀರಸಿಂಗ್ ಠಾಕೂರ ಹಾಗೂ ಉದಗಿರೆ ಕುಟುಂಬದ ಸದಸ್ಯರು ಸನ್ಮಾನ ಮಾಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಬಿಆರ್‌ಪಿ ಎಮ್ ಡಿ ನೈಮೋದ್ದೀನ್, ಪತ್ರಕರ್ತ ರವೀಂದ್ರ ಮುಕ್ತೆದಾರ, ಪ್ರಕಾಶ ಬರದಾಪೂರೆ, ಪ್ರವೀಣ ಕೋಳೆಕರ್, ಎಮ್ ಡಿ ಆಜಮ್, ಚಂದ್ರಕಾAತ ಬಿರಾದರ, ಶಂಕರ ತಿಮ್ಮಾ ಸೇರಿದಂತೆ ಇನ್ನಿತರರು ಇದ್ದರು.