Home ಜಿಲ್ಲೆ ಕಾರಂಜಾ ರೈತ ಸಂತ್ರಸ್ತರ ನ್ಯಾಯತವಾದ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಹೋರಾಟ ಸಮಿತಿಯ ಒತ್ತಾಯ

ಕಾರಂಜಾ ರೈತ ಸಂತ್ರಸ್ತರ ನ್ಯಾಯತವಾದ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಹೋರಾಟ ಸಮಿತಿಯ ಒತ್ತಾಯ

ಬೀದರ:ಏ.9:ಕಾರಂಜಾ ರೈತ ಸಂತ್ರಸ್ಥರ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಸರ್ಕಾರ ತಕ್ಷಣ ಸ್ಪಂದಿಸಿ ಕಾರಂಜಾ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಹಣ ಘೋಷಣೆ ಮಾಡಲು, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿಯವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬರುವ ದಿನಾಂಕ 11.4.26 ರಂದು ಬೀದರ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರಂಜಾ ರೈತ ಸಂತ್ರಸ್ತರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕಾರಂಜಾ ರೈತ ಸಂತ್ರಸ್ತರು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬೀದರನಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತನ್ನ ಸಂಪೂರ್ಣ ಬೆಂಬಲ ಸೂಚಿಸಿದೆ, ಅಷ್ಟೆ ಅಲ್ಲದೆ ಎಪ್ರಿಲ್ 11 ರಂದು ನಡೆಯುವ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸುವುದಾಗಿ ಸಮಿತಿ ಮುಖಂಡರಾದ ದೇಶಮುಖ,ದಸ್ತಿ,
ಪೆÇ್ರ.ಆರ್ ಕೆ.ಹುಡಗಿ, ಪೆÇ್ರ.ಬಸವರಾಜ ಕುಮ್ನೊರ್,ಡಾ.ಬಸವಾರಜ ಗುಲಶೆಟ್ಟಿ ಮನೀಷ್ ಜಾಜು ಡಾ.ಮಾಜಿದ ದಾಗಿ ಡಾ.ಗಾಂಧೀಜೀ ಮೋಳಕೇರೆ,ಅಸ್ಲ ಚೌಂಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.