
ಕಲಬುರಗಿ,ಜ.23-“ಭಾಷೆಯ ಆತ್ಮವೇ ಜನರ ಆತ್ಮ. ಭಾಷೆ ನಮ್ಮ ಇತಿಹಾಸ, ಸಂಸ್ಕøತಿ ಮತ್ತು ಜಗತ್ತಿನ ದೃಷ್ಟಿಕೋನವನ್ನು ನಿರ್ಧರಿಸುತ್ತದೆ. ಭಾಷೆ ಮತ್ತು ನಾಗರಿಕತೆ ನಾಣ್ಯದ ಎರಡು ಮುಖಗಳಂತೆ. ಸಂಸ್ಕೃತಿಯಾಗಿ ಭಾಷೆ ನಮ್ಮನ್ನು ಒಂದಾಗಿಸುತ್ತದೆ. ವಿವಿಧ ಹಬ್ಬಗಳಲ್ಲಿ ಬಳಸುವ ಭಾಷೆಗಳು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಈ ವಿಶಿಷ್ಟ ಲಕ್ಷಣ ಪಾಶ್ಚಾತ್ಯ ದೇಶಗಳಲ್ಲಿ ಕಾಣಿಸುವುದಿಲ್ಲ. ಪ್ರಾದೇಶಿಕ ಭಾಷೆಗಳು ನಮ್ಮಲ್ಲಿ ಏಕತೆಯನ್ನು ನಿರ್ಮಿಸಲು ಸಹಕಾರಿಯಾಗುತ್ತವೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿಯೂ ಬೆಂಬಲಿತವಾಗಿದೆ” ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆಯಲ್ಲಿ “ಭಾರತೀಯ ಭಾಷಾ ಪರಿವಾರ: ಭಾಷಾ ವಿಜ್ಞಾನದಲ್ಲಿ ಹೊಸ ರೂಪರೇಖೆ” ವಿಷಯ ಕುರಿತು ನಡೆದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಅವರು ಮಾತನಾಡಿದರು.
ಮುಖ್ಯ ಭಾಷಣಕಾರರಾದ ಹೈದರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಭಾಷಾವಿಜ್ಞಾನ ಪ್ರಾಧ್ಯಾಪಕರಾದ ಪೆÇ್ರ. ಜೆ. ಪ್ರಭಾಕರ ರಾವ್ ಅವರು, ಮಾತನಾಡಿ, “ಭಾಷೆಗಳ ಕ್ಲಿಷ್ಟತೆಯಿಂದ ಸಮಾಜ ಸಂಕಷ್ಟ ಅನುಭವಿಸುತ್ತದೆ. ಆದರೆ ವಸಾಹತುಶಾಹಿ ಕಾಲದಿಂದಲೂ ಭಾರತದಲ್ಲಿ ಭಾಷಾ ಸಂಕಷ್ಟ ಕಂಡುಬಂದಿಲ್ಲ. ಆದ್ದರಿಂದ ಎಲ್ಲಾ ಭಾಷೆಗಳು ಭಾರತದಲ್ಲಿ ಸಹಜವಾಗಿ ಅಸ್ತಿತ್ವದಲ್ಲಿವೆ. ಭಾಷಾ ವೈವಿಧ್ಯತೆ ದೇಶದ ಜಿಡಿಪಿಗೆ ಬೆಂಬಲ ನೀಡುತ್ತದೆ. ಇದು ರಾಷ್ಟ್ರದ ಸಂಸ್ಕೃತಿ ಮತ್ತು ಶಕ್ತೀಕರಣಕ್ಕೂ ಸಹಕಾರಿಯಾಗಿದೆ. ಭಾಷಾ ವೈವಿಧ್ಯತೆಯ ಮೂಲಕ ಏಕತೆಯಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುವುದರಲ್ಲಿ ಭಾರತ ಶ್ರೇಷ್ಠ ಉದಾಹರಣೆ” ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪೆÇ್ರ. ಭೀಮರಾವ್ ಪಾಂಡ ಭೋಸಲೆ ಅವರು ತಮ್ಮ ಕಲ್ಪನಾ ಪತ್ರಿಕೆಯಲ್ಲಿ,”ವಸಾಹತು ಕಾಲವು ಆಳ್ವಿಕಾರರ ಸಾಮ್ರಾಜ್ಯಶಾಹಿ ಕಾಲವಾಗಿತ್ತು. ಆಕ್ರಮಣಕಾರರು ನಮ್ಮಹಿತಾಸಕ್ತಿಗೆ ವಿರುದ್ಧವಾಗಿ ಭಾಷೆಗಳನ್ನು ನಾಶಮಾಡಿದರು, ಶೋಷಿಸಿದರು ಮತ್ತು ಅವಮೌಲ್ಯಗೊಳಿಸಿದರು. ಭಾರತವು ಸಮಗ್ರತೆಯನ್ನು ಪ್ರತಿನಿಧಿಸುತ್ತದೆ. ಏಕತೆಯಲ್ಲಿ ವೈವಿಧ್ಯತೆಯ ನಮ್ಮ ಉನ್ನತ ಮೌಲ್ಯಗಳನ್ನು ಪುನರ್ ವ್ಯಾಖ್ಯಾನ ಮಾಡುವ ಕಾಲ ಇದು. ನಮ್ಮ ಭಾಷಾ ಸಂಸ್ಕೃತಿಯ ಪುನರ್ ವ್ಯಾಖ್ಯಾನವು ಎರಡನೇ ಪುನರುತ್ಥಾನ ಮತ್ತು ಎರಡನೇ ಪ್ರಬೋಧನ ಕಾಲವಾಗುತ್ತದೆ. ಈ ಪ್ರಬೋಧನ ಯುಗದ ಮೂಲಕ ಭಾರತ ನ್ಯಾಯ, ಧರ್ಮನಿರಪೇಕ್ಷತೆ, ಸ್ವಾತಂತ್ರ್ಯ ಮತ್ತು ಮುಕ್ತಿಯ ಸಂದೇಶದೊಂದಿಗೆ ಏಕತೆಯನ್ನು ಸಾರುತ್ತದೆ” ಎಂದು ಹೇಳಿದರು.
ಸಮ್ಮೇಳನ ಸಂಯೋಜಕರಾದ ಡಾ. ಅಂಜನೇಯುಲು ಘಂಡಾಪುರಂ ಅವರು ಸಭೆಯನ್ನು ಸ್ವಾಗತಿಸಿದರು. ಡಾ. ಮಡಾ ಶ್ರೀಲತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಜಯದೇವಿ ಜಂಗಮಶೆಟ್ಟಿ ಮತ್ತು ಡಾ. ಸ್ವಪ್ನಿಲ್ ಅವರು ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನವನ್ನು ಹಾಡಿದರು. ಡಾ. ಮಂಜುಲಾಕ್ಷಿ ಅವರು ಧನ್ಯವಾದ ಪ್ರಸ್ತಾಪ ಮಾಡಿದರು. ಮಾನವಿಕ ಶಾಸ್ತ್ರಗಳು ಮತ್ತು ಭಾಷೆಗಳ ಡೀನ್ ಪೆÇ್ರ. ವಿಕ್ರಮ್ ವಿಸಾಜಿ, ನೋಡಲ್ ಅಧಿಕಾರಿ ಸಂದೀಪ್ ರನ್ಬೀರ್ಕರ್, ಪೆÇ್ರ. ಬಸವರಾಜ್ ಡೊನೂರ, ಪೆÇ್ರ. ಅಂಗಡಿ,, ಡಾ. ತಾರಿಕ್ ಖಾನ್, ಡಾ. ರಾಜಶ್ರೀ, ಡಾ. ಭಾವನಾ, ಎಲ್ಲಾ ಡೀನ್ಗಳು, ವಿಭಾಗಾಧ್ಯಕ್ಷರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಈಸಮ್ಮೇಳನದಲ್ಲಿ ಭಾಗವಹಿಸಿದ್ದರು.























