Home ಜಿಲ್ಲೆ ಬೆಂಗಳೂರು ಸಂತ ಸರ್ವಜ್ಞ ಜ್ಞಾನದ ಮೇರು ಪರ್ವತದಂತ ಮಹಾ ಮೇದಾವಿ

ಸಂತ ಸರ್ವಜ್ಞ ಜ್ಞಾನದ ಮೇರು ಪರ್ವತದಂತ ಮಹಾ ಮೇದಾವಿ

ಕೋಲಾರ,ಫೆ,೨೧- ಸಂತ ಸರ್ವಜ್ಞ ಸರ್ವವನ್ನು ಅರಿತ ಜ್ಞಾನದ ಮೇರು ಪರ್ವತ ಎಲ್ಲ ವಿಷಯಗಳ ಜ್ಞಾನವನ್ನು ಹೊಂದಿರುವಂತ ಮೇಧಾವಿಯಾಗಿದ್ದನು. ಯುಗ ಪುರುಷ ಬಸವಣ್ಣನ ನಂತರದಲ್ಲಿರುವ ಹಿರಿಯ ವಚನಗಾರ. ಸಮಜಕ್ಕೆ ನೀತಿ ರೀತಿಗಳ ಜೀವನ ಶೈಲಿ ಆಚಾರ ವಿಚಾರ ನಡೆ ನುಡಿಗಳ ಬಗ್ಗೆ ಮಾರ್ಗದರ್ಶನ ನೀಡಿದಂತ ಮಹಾದರ್ಶನಿಕ ಎಂದು ಜಿಲ್ಲಾ ಸಹಾಯಕ ಕಮಿಷನರ್ ಜಂಬಕ ರೇಣುಕಾ ಪ್ರಸಾದ್ ದಿಲೀಪ್ ತಿಳಿಸಿದರು.


ಜಿಲ್ಲಾಡಳಿತ , ಜಿಲ್ಲಾಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ಸಂತ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಸರ್ವಜ್ಞ ಯವೂದೇ ಜಾತಿ,ಮತ, ಧರ್ಮ ಗಳಿಗೆ ಸೀಮಿತವಾಗಿರಲಿಲ್ಲ. ಮಾನವನ ಬದುಕಿಗೆ ಪೂರಕವಾದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ವಚನಗಳ ಮೂಲಕ ಮಾರ್ಗದರ್ಶನ ನೀಡಿರುವುದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಸಾರ್ಥಕತೆಯ ಬದುಕು ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು


ಸಮುದಾಯದವರ ನಿವೇಧನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ವತಿಯಿಂದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಅವರು ಸಮುದಾಯಗಳು ಮಹತ್ವರವಾದ ವಿಷಯಗಳಿಗೆ ಮಾತ್ರ ಹೋರಾಟಗಳನ್ನು ಕೈಗೆತ್ತಿ ಕೊಳ್ಳ ಬೇಕು ಸಮುದಾಯದ ಸಂಘಟನೆಗಳಲ್ಲಿ ಯಾವೂದೆ ಭಿನ್ನಭಿಪ್ರಾಯಗಳಿಗೆ ಅವಕಾಶ ಇರಬಾರದು ಎಂದರು.


ಗ್ರೀಕ್ ಹಾಗೂ ಯೊರೋಪ್ ರಾಷ್ಟ್ರಗಳ ಸಾಹಿತ್ಯದಲ್ಲೂ ಸರ್ವಜ್ಞರ ಉಲ್ಲೇಖಗಳಿವೆ ಸರ್ವಜ್ಞರ ವಚನಗಳು ಸಮಾಜದಲ್ಲಿ ನ್ಯಾಯ ನೀತಿ,ಸಮಾನತೆಯಿಂದ ಬಾಳ್ವೆ ನಡೆಸಲು ನೀಡಿರುವಂತ ಆದರ್ಶಪ್ರಿಯವಾಗಿದ್ದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳೊವಂತಾಗ ಬೇಕೆಂದು ಕರೆ ನೀಡಿದರು.


ಅಖಿಲ ಭಾರತ ಕುಂಬಾರ ಸಮುದಾಯದ ಯುವ ಅಧ್ಯಕ್ಷ ಡಾ. ನಾಗರಾಜ್ ಮಾತನಾಡಿ ಸಂತ ಸರ್ವಜ್ಞ ಜಯಂತಿಯನ್ನು ಕಳೆದ ೨೦೧೩ ರಿಂದ ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತಿದೆ. ಕುಂಬಾರ ಸಮುದಾಯವು ಅತಿಸೊಕ್ಷ ವರ್ಗಕ್ಕೆ ಸೇರಿದ ಸರಳ ಸೌಮ್ಯವಾದ ಗುಂಪಿಗೆ ಸೇರಿದಂತ ಅತಿ ಕಡಿಮೆ ಸಂಖ್ಯೆಯನ್ನು ಹೊಂದಿರುವ ಸಮಾಜವನ್ನು ೨ ಎ ವರ್ಗಕ್ಕೆ ಸೇರಿದೆ. ಅದರೆ ಇದರಲ್ಲಿ ೧೧೮ ಉಪಜಾತಿಗಳು ಸೇರ್ಪಡೆಯಾಗಿರುವುದರಿಂದ ಕುಂಬಾರ ಸಮುದಾಯವು ಸಾಮಾಜಿಕ ನ್ಯಾಯದಿಂದ ವಂಚಿತ ಗೊಂಡಿದೆ. ಈ ಸಮುದಾಯವನ್ನು ವಿಶೇಷವಾಗಿ ೨ ಎ(೧) ಎಂದು ನಮೂಧಿಸಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸ ಬೇಕು ಎಂದು ಒತ್ತಾಯಿಸಿದರು.


ನಮ್ಮ ಸಮುದಾಯವು ರಾಜ್ಯದಲ್ಲಿ ಕಡಿಮೆ ಸಂಖ್ಯೆ ಇರುವುದರಿಂದ ಸರ್ಕಾರಕ್ಕೆ ಹಾಗೂ ಜನಪ್ರತಿನಿದಿಗಳಿಗೆ ನಮ್ಮ ಸಮುದಾಯದ ಬಗ್ಗೆ ಯಾವೂದೇ ವಿಶೇಷ ಕಾಳಜಿಯಿಲ್ಲಾವಾಗಿದೆ ಇದಕ್ಕೆ ಮುಖ್ಯ ಕಾರಣ ಸಂಘಟನೆಯ ಕೊರತೆಯಾಗಿದೆ. ಯಾವೂದೇ ಸಮುದಾಯದಲ್ಲಿ ಸಂಘಟನೆ ಕೊರತೆಯಿಂದ ಯಾವೂದೇ ಸಾಧನೆ ಸಾದಿಸಲು ಸಾದ್ಯವಾಗದು ಹಾಗಾಗಿ ನಮ್ಮಲ್ಲಿನ ಕುಂದು ಕೊರತೆ ಬಗೆಹರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುವಂತಾಗ ಬೇಕಾದರೆ ಸಮುದಾಯದಲ್ಲಿ ಸಂಘಟನೆಯ ಶಕ್ತಿ ಪ್ರದರ್ಶನವಾಗುವುದು ಅನಿವಾಂiiವಾಗಿದೆ ಎಂದರು.


ಕುಂಬಾರ ಸಮುದಾಯದ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ ನಗರದ ಸರ್ವಜ್ಞ ಉದ್ಯಾನವನದಲ್ಲಿನ ಸರ್ವಜ್ಞ ಪುತ್ಥಳಿಕೆಯ ಮೇಲ್ಚಾವಣೆ ಹಾಳದ ನಂತರ ಹೊಸದಾಗಿ ಆಳವಡಿಸಿಲ್ಲ. ನಗರಸಭೆಗೆ ಮನವಿ ಮಾಡಿದ್ದೇವಿ ಟೆಂಡರ್ ಕರೆದು ಮಾಡಿಸುವುದಾಗಿ ಪೌರಾಯುಕ್ತರು ಅಶ್ವಾಸನೆ ನೀಡಿದ್ದಾರೆ ಅದರೆ ಈವರೆಗೆ ಏನೊಂದು ಮಾಡಿಲ್ಲ ಎಂದು ಅಸಮಾಧನ ವ್ಯಕ್ತ ಪಡೆಸಿದರು.


ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಕಲ್ಲಂಡೂರು ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ನಾಗೇಶ್, ಗೌಡನಹಳ್ಳಿ ಶ್ರೀನಿವಾಸ್, ಈರಣ್ಣ ಸರೋಜ ಶ್ರೀನಿವಾಸ್, ನಂದೀಶ್, ಶಿವಪ್ರಸಾದ್, ರಾಜಣ್ಣ ಮುಂತಾದವರಿದ್ದರು.


ಇದಕ್ಕೂ ಮುನ್ನ ನಗರದಲ್ಲಿ ಸರ್ವಜ್ಞ ಭಾವಚಿತ್ರದ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಸಹಾಯಕ ಕಮಿಷನರ್ ಅವರು ಕುಂಭ ಕಲಾ ಚಕ್ರದಲ್ಲಿನ ಕುಂಡಕ್ಕೆ ಕೈ ಜೋಡಿಸುವ ಮೂಲಕ ಉದ್ಘಾಟಿಸಿ ಸರ್ವಜ್ಞ ಭಾವ ಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿದರು.