Home ಜಿಲ್ಲೆ ಕೃಷ್ಣ ಜನ್ಮಾಷ್ಟಮಿಗೆ ಪಾತ್ರಧಾರಿಗಳ ಮೆರುಗು

ಕೃಷ್ಣ ಜನ್ಮಾಷ್ಟಮಿಗೆ ಪಾತ್ರಧಾರಿಗಳ ಮೆರುಗು

ಬೀದರ್: ಇಲ್ಲಿಯ ಓಡವಾಡದ ನಿಸರ್ಗ ಕಾನ್ವೆಂಟ್ ಸ್ಕೂಲ್‌ನಲ್ಲಿ ಶುಕ್ರವಾರ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಕೃಷ್ಣ ಹಾಗೂ ರಾಧೆ ವೇಷಧಾರಿ ಮಕ್ಕಳು ಮೆರುಗು ನೀಡಿದರು.
ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನ ರಂಜಿಸಿದವು.ಶಾಲೆಯ ಅಧ್ಯಕ್ಷ ಅಮಿತ್ ಸೋಲಪುರ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯಶಿಕ್ಷಕಿ ಶ್ರುತಿ ಬರಗಲೆ, ಶಿಕ್ಷಕಿಯರಾದ ಪ್ರಿಯಾಂಕಾ, ಅಶ್ವಿನಿ, ಭವಾನಿ, ಪೂಜಾ, ಅನಿತಾ ಇದ್ದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.