
ಔರಾದ್ : ಡಿ.4:ಭಾರತದ ಸಂಸ್ಕೃತಿ ಸಂಸ್ಕಾರಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಿ ಆಚರಿಸುವ ಅಗತ್ಯವಿದೆ ಎಂದು ಶ್ರೀ ದತ್ತ ಸಾಯಿ ಶನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜ್ಯ ಶ್ರೀ ಷ.ಬೃ 108 ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ದತ್ತ ಜಯಂತಿ ನಿಮಿತ್ತ ಶ್ರೀ ದತ್ತ ಸಾಯಿ ಶನೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸಾಂಸ್ಕೃತಿಕ ಉತ್ಸವ ಹಾಗೂ ಶ್ರೀ ಗುರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ತಲತಲಾಂತರದಿಂದ ನಮ್ಮ ಪೂರ್ವಿಕರು ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಉಳಿಸಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ಮಕ್ಕಳಲ್ಲಿ ಕಲೆ, ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು. ಪ್ರತಿವರ್ಷ ನಮ್ಮ ದೇವಸ್ಥಾನದ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಜನ ಪಂಚರತ್ನರಿಗೆ ಶ್ರೀ ಗುರು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ ಮಹೇಶ ಪಾಟೀಲ ಅವರು ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಕಲೆಗೆ ಪೆÇ್ರೀತ್ಸಾಹಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಪಟ್ಟಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ ಕಂಡು ತುಂಬ ಖುಷಿಯಾಗಿದೆ. ಪೂಜ್ಯರ ಸಾರಥ್ಯದಲ್ಲಿ ಶ್ರೀ ದತ್ತ ಜಯಂತ್ಯುತ್ಸವ ಅದ್ಧೂರಿಯಾಗಿ ನೆರವೇರಲಿದೆ ಎಂದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐದು ಜನ ಸಾಧಕರಿಗೆ ಶ್ರೀ ಗುರು ಪ್ರಶಸ್ತಿ ಪ್ರದಾನ ಜರುಗಿತು. ಶಾಲಾ-ಕಾಲೇಜು. ಮಕ್ಕಳಿಂದ ಸಾಂಸ್ಕೃತಿಕ ಉತ್ಸವ ಜರುಗಿತು ವಿಜೇತ ಮಕ್ಕಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮುಕ್ತೆದಾರ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಕಿರಣ ಉಪ್ಪೆ, ಸಂಗಯ್ಯ ಸ್ವಾಮಿ, ಶರಣಪ್ಪ ಪಾಟೀಲ, ಡಾ.ನಾಗನಾಥ ಕೌಟಗೆ, ರಾಜಕುಮಾರ ಎಡವೆ, ಸಾಂಸ್ಕೃತಿಕ ಸಮಿತಿ ಸಂಯೋಜಕ ಆನಂದ ದ್ಯಾಡೆ, ಅಶೋಕ ಶೆಂಬೆಳ್ಳಿ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನಳಗೆ, ಸಂದೀಪ ಪಾಟೀಲ, ಅನಿಲ ಮೇತ್ರೆ, ಬಸವರಾಜ ಹಳ್ಳೆ ಸೇರಿದಂತೆ ಇನ್ನಿತರರಿದ್ದರು.
ಐದು ಜನ ಸಾಧಕರಿಗೆ ಶ್ರೀ ಗುರು ಪ್ರಶಸ್ತಿ ಪ್ರದಾನ
ದತ್ತ ಜಯಂತಿ ಹಾಗೂ 38ನೇ ಜಾತ್ರಾ ಮಹೋತ್ಸವ ನಿಮಿತ್ತ ತಾಲೂಕಿನ ವಿವಿಧ ಕ್ಷೇತ್ರದ ಐವರು ಸಾಧಕರನ್ನು ದತ್ತ ಸಾಯಿ ಶನೇಶ್ವರ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಕೊಡುವ ಶ್ರೀಗುರು ಪ್ರಶಸ್ತಿ ಪ್ರದಾನ ಜರುಗಿತು. ದತ್ತ ಸಾಯಿ ಶನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಪೂಜ್ಯ ಶ್ರೀ ಶಂಕರಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಡಾ. ವೈಜಿನಾಥ ಬುಟ್ಟೆ (ವೈದ್ಯಕೀಯ ಸೇವೆ), ಗುರುನಾಥ ವಡ್ಡೆ (ಸಮಾಜ ಸೇವೆ), ಜಗನ್ನಾಥ ಮೂಲಗೆ (ನಾಡು ನುಡಿ ಸೇವೆ), ಶಿವಾಜಿ ಪಾಟೀಲ್ (ಸಾವಯವ ಕೃಷಿ) ಹಾಗೂ ನಿವೃತ್ತ ಯೋಧ ಮಹಾದೇವ ಕೋಟೆ (ದೇಶ ಸೇವೆ) ಇವರಿಗೆ ಗೌರವಿಸಿ ಪ್ರಶಸ್ತಿ ನೀಡಲಾಯಿತು.
ಸಾಂಸ್ಕೃತಿಕ ಉತ್ಸವದಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ
ಪ್ರತಿವರ್ಷ ದತ್ತ ಜಯಂತಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಸಾಂಸ್ಕೃತಿಕ ಉತ್ಸವ ಈ ವರ್ಷವೂ ಅದ್ದೂರಿಯಾಗಿ ಜರುಗಿತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಥಮ ಸ್ಥಾನ ಪಡೆದ ರಾಯಲ್ ಆರ್ಕಿಡ್ ಶಾಲೆಯ ಮಕ್ಕಳಿಗೆ 11000, ದ್ವಿತೀಯ ಸ್ಥಾನ ಪಡೆದ ಸರಸ್ವತಿ ಪಬ್ಲಿಕ್ ಶಾಲೆ ಮಕ್ಕಳಿಗೆ 7000, ತೃತೀಯ ಸ್ಥಾನ ಪಡೆದ ಕಸ್ತೂರಬಾ ಗಾಂಧಿ ಶಾಲೆಯ ಮಕ್ಕಳಿಗೆ 5000 ನಗದು ಬಹುಮಾನ ನೀಡಲಾಯಿತು.































