
ಕಲಬುರಗಿ,ಜ.19: ನಗರದ ಅಳಂದ ರಸ್ತೆ ಸದ್ಗುರು ವಿಶ್ವಾರಾಧ್ಯ ದೇವಸ್ಥಾನದ 33 ನೇ ಜಾತ್ರಾ ಮಹೋತ್ಸವ ಜ.23 ರಂದು ನಡೆಯಲಿದೆ.ಅಂದು ಬೆಳಿಗ್ಗೆ 8.30 ಕ್ಕೆ ಮಹಾರುದ್ರಾಭಿಷೇಕ ನಡೆಯಲಿದೆ.ಸಂಜೆ 5 ಗಂಟೆಗೆ ಪಲ್ಲಕ್ಕಿ ಮಹೋತ್ಸವ ನಂತರ 6.30ಕ್ಕೆ ರಥೋತ್ಸವ ನಡೆಯಲಿದೆ.
ರಾತ್ರಿ 7 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ.ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದ ಪೂಜ್ಯ ಡಾ. ಗಂಗಾಧರ ಶಿವಾಚಾರ್ಯರು, ಕಡಗಂಚಿ ,ಶೇಖರೋಜಾ ಮಠದ ವೀರಭದ್ರಶಿವಾಚಾರ್ಯರು,ಇಂಡಿ ತಾಲೂಕು ಹಾವಿನಾಳ ಚರಂತಿಮಠದ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ,ಪಾಲಿಕೆ ಸದಸ್ಯ ಸಚಿನ ಕಡಗಂಚಿ,ಚಂದ್ರಕಾಂತ ಹಾವನೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು.ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಶ್ರೀ ಸತ್ವ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.ರಾತ್ರಿ 9 ಗಂಟೆಗೆ ರಸಮಂಜರಿ ನಡೆಯಲಿದೆ ಎಂದು ವಿಶ್ವಾರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ತಿಳಿಸಿದ್ದಾರೆ



























