Home ಜಿಲ್ಲೆ ಪರಮಾತ್ಮನು ಜ್ಯೋತಿರ್ಲಿಂಗದ ಸ್ವರೂಪಿ:ಕೊಡೇಕಲ್ಲಶ್ರೀ

ಪರಮಾತ್ಮನು ಜ್ಯೋತಿರ್ಲಿಂಗದ ಸ್ವರೂಪಿ:ಕೊಡೇಕಲ್ಲಶ್ರೀ

ತಾಳಿಕೋಟೆ:ಫೆ.೧೫: ಪರಮಾತ್ಮನು ನಿರಾಕಾರಿಯಾಗಿದ್ದಾನೆ ಆತನು ಪ್ರತಿಯೊಂದು ವಸ್ತುವಿನಲ್ಲಿಯೂ ಪೂಜಿಸ್ಪಲ್ಪಡುವಂತಹ ಶಂಕರನಾಗಿದ್ದಾನೆ ಜ್ಯೋತಿರ್ಲಿಂಗದ ಸ್ವರೂಪಿಯಾಗಿರುವ ಪರಮಾತ್ಮನ್ನನ್ನು ಮಹಾಶಿವರಾತ್ರಿಯಂದು ಇಡೀ ವಿಶ್ವದಾಧ್ಯಂತ ನಿರಾಕಾರದಿಂದ ಪೂಜಿಸಲಾಗುತ್ತದೆ ಎಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಶನಿವಾರರಂದು ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಏರ್ಪಡಿಸಲಾದ ೧೨ ಜ್ಯೋತಿರ್ಲಿಂಗಗಳ ಭವ್ಯ ಮೇರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ಮಹಾ ಶಿವರಾತ್ರಿಯೂ ಎಲ್ಲಡೆಯಲ್ಲಿಯೂ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ ಉಪವಾಸ ವೃತದೊಂದಿಗೆ ಪರಮಾತ್ಮನಿಗೆ ಭಕ್ತಿಯನ್ನು ಸಮರ್ಪಿಸಿ ಸುಖಃ, ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಲಾಗುತ್ತದೆ ಭಾರತ ದೇಶದಲ್ಲಿಯೇ ಮಹಾ ಶಿವರಾತ್ರಿ ಅಮವಾಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಎಲ್ಲ ಜನರು ಆಚರಿಸುವಂತಹದ್ದಾಗಿದ್ದು ಇಂದು ನಮ್ಮ ಭಾರತ ದೇಶದಲ್ಲಿನ ೧೨ ಜ್ಯೋತಿರ್ಲಿಂಗಗಳನ್ನು ಗುರುತಿಸಿ ಅವುಗಳನ್ನು ತಯಾರಿಸಿ ಮೇರವಣಿಗೆಯ ಮೂಲಕ ಜನರಲ್ಲಿ ಭಕ್ತಿಯ ಜಾಗೃತಿಮೂಡಿಸುತ್ತಿರುವದು ವಿಶೇಷವಾಗಿದೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯವು ಪ್ರತಿವರ್ಷವೂ ಕೂಡಾ ಶಿವಜಯಂತಿ ಮಹೋತ್ಸವದೊಂದಿಗೆ ಆಚರಿಸುತ್ತಿರುವದು ಎಲ್ಲ ಜನರಿಗೆ ಸನ್ಮಾರ್ಗದ ದಾರಿ ತೋರಿಸಿದಂತಾಗಿದೆ ಎಂದರು.
ಇದೇ ಸಮಯದಲ್ಲಿ ಸುಮಾರು ೧೨ ಟ್ಯಾಕ್ಟರ್‌ಗಳಲ್ಲಿ ಸೇತುಬಂದು ರಾಮೇಶ್ವರ, ಉಜ್ಜಯಿನಿ ಮಹಾಕಾಶಿ, ಶ್ರೀ ವೈಧ್ಯನಾಥ, ಕಾಶಿವಿಶ್ವೇಶ್ವರ, ಶ್ರೀ ತ್ರೆöÊಂಭಕೇಶ್ವರ, ಶ್ರೀ ಓಂಕಾರೇಶ್ವರ, ಕೇದಾರನಾಥ, ಶ್ರೀ ಭೀಮೇಶ್ವರ, ಘೃಷ್ಣೇಶ್ವರ, ನಾಗೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ಸೋಮನಾಥ ಒಳಗೊಂಡ ಜ್ಯೋತಿರ್ಲಿಂಗಗಳನ್ನು ಸುಮಂಗಲೆಯರ ಕುಂಭ ಕಳಸದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮಾಡಲಾಯಿತು.
ಈ ಸಮಯದಲ್ಲಿ ನಾವದಗಿ ಬೃಹನ್ ಮಠದ ರಾಜಗುರು ಶ್ರೀ ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಒಳಗೊಂಡು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಬಳಗದವರು, ಒಳಗೊಂಡು ಭಕ್ತಾಧಿಗಳು ಪಾಲ್ಗೊಂಡಿದ್ದರು.