ಹೇಮನೂರ ಮೌನ ತಪಸ್ವಿ: ಬಸವರಾಜ ಪಾಟೀಲ ಸೇಡಂ

ಕಲಬುರಗಿ,ಜ.5-ನರಸಿಂಗರಾವ ಹೇಮನೂರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮೌನ ತಪಸ್ವಿಗಳು ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ, ಕಮಲಾಪೂರ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಹಾಗೂ ಹೇಮನೂರ ಪರಿವಾರ ಅಭಿಮಾನಿಗಳ ಬಳಗದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಅವರ ‘ಮಂದಾರ’ ಸಮಗ್ರ ಸಾಹಿತ್ಯ ಸಂಪುಟ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪೂಜ್ಯ ಅಜೇಂದ್ರ ಮಹಾಸ್ವಾಮಿಗಳು, ಅಳ್ಕೊಳ್ಳಿಯ ನಾಗಪಯ್ಯ ಮಹಾಸ್ವಾಮಿ, ಪೂಜ್ಯ ಸುರೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿದ್ಯವಹಿಸಿದ್ದರು. ಸಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಪಿ. ಬಿ.ಬಡಿಗೇರ ಕೃತಿ ಲೋಕಾರ್ಪಣೆ ಮಾಡಿ, ಸಮಾಜದಲ್ಲಿ ಪುಸ್ತಕ ಸಂಸ್ಕ್ರತಿ ಬೆಳೆಯಬೇಕೆಂಬ ಅಭಿಪ್ರಾಯಪಟ್ಟರು. ಕನ್ನಡ ಪ್ರಾಧ್ಯಾಪಕ ಡಾ. ವೀರೇಶ್ ಬಡಿಗೇರ ಅವರು ಕೃತಿ ಪರಿಚಯ ಮಾಡಿದರು.
ಶ್ರೀಮತಿ ಸಾವಿತ್ರಮ್ಮ ನರಸಿಂಗರಾವ ಹೇಮನೂರ ದಂಪತಿಗಳು, ಸೇಡಂನ ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್.ನಿರಗುಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಸದಸ್ಯ ಭೀಮಣ್ಣ ಬೋನಾಳ, ಸಾಹಿತಿ ರಾಜೇಂದ್ರ ಬಡಿಗೇರ, ವೀರಭದ್ರಪ್ಪ ಬೆಂಗಳಿ ಇತರರು ವೇದಿಕೆಯಲ್ಲಿದ್ದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಂಪಾದಕರಾದ ಭೀಮಸೇನ ಬಡಿಗೇರ, ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ಜನಾರ್ಧನ ಹೇಮನೂರ ಇದ್ದರು.
ಮಧ್ಯಾಹ್ನದ ಗೋಷ್ಠಿಯಲ್ಲಿ ಹಾಲಕ್ಷ್ಮಿಕಾಂತ ಸಂಚಾರ ಹೇಮನೂರ ಕಾವ್ಯ ಕುರಿತು ಹಾಗೂ ಮಹಿಪಾಲರೆಡ್ಡಿ ಮುನ್ನೂರ ಅವರು ಹೇಮನೂರ ವ್ಯಕ್ತಿತ್ವದ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರಭಾಕರ ಜೋಶಿ ವಹಿಸಿದ್ದರು. ನಂತರ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭನಡೆಯಿತು. ಸಾಹಿತಿ ದತ್ತಾತ್ರೇಯ ವಿಶ್ವಕರ್ಮ ಸಮಾರೋಪ ನುಡಿಗಳನ್ನು ಆಡಿದರು.
‘ಮಂದಾರ’ ಗ್ರಂಥಕ್ಕೆ ಲೇಖನಗಳನ್ನು ಬರೆದ ಲೇಖಕರಿಗೆ ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾಜದ ಬಳಗದವರು, ಹಿರಿಯ-ಯುವ ಲೇಖಕರು, ಸಾಹಿತ್ಯಾಭಿಮಾನಿಗಳು, ಹಲವಾರು ಹೇಮನೂರ ಬಂಧುಗಳು ಅವರ ಅನೇಕರು ಭಾಗವಹಿಸಿದ್ದರು. ಹೇಮನೂರ ಅವರಿಗೆ ಅನೇಕರು ಸನ್ಮಾನಿಸಿದರು.