
ಸಂಜೆವಾಣಿ ವಾರ್ತೆ,
ವಿಜಯಪುರ, ಏ.೩: ಕಾರ್ಮಿಕರು ದೇಶದ ಆಸ್ತಿ, ರಾಷ್ಟ್ರದ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅನನ್ಯವಾಗಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ಅಗತ್ಯ. ಅಂತಹ ಸ್ಮಾರ್ಟ್ ಕಾರ್ಡ್ ಬಾಗಿಲಿಗೆ ಒದಗಿಸುವ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಸಿದ್ಧೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ ಹೇಳಿದರು.
ನಗರದ ಜೋರಾಪುರ ಪೇಟೆಯ ಶ್ರೀ ಶಂಕರಲಿAಗ ದೇವಸ್ಥಾನದ ಆವರಣದಲ್ಲಿ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಸಂಘಟಿತರಿಗೆ ಕಾರ್ಮಿಕರ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಬಸವರಾಜ್ ಚೌಕಿಮಠ ಮಾತನಾಡಿ, ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಯಬೇಕು. ವಾರ್ಡ್ ಪ್ರತಿನಿಧಿಸುವ ಶಿವರುದ್ರ ಬಾಗಲಕೋಟ ತನ್ನ ವಾರ್ಡ್ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ಸೇರಿ ವಿವಿಧ ಜನಪರ ಹಲವವು ಕಾರ್ಯಕ್ರಮ ಸಂಘಟಿಸಿ ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ಜನರಿಗೆ ಒದಗಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಅಲ್ಲದೇ, ಹಲವು ಸಾಮಾಜಿಕ ಭದ್ರತಾ ಯೋಜನೆಗಳು ಫಲಾನುಭವಿಗಳಿಗೆ ದೊರಕಿಸಲು ಅವರ ಪಾತ್ರ ಅನನ್ಯವಾಗಿದ್ದು, ಅವರ ಜನಸೇವೆ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ವಾರ್ಡ್ ಪ್ರಗತಿಯ ಜತೆಗೆ ಸರ್ಕಾರದ ಸೌಲಭ್ಯಗಳು ಜನರಿಗೆ ಸಕಾಲಕ್ಕೆ ದೊರಕಬೇಕು ಎಂಬ ಆಶಯ ನನ್ನದು. ಈ ಆಶಯದ ಭಾಗವಾಗಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ೩೦೦ಕ್ಕೂ ಅಧಿಕ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಯಿತು.
ಕಾರ್ಮಿಕ ನಿರೀಕ್ಷಕರಾದ ಮಲ್ಲಿಕಾರ್ಜುನ ಕಾಮಠಾಣ, ಅನಿಲ್ ರಾಠೋಡ, ಮಹೇಶ ಹೇರಲಗಿ, ವಿರೂಪಾಕ್ಷಪ್ಪ ಶಾಬಾದಿ, ಸೂರಪ್ಪ ಮಿರ್ಜಿ, ವಿಶ್ವನಾಥ ಬೀಳಗಿ, ವೀರಭದ್ರ ಹೇರಲಗಿ, ರುದ್ರಗೌಡ ಪಾಟೀಲ, ಶಂಕರ ಬನ್ನೂರು, ಅಮರ ಗರುಡಕರ, ಗೋಪಿ ಹೋಟ್ಕರ, ಶ್ರೀನಿವಾಸ ಶಹಪುರ, ರಾಮು ಭಜಂತ್ರಿ, ಸುಧೀರ ಪವಾರ, ಶಶಿಕಾಂತ ಬೋವಿ, ದಾಕ್ಷಾಯಿಣಿ ಮಠಪತಿ, ದಾನಮ್ಮ ಮಹಾಜನ, ರಮೇಶ್ ಕೊಕಟ್ನೂರ್, ಎಂ ಕೆ ಮನಗೊಂಡ, ಪಾವಡಪ್ಪ ಗಿಡವೀರ,ಮಲ್ಲಿಕಾರ್ಜುನ ಹೇರಲಗಿ, ಈರಪ್ಪ ಕುರ್ಲೆ ಮತ್ತಿತರರಿದ್ದರು.




















