
ಕರಜಗಿ:ಜು.12:ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥತೆಯಿಂದ ಸೇವೆ ನೀಡುವ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದದ್ದು ಎಂದು ನಾಗಣಸೂರ ತುಪ್ಪಿನಮಠದ ಡಾ ಅಭಿನವ ಬಸವಲಿಂಗ ಮಹಾ ಸ್ವಾಮೀಜಿ ಹೇಳಿದರು
ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಅಡಿವೆಪ್ಪ ಕರಜಗಿ ಅವರ ವಯೋ ನಿವೃತ್ತಿ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ
ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ.ಅಡಿವೆಪ್ಪ ಕರಜಗಿ ಅವರು ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.ಅವರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು’ಎಂದು ಹೇಳಿದರು.
ಚವಡದಾಪುರಿ ಹಿರೇಮಠದ ಷ ಬ್ರ ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿ, ‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಜೀವನದುದ್ದಕ್ಕೂ ಶಿಕ್ಷಕ ಅಡಿವೆಪ್ಪ ಕರಜಗಿ ಅವರು ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿದ್ದಾರೆ.ಅವರ ಸೇವಾ ನಿವೃತ್ತಿ ಬದುಕು ಅತ್ಯಂತ ನೆಮ್ಮದಿಯಾಗಲಿ’ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಗುರು ನಿಂಗಪ್ಪ ಪೂಜಾರಿ ನಿವೃತ್ತ ಶಿಕ್ಷಕರಾದ ವಿಶ್ವನಾಥ ಕರೂಟಿ ಚಂದ್ರಕಾಂತ ನಾಟಿಕಾರ ಕಾಳಪ್ಪ ಸುತಾರ ಮುಖಂಡರಾದ ಅಣ್ಣಾರಾವ ಮುಜಗೊಂಡ ಸಿದ್ರಾಮಪ್ಪ ಹಿರೇಕುರುಬರ ಶರಣಬಸಪ್ಪ ಅಳ್ಳಗಿ ಮಲ್ಲಿಕಾರ್ಜುನ ಚಣೇಗಾಂವ ಹುಸೇನಬಾಷಾ ಮುಜಾವರ ಶ್ರೀಶೈಲ ಮ್ಯಾಳೇಶಿ ಸಂತೋಷ ಚವ್ಹಾಣ ಜಗದೇವಪ್ಪ ಸಾತಲಗಾಂವ ಸುಭಾಷ ಜೇವರ್ಗಿ,ಭೀಮಣ್ಣ ವಾಯಿ ಶಿವಶರಣಪ್ಪ ಸಂಗೋಳಗಿ ಎಸ್ ಡಿ ಎಂ ಸಿ ಅದ್ಯಕ್ಷ ಶಿವಪುತ್ರ ನಾವಾಡಿ ಸಾ ಸಿ ಬೆನಕನಹಳ್ಳಿ ಬಸವರಾಜ ವಾಯಿ ಅಪ್ಪಾಸಾಬ ಹೊಸೂರಕರ ಮಲ್ಲಿಕಾರ್ಜುನ ಬಾಗೇವಾಡಿ ಬಸವರಾಜ ಕರೂಟಿ ಗುರುರಾಜ ಬಾಕೆ ವೇಣುಮಾಧವ ಅವಧಾನಿ ಸಂತೋಷ ಅಲ್ಲಾಪೂರ ಉಮೇಶ ಭಾಸಗಿ ಶ್ರೀಕಾಂತ ನಿವರಗಿ ರಾಜಶೇಖರ ಪ್ಯಾಟಿ ಮಲಕಪ್ಪ ಕರಜಗಿ ಸೇರಿದಂತೆ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಇದ್ದರು































