ಗುರು ಕೃಪೆಯಿಂದಲೇ ಬಯಲ ಬೆಳಗು

ಅಮ್ಮಿನಭಾವಿ,ಆ.16: ಗುರುಕೃಪೆಯಿಂದಲೇ ಬಯಲ ಬೆಳಗು ಸಾಧ್ಯವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಮ್ಮ ಶ್ರೀಮಠದಲ್ಲಿ ಭಕ್ತ ಸಮೂಹ ಹಮ್ಮಿಕೊಂಡಿದ್ದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 92ನೆಯ ವರ್ಧಂತಿ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.


ಮುಖ್ಯ ಅತಿಥಿಯಾಗಿದ್ದ ಮೊರಬ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾತನಾಡಿದರು. ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಆಶಿರ್ವಚನ ನೀಡಿದರು. ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು.


ಶೋಭಾ ಯರಗಂಬಳಿಮಠ, ಪ್ರೇಮಾ ಶಿವಪ್ಪ ರುದ್ರಾಪೂರ, ಬಿ.ಸಿ. ಕೊಳ್ಳಿ, ಪವನಕುಮಾರ ಮಲ್ಲಿಕಾರ್ಜುನ ಕುಸೂಗಲ್ಲ, ಸುನೀಲ ಗುಡಿ, ಬಸಪ್ಪ ಉಗರಗೋಳ, ವಿಜಯನಗರ ಜಿಲ್ಲೆ ಹೊಳಗುಂದಿಯ ಗುರುಬಸವರಾಜ ಮತ್ತೂರಮಠ, ಅಕ್ಕಮಹಾದೇವಿ ಯರಗಂಬಳಿಮಠ, ಎಸ್.ಎಂ. ಪ್ರಶಾಂತರಾಜಗುರು, ಅವರಿಂದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರ 9 ತುಲಾಭಾರಗಳು ಜರುಗಿದವು.
ಸುರೇಂದ್ರ ದೇಸಾಯಿ, ಎಂ.ಸಿ. ಹುಲ್ಲೂರ, ಉಮೇಶ ಶಿರಕೋಳ, ಅಪ್ಪಣ್ಣ ದೇಶಪಾಂಡೆ, ಮಲ್ಲಪ್ಪ ಕುಸೂಗಲ್ಲ, ಶಿವಪ್ಪ ಹಂಚಿನಾಳ, ಬಸಣ್ಣ ಯಡಳ್ಳಿ, ಹಾರೋಬೆಳವಡಿಯ ರಾಮಣ್ಣ ಜಕ್ಕಣ್ಣವರ, ಶಾಂತಾದೇವಿ ಪುರಾಣಮಠ, ಪಿ.ಎಸ್. ಪತ್ರಾವಳಿ, ಟಿ.ಎಂ.ದೇಸಾಯಿ ಶ್ರೀಶಾಂತಲಿಂಗ ಶಿವಾಚಾರ್ಯರನ್ನು ಗೌರವಿಸಿದರು.