ಹಾರಕೂಡ ಶ್ರೀಗಳ ತುಲಾಭಾರ

ಹುಮನಾಬಾದ್ :ಜೂ.9: ತಾಲೂಕಿನ ಕುಮಾರ ಚಿಂಚೋಳಿ ಗ್ರಾಮದ ಶ್ರೀಕಾಂತ ಹುಣಜಿ ಅವರ ನಿವಾಸದಲ್ಲಿ ಭಾನುವಾರ ಮಾಜಿ ಸಚಿವ. ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ಹಾರಕೂಡ ಶ್ರೀಮಠದ ಡಾ. ಚನ್ನವೀರ ಶಿವಾಚಾರ್ಯರ ತುಲಾಭಾರ ಕಾರ್ಯಕ್ರಮ ವೈಭವದಿಂದ ಜರುಗಿತು.

ಧಾರ್ಮಿಕರ ವಿಧಿ ವಿಧಾನದಂತೆ ವಿಶೇಷ ಪೂಜೆ ಸಲ್ಲಿಸಿ ತುಲಾಭಾರ ಕಾರ್ಯಕ್ರಮ ನೆರವೇರಿಸಲಾಯಿತು. ಬಳಿಕ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಹಾರಕೂಡ ಶ್ರೀಗಳ ಪಾದ ಪೂಜೆ ನೆರವೇರಿಸಿ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಫ್ಸರಮಿಯ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಜಮಗಿ, ಜಿಪಂ. ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ತಾಪಂ. ಮಾಜಿ ಅಧ್ಯಕ್ಷ ಶಿವರಾಜ ಗಂಗಶಟ್ಟಿ, ಉಸ್ಮಾನಖಾನ್, ಚನ್ನಬಸಪ್ಪ ಹುಣಜಿ, ಬಸವರಾಜ ಹುಣಜಿ, ಶ್ರೀನಿವಾಸ ಹುಣಜಿ, ಶಿವಕುಮಾರ ಬೆಳಕೇರಾ, ನಾಗಬಸಯ್ಯ ಸ್ವಾಮಿ, ವೈಜಿನಾಥ ದಳಪತಿ, ಬಾಬಾ ಖಾನ್ ಸೇರಿ ಅನೇಕರಿದ್ದರು.