Home ಜಿಲ್ಲೆ ಬಕ್ರೀದ ತ್ಯಾಗದ ಸಂಕೇತ:ಮೌಲಾನಾ ಫೈಸಲ ಸಕಾಪ ಖಾದ್ರಿಸಾದತ

ಬಕ್ರೀದ ತ್ಯಾಗದ ಸಂಕೇತ:ಮೌಲಾನಾ ಫೈಸಲ ಸಕಾಪ ಖಾದ್ರಿಸಾದತ

ವಿಜಯಪುರ:ಮೇ.೨೯: ಬಕ್ರೀದ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಇಬ್ರಾಹಿಂ ಅಲೆ ಸಲಾಮರವರ ಪ್ರೀತಿಯ ಮಗನಾದ ಇಸ್ಮಾಯಿಲ್ ಇವರನ್ನು  ದೇವರ ವಾಣಿಯಂತೆ ಬಲಿದಾನ ತೆಗೆದುಕೊಳ್ಳುವಾಗ ನಡೆದ ಘಟನೆ ಬಕ್ರೀದ ಹಬ್ಬದ ಪ್ರತೀಕವಾಗಿದೆ. 

ಇಂದು ವಿಜಯಪುರ ನಗರದ ಪವಿತ್ರ ಆಸಾರ ಮಹಲ ಶರೀಪದಲ್ಲಿ ನಡೆದ ಬಕ್ರೀದ ಹಬ್ಬದ ಪ್ರಾರ್ಥನೆಯಲ್ಲಿ ಆಶೀರ್ವಚನ ನೀಡುತ್ತ ಒಡಹುಟ್ಟಿದ ಮಗ ಇಸ್ಮಾಯಿಲನನ್ನು ತಂದೆಯಾದ ಇಬ್ರಾಹಿಂ ಅಲೆ ಸಲಾಮರವರು ದೇವರಿಗೆ ಸಮರ್ಪಣೆ ಮಾಡಲು ಮಗನ ಕುತ್ತಿಗೆಯ ಮೇಲೆ ಅಸ್ತçವನ್ನಿಟ್ಟು ಬಲಿದಾನ ಮಾಡುವಾಗ ದೇವರ ಕೃಪೆಯಂತೆ ಅಸ್ತç ನಡೆಯದೆ ಒಂದು ಪವಾಡವಾಗಿ ಪ್ರಾಣಿಯ ಬಲಿದಾನವಾಗಿದ್ದು ಇತಿಹಾಸದಲ್ಲಿ ಬರೆಯಲ್ಪಡುತ್ತದೆ.
ದೇವರ ಮಕ್ಕಳಾದ ನಾವುಗಳು ದೇವಭಯ ಹೊಂದಿರಬೇಕು. ನಾವೆಲ್ಲರೂ ದೇವರ ಕೃಪೆಯಿಂದ ಬದುಕಿ ಬಾಳುತ್ತಿದ್ದೇವೆ. ನಮ್ಮೆಲ್ಲರ ಕರ್ಮಗಳನ್ನು ದೇವನೊಬ್ಬ ಗಮನಿಸುತ್ತಿದ್ದಾನೆ. ದೇವರ ಮನೆಯಿದು. ಬಾಡಿಗೆದಾರರು ನಾವುಗಳೆಲ್ಲ ಎಂಬ ಮಾತಿನಂತೆ ವಸುದೇವ ಕುಟುಂಬಕA ಎಂಬ ವಿಚಾರದಲ್ಲಿ ನಂಬಿಕೆಯಿಟ್ಟು ಬದುಕಬೇಕಾಗಿದೆ.
ಎಲ್ಲ ಧರ್ಮಗಳು ಮಾನವ ಕುಲಕೋಟಿಗೆ ಸನ್ಮಾರ್ಗ ತೋರಿಸಿವೆ. ಅಸೂಯೆ ಮತ್ತು ದ್ವೇಷದಿಂದ ದೂರವಿದ್ದು ಪ್ರೀತಿ, ಮಮತೆ, ಸೌಹಾರ್ದತೆ ಸ್ಥಾಪನೆ ಮಾಡಬೇಕು. ಬಹುಭಾಷಿಕರ ದೇಶ ಭಾರತ ಬಹು ಧರ್ಮಿಯರ ದೇಶ ಭಾರತ, ಬಹು ಸಂಸ್ಕೃತಿಯ ದೇಶ ಭಾರತ ಎಲ್ಲ ಸಂಸ್ಕೃತಿ ಭಾಷೆ, ಧರ್ಮ ಗೌರವಿಸಬೇಕು. ಯುವಕರು ಜ್ಞಾನ ಸಂಪಾದನೆಗೆ ಪ್ರಾಧ್ಯಾನತೆ ನೀಡಬೇಕು. ಕುಟುಂಬದ ಪಾಲಕರ ಪೋಷಣೆ ಸಾಗಬೇಕು. ಆರ್ಥಿಕ ಸಬಲೀಕರಣದಲ್ಲಿ ನಂಬಿಕೆ ಇಡಬೇಕು ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಸೈಯ್ಯದ ಅಮೀದ ತಕಾಪಸಾದಾತ, ಸೈಯ್ಯದ ಮುಸ್ತಾಫಾಖಾದ್ರಿ ಸಾದಾತ, ಜಮೀರಅಹ್ಮದ ಬಾಗಲಕೋಟ, ಪಾಪಾ ಪೀರಜಾದೆ, ಹಾಸಿಂಪೀರ ಇನಾಮದಾರ, ಸೈಯ್ಯದ ಅತಿಕಪೀರಾಸಾದಾತ, ಜಾವಿದ ಕಿಲ್ಲೇದಾರ ಮುಂತಾದವರು ಉಪಸ್ಥಿತರಿದ್ದರು.