ಮಠದ ತ್ರಿವಿಧ ದಾಸೋಹ ಶ್ಲಾಘನೀಯ:ಸಿದ್ದಲಿಂಗ ಸ್ವಾಮಿಜೀ

ಜೇವರ್ಗಿ:ಸೆ.1: ‘ಸಮಾಜದಲ್ಲಿ ಅಜ್ಞಾನ,ಮೌಡ್ಯ ತೊಲಗಬೇಕು. ವೈಚಾರಿಕತೆ ಬೆಳೆಯಬೇಕು ಎನ್ನುವ ಉದ್ದೇಶದಿಂದ ಸಮಾಜ ಸುಧಾರಣೆಗೆ ಸೊನ್ನ ಮಠದ ಶಿವಾನಂದ ಸ್ವಾಮೀಜಿ ಸಾಕಷ್ಟು ಶ್ರಮಿಸಿದ್ದಾರೆ. ಎಂದು ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸೊನ್ನ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠದಲ್ಲಿ ಲಿಂ. ಶಿವಾನಂದ ಶಿವಯೋಗಿಗಳ 46ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸೊನ್ನ ಮಠವು ಅಪರೂಪದ ಪರಂಪರೆಯನ್ನು ಹೊಂದಿದ್ದು, ತ್ರಿವಿಧ ದಾಸೋಹದ ಮೂಲಕ ಶ್ರೀಮಠವು ನಾಡಿನಾದ್ಯಂತ ಅದ್ಭುತ ಕೆಲಸಗಳನ್ನು ಮಾಡುತ್ತಿದೆ ಎಂದರು.

‘ಮಠಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಶಿವಾನಂದ ಸ್ವಾಮೀಜಿ ಅವರು ಚಿಕ್ಕವಯಸ್ಸಿನಲ್ಲಿಯೇ ಸೊನ್ನ ಮಠದ ಜವಾಬ್ದಾರಿ ವಹಿಸಿಕೊಂಡು, ಸುವರ್ಣಾಕ್ಷರದಲ್ಲಿ ಬರೆದಿಡುವಂತ ಕೊಡುಗೆ ಸಮಾಜಕ್ಕೆ ನೀಡಿದ್ದಾರೆ’ ಎಂದರು.
ಮಠದ ಪೀಠಾಧಿಪತಿ ಶಿವಾನಂದಜೇವರ್ಗಿ ತಾಲ್ಲೂಕಿನ ಸೊನ್ನದ ಮಠದಲ್ಲಿ ಆಯೋಜಿಸಿದ್ದ ಲಿಂ.ಶಿವಾನಂದ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಅನಾಥ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು
ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶ್ರೀಶೈಲ ಸಾರಂಗಮಠ ಹಾಗೂ ಕಲಬುರಗಿ ಸುಲಫಲ ಮಠದ ಪೀಠಾಧಿಪತಿ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.ನೆಲೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಜೇರಟಗಿ ವಿರಕ್ತಮಠದ ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಸೊನ್ನ ಶ್ರೀಗಳ ತ್ರಿಷಷ್ಠಿ- ಸಂಭ್ರಮ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹು ಸೀರಿ, ಸಮಾಜದ ತಾಲ್ಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಲಿಂ.ಬಸವರಾಜ ಮಾಸ್ತರ ಮುಧೋಳ ಸ್ಮರಣಾರ್ಥ ರೋಮೇಶ ಮುಧೋಳ ಅವರು ಅನಾಥ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿದರು. ಗದುಗಿನ ಪುಟ್ಟರಾಜ ಶಾಸ್ತ್ರೀಗಳು ಪ್ರವಚನ ದಾಸೋಹ ಗೈದರು. ತಾ.ಪಂ ಮಾಜಿ ಸದಸ್ಯ ಶಿವಾನಂದ ಸಾಹು ಮಾಕಾ, ಶಿವಲಿಂಗ ಮುಧೋಳ, ಎಸ್.ಎಸ್.ಸಲಗರ, ಶಿವಲಿಂಗಪ್ಪ ಅಕ್ಕಿ, ವಿಜಯಕುಮಾರ ಬಿರಾದಾರ, ಶಿವಕುಮಾರ ಮುಧೋಳ, ಪ್ರಕಾಶ ಸಾಹು ಮಾಕಾ, ಶರಣು ಮಣೂರ, ರೇವಣಸಿದ್ದಪ್ಪ ಅಕ್ಕಿ, ಗುರು ಧನ್ನೂರ, ಮಲ್ಲಿಕಾರ್ಜುನ ಬಿರಾದಾರ, ಸಿದ್ದು ಆಂದೋಲಾ ಸೇರಿ ಅನೇಕರಿದ್ದರು.