Home ಜಿಲ್ಲೆ ಕಲಬುರಗಿ ಜಿಲ್ಲೆ ಅಭಿವೃದ್ದಿಗಾಗಿ ನಡೆಸಬೇಕಿದ್ದ ಹೋರಾಟ ಮುಂದೂಡಿಕೆ:ಕಲ್ಲೂರ

ಜಿಲ್ಲೆ ಅಭಿವೃದ್ದಿಗಾಗಿ ನಡೆಸಬೇಕಿದ್ದ ಹೋರಾಟ ಮುಂದೂಡಿಕೆ:ಕಲ್ಲೂರ

ಕಲಬುರಗಿ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಗರಣಗಳ ಆಗರವಾಗಿದೆ. ಕಲಬುರಗಿ ಸೇರಿದಂತೆ ರಾಜ್ಯಾದಾದ್ಯಂತ ಅಭಿವೃದ್ಧಿಯಲ್ಲಿ ಶೂನ್ಯ ಸುತ್ತಿರುವ ಈ ಕಾಂಗ್ರೆಸ್ ಸರಕಾರ ದಲಿತ, ಹಿಂದೂ ವಿಶ್ವಕರ್ಮ ವಿರೋಧಿ ಸರ್ಕಾರವಾಗಿದೆ ಇದನ್ನು ಖಂಡಿಸಿ ಜೂನ್ 10ರಂದು ನಡಿಯಬೇಕಿದ್ದ ಹೋರಾಟ ಮೂಂದೂಡಲಾಗಿದೆ ಎಂದು ಬಿಜೆಪಿ ಓಬಿಸಿ ಘಟಕದ ನಗರ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ದೇವೆಂದ್ರ ದೇಸಾಯಿ ಕಲ್ಲೂರ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿ ಸ್ವೀಕರಿಸಿದ ಅವಸರದಲ್ಲಿ ಮಾಡಿರುವ ಘೋಷಣೆಗಳು ಜನರಿಗೆ ದಾರಿ ತಪ್ಪಿಸುವಂತಾಗಿವೆ. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್ ಮಟ್ಟದಲ್ಲಿ ಭಾರತ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಆದರೆ ಸಿಎಂ ಡಿಕೆಶಿಯವರ ಉದ್ದೇಶ ಯುವಕರನ್ನು ಸಂಘಟಿಸಿ ಸ್ಥಳೀಯ ಮಟ್ಟದಲ್ಲಿ ಚಟುವಟಿಕೆಗಳನ್ನು ನಡೆಸುವುದು ಅಲ್ಲ, ಇದು ಸಮಾಜದಲ್ಲಿ ಒಡಕು ಮೂಡಿಸುವ ಹಾಗೂ ಯುವಕರ ದಾರಿ ತಪ್ಪಿಸವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಸುಮಾರು 10ಸಾವಿರ ಯುವ ಸಂಘಗಳು ಮಾಡಬೇಕು. ಪ್ರತಿ ಸಂಘದಲ್ಲಿ 150ರಿಂದ 200 ಯುವಕರು ಇರುವಂತೆ ಯೋಜನೆ ಆಗಿದೆ ಎಂದು ಹೇಳಿರುವ ಸಿಎಂ ಅವರಿಂದ ಗ್ರಾಮ ಮಟ್ಟದಲ್ಲಿ ಯುವಕರನ್ನು ಸೆಳೆಯುವ ಉದ್ದೇಶವಾಗಿದೆ ಹೊರತು ಇದರಿಂದ ಯಾವುದೇ ಅಭಿವೃದ್ಧಿ ಪರವಾದ ಯೋಜನೆಯಲ್ಲ ಎಂದು ಕಿಡಿಕಾರಿದ್ದಾರೆ.
ಭಾರತ ಜೋಡೋ ಸಂಘದಿಂದ ಕಾಂಗ್ರೆಸ್ ಸರಕಾರ ಜನರಿಂದ ಸಂಗ್ರಹಮಾಡಿಕೊಂಡಿರುವ ತೆರಿಗೆ ಹಣವನ್ನು ವ್ಯರ್ಥ ಮಾಡುವುದು ಬಿಟ್ಟು, ಸಮಸ್ಯೆಗಳ ಆಗರವಾಗಿರುವ ರಾಜ್ಯದ ಪ್ರತಿ ನಗರ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಶುದ್ದ ಕುಡಿಯುವ ನೀರಿನ ಸೌಕರ್ಯ, ರಸ್ತೆ ಡಾಂಬರೀಕರಣ, ಶಾಲೆಗಳ ಕಟ್ಟಡ ದುರಸ್ತಿ, ಬಸ್, ವಿದ್ಯುತ್ ಸಂಪರ್ಕ ಸೇರಿದಂತೆ ವಿದ್ಯಾರ್ಥಿಗಳಿಗೆ ನೆರವಾಗುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ದೇವೇಂದ್ರ ದೇಸಾಯಿ ಕಲ್ಲೂರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.