ಔರಾದ :ಅ.13: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪತ್ರಿಕಾ ರಂಗದ ಪಾತ್ರ ಬಹು ಮುಖ್ಯವಾಗಿದೆ. ಪ್ರಜಾಪ್ರಭುತ್ವದ ಕಾವಲು ಕಾಯುವ ಕಾರ್ಯ ಪತ್ರಿಕಾ ರಂಗ ಮಾಡುತ್ತದೆ ಎಂದು ಹಿರಿಯ ಪತ್ರಕರ್ತ ಶಶಿಕಾಂತ ಎಸ್. ಶೆಂಬೆಳ್ಳಿ ಹೇಳಿದರು.
ಪಟ್ಟಣದ ಪತ್ರಿ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಸುಭಾಷ ಚಂದ್ರ ಬೋಸ್ ಯುವಕ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಸದಸ್ಯ ನಿಂದ ಪ್ರಧಾನ್ ಮಂತ್ರಿಯನ್ನು ಸಹ ಪ್ರಶ್ನೆ ಮಾಡುವ ಅಧಿಕಾರ ಪತ್ರಿಕಾ ಮಿತ್ರರಿಗೆ ಇದೆ. ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಹಾಗೂ ರಾಜಕೀಯ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಮಾಹಿತಿಗಳನ್ನು ಸರ್ಕಾರದ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡುತ್ತಾ ಬರುತ್ತಿದೆ. ವಿದ್ಯಾರ್ಥಿ ಮಿತ್ರರು ತಮ್ಮ ವಿದ್ಯಾರ್ಥಿ ಜೀವನದವನ್ನು ಜ್ಞಾನಾರ್ಜನೆಗೆ ಸೀಮಿತಗೊಳಿಸು ಪಠ್ಯ ಪುಸ್ತಕದ ಓದು ವ್ಯಾಸಂಗಕ್ಕೆ ಅದೇ ರೀತಿ ಪತ್ರಿಕೆ ಓದುವುದು ಹವ್ಯಾಸ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ ಎಂದರು.
ಪತ್ರಕರ್ತರು ಸಹ ಅಧ್ಯಯನಶೀಲಗಾಗಿ ನೈಜವಾದ ನಿಖರವಾದ ಮಾಹಿತಿಯನ್ನು ಸಮಾಜಕ್ಕೆ ನೀಡಬೇಕು. ಪತ್ರಕರ್ತ ಎನನ್ನು ನೋಡುತ್ತಾನೆ, ಎನನ್ನು ಕೇಳುತ್ತಾನೆ ಅದನ್ನೇ ಬರೆಯಬೇಕು ಅಂದಾಗ ಮಾತ್ರ ನೈಜ ಪತ್ರಕರ್ತ ಎನಿಸಿಕೊಳ್ಳುತ್ತಾನೆ ಎಂದು ತಿಳಿಸಿದರು.
ಮಾಜಿ ಶಾಸಕ ಗುಂಡಪ್ಪ ವಕೀಲ ಅವರು ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಬೆಳೆದ ಪತ್ರಿಕಾ ರಂಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬಡವ ಬಲ್ಲವ ಎನ್ನದೇ ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯ ಮಾಡುತ್ತದೆ. ನಿಖರವಾಗಿ, ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ ಕಾರ್ಯ ಮಾಡುತ್ತಾ ಬರುತ್ತಿರುವ ಪತ್ರಕರ್ತರ ಸೇವೆ ಅಮೋಘವಾಗಿದೆ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಹಿರಿಯ ಮುಖಂಡ ಬಂಡೆಪ್ಪ ಕಂಟೆ, ಪತ್ರಕರ್ತ ಅನಿಲಕುಮಾರ ದೇಶಮುಖ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮುಕ್ತೆದಾರ ಮಾತನಾಡಿದರು. ಸುಭಾಷ ಚಂದ್ರ ಬೋಸ ಯುವಕ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇಳೆ ತಾಲೂಕಿನ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ಮಿತ್ರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಬಿಸಿಎಂ ಅಧಿಕಾರಿ ರವೀಂದ್ರ ಮೇತ್ರೆ, ಜಾನ್ಸನ್ ಘೋಡೆ, ಓಂಪ್ರಕಾಶ ದಡ್ಡೆ, ಬಸವರಾಜ ಶೆಟಕಾರ, ಕೃಷ್ಣಾ ಪಾಟೀಲ, ಸೇರಿದಂತೆ ಅನೇಕರಿದ್ದರು. ಅಮರಸ್ವಾಮಿ ಸ್ಥಾವರಮಠ ನಿರೂಪಿಸಿದರು, ಪ್ರಾಂಶುಪಾಲ ಅಕಿಲ ವಂದಿಸಿದರು.
ಸಮಾಜದಲ್ಲಿ ಜ್ಞಾನಕ್ಕೆ ಬೆಲೆ ಹೆಚ್ಚು : ಶೆಂಬೆಳ್ಳಿ
ಸಮಾಜದಲ್ಲಿ ಜ್ಞಾನಕ್ಕೆ ವಿಶೇಷ ಬೆಲೆ ಇದೆ, ಆ ಸಂಬಂಧ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಬದುಕು ಜ್ಞಾನಾರ್ಜನೆಗೆ ಸೀಮಿತಗೊಳಿಸಬೇಕು. ಪತ್ರಿಕೆಗಳನ್ನು ಕೊಂಡು ಓದಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಪ್ರಚಲಿತ ವಿದ್ಯಮಾನಗಳ ಮಾಹಿತಿ ಪಡೆಯಬಹುದು.
ಶಶಿಕಾಂತ ಎಸ್. ಶೆಂಬೆಳ್ಳಿ
ಹಿರಿಯ ಪತ್ರಕರ್ತ

























