ಆಳಂದನ ರಾಷ್ಟ್ರೀಯ ಲೋಕಾದಲತ್ ಯಶಸ್ಸು

ಆಳಂದ: ಡಿ.16:ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಸಾಮರಸ್ಯ ಮತ್ತು ಸುಲಭ ನ್ಯಾಯದ ಸಂಕೇತವಾಗಿರುವ ರಾಷ್ಟ್ರೀಯ ಲೋಕಾದಲತ್ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಗಮನಾರ್ಹ ಯಶಸ್ಸು ಕಂಡಿದೆ.
ಈ ಲೋಕಾದಲತ್ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಅವರು ತಮ್ಮ ಅನುಭವಸಮೃದ್ಧ ನಾಯಕತ್ವದ ಮೂಲಕ ನೂರಾರು ಕುಟುಂಬಗಳು ಮತ್ತು ವ್ಯವಹಾರಿಗಳ ಜೀವನಗಳನ್ನು ಸುಲಭಗೊಳಿಸಿದ್ದಾರೆ.
ಒಟ್ಟು ಎರಡು ನ್ಯಾಯಾಲಯಗಳ 3250 ಪ್ರಕರಣಗಳಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡ 1239 ಪ್ರಕರಣಗಳಲ್ಲಿ 1122 ಪ್ರಕರಣ ಇತ್ಯರ್ಥಪಿಡಿಸಿದರೆ, ಸಿವಿಲ್ ನ್ಯಾಯಾಲಯದಲ್ಲಿ 2011 ಪ್ರಕರಣದಲ್ಲಿ 1744 ಪ್ರಕರಣ ಇತ್ಯರ್ಥ ಪಡಿಸಿ ಆದೇಶಿಸಿದ್ದಾರೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ನಾಲ್ಸಾ)ದ ವತಿಯಿಂದ ವಾರ್ಷಿಕವಾಗಿ ನಡೆಸಲಾಗುವ ನಾಲ್ಕನೇ ರಾಷ್ಟ್ರೀಯ ಲೋಕಾದಲತ್ ಆಳಂದದಲ್ಲೂ ನಡೆಸುವ ಮೂಲಕ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಸುಮನ್ ಚಿತ್ತರಗಿ ಅವರ ಅಧ್ಯಕ್ಷತೆಯಲ್ಲಿ ಎರಡೂ ನ್ಯಾಯಾಲಯಗಳ ಸಂಬಂಧಿತ ಪ್ರರಣ ಒಬ್ಬರೆ ಇತ್ಯರ್ಥ ಪಡಿಸಿಕೊಟ್ಟರು.
ನ. 20ರಂದು ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ನ್ಯಾಯಾಧೀಶೆ ಚಿತ್ತರಗಿ ಅವರು ಸ್ಥಳೀಯ ವಕೀಲರು, ವಿವಿಧ ಇಲಾಖೆ ಮತ್ತು ಕಾನೂನು ಸೇವಾ ಸಮಿತಿಯ ಸದಸ್ಯರೊಂದಿಗೆ ವಿವಿಧ ಪ್ರಕರಣಗಳ ಆಯ್ಕೆ ಮತ್ತು ಸಂಧಾನ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದ್ದರು. “ಲೋಕಾದಲತ್ ಕೇವಲ ನ್ಯಾಯಾಲಯದ ಕೆಲಸವಲ್ಲ, ಸಮಾಜದ ಸಾಮರಸ್ಯಕ್ಕಾಗಿ ನಾವು ಎಲ್ಲರೂ ಜವಾಬ್ದಾರಿಯಾಗಿರಬೇಕು” ಎಂದು ಅವರು ಸಭೆಯಲ್ಲಿ ಹೇಳಿದ್ದರು. ಈ ಸಿದ್ಧತೆಯಿಂದಾಗಿ, ಲೋಕಾದಲತ್‍ಗೆ ಮುಂಚಿತವಾಗಿ ಹಲವು ಪ್ರಕರಣಗಳನ್ನು ಗುರುತಿಸಲಾಗಿತ್ತು, ಆದರೆ ಸಂಧಾನಕ್ಕೆ ಒಳಗಾಗದ ಕೆಲವು ಪ್ರಕರಣಗಳು ಸಹ ಬಾಕಿ ಉಳಿದಿವೆ.
ನ್ಯಾಯಾಧೀಶೆ ಚಿತ್ತರಗಿ ಅವರು ಅನುಭವದೊಂದಿಗೆ ಈ ಲೋಕಾದಲತ್‍ನ್ನು ನಿರ್ವಹಿಸಿದರು. ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ನಡೆದ ಈ ಸತ್ಸಂಧಾನದಲ್ಲಿ ಅವರು ವೈಯಕ್ತಿಕವಾಗಿ ಪಕ್ಷಕಾರರೊಂದಿಗೆ ಮಾತನಾಡಿ ಸಂಧಾನಕ್ಕೆ ಪೆÇ್ರೀತ್ಸಾಹಿಸಿದರು. “ನ್ಯಾಯಾಲಯದ ಬಾಗಿಲಿಗೆ ಬಂದವನನ್ನು ಖುಷಿಯಿಂದ ಕಳುಹಿಸಬೇಕು, ಅದಕ್ಕೆ ಸಂಧಾನವೇ ಏಕೈಕ ಮಾರ್ಗ” ಎಂದು ಅವರು ಪಕ್ಷಕಾರರಿಗೆ ಉಪದೇಶಿಸಿದರು.
ಪ್ರಮುಖವಾಗಿ, ಜಮೀನು ವಿವಾದಗಳು, ಕುಟುಂಬ ಕಲಹಗಳು, ಬ್ಯಾಂಕ್ ಋಣ ಸಂಬಂಧಿತ ವಿವಾದಗಳು, ಮನೆ ವ್ಯವಹಾರದ ಪ್ರಕರಣ, ಚೆಕ್‍ಬೌನ್ಸ್ ಪ್ರಕರಣ, ನಿರ್ವಣೆ ವೆಚ್ಚದ ಪ್ರಕರಣ, ಮಹಿಳಾ ದೌರ್ಜನ್ಯ ಪ್ರಕರಣ,ಜನನ ಮತ್ತು ಮರಣ ಪ್ರಕರಣ ಸೇರಿ ಹಲವು ಪ್ರಕರಣಗಳು ಸಂಧಾನ ಮೂಲಕ ಇತ್ಯರ್ಥಗೊಳಿಸಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲ ರಾಠೋಡ, ಕಾರ್ಯದರ್ಶಿ ಬಿ.ಟಿ, ಸಿಂಧೆ, ಸರ್ಕಾರಿ ವಕೀಲ ಇಸ್ಲಾಲ್ ಪಟೇಲ್ ಮತ್ತು ಜೋತಿ ಬಂದಿ ಸೇರಿದಂತೆ ಇನ್ನಿತರ ಹಿರಿಯ ಕಿರಿಯ ನ್ಯಾಯವಾದಿಗಳು ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು ಮತ್ತು ಸಂಬಂಧಿತ ಕಕ್ಷಿದಾರರು ಇದ್ದರು.