ಸಮಾಜದಲ್ಲಿ ಕಲಾವಿದನ ಪಾತ್ರ ಪ್ರಮುಖ: ಅಬ್ದುಲ್ ಹಮೀದ್

ಕಲಬುರಗಿ: ಜೂ.6:ಸಮಾಜದಲ್ಲಿ ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಫರಾನ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಹಮೀದ್ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದರು. ಕಲಬುರಗಿಯಲ್ಲಿ ಇತ್ತೀಚೆಗೆ ಮುಹಿಬನ್ನೆ ಉರ್ದು ಆಯೋಜಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ವಾರ್ಷಿಕ ಪ್ರಶಸ್ತಿ ಪುರಸ್ಕøತ ರೆಹಮಾನ್ ಪಟೇಲ್ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಅಯಾಜುದ್ದೀನ್ ಪಟೇಲ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಮುಹಿಬನ್ನೆ ಉರ್ದು ಅಧ್ಯಕ್ಷ ಡಾ.ಫಹೀಮುದ್ದೀನ್ ಪೀರಜಾದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ ಅನೀಸ್ ಸಿದ್ದಿಕಿ, ಸದಸ್ಯ ಖಾಜಾ ಪಾಷಾ ಇನಾಮದಾರ ವೇದಿಕೆ ಹಂಚಿಕೊಂಡರು. ಸೈಯದ್ ತಯಾಬ್ ಅಲಿ, ಗಜಾನ್‍ಫರ್ ಇಕ್ಬಾಲ್, ರಿಜ್ವಾನ್ ಉರ್ ರೆಹಮಾನ್, ಮುಜೀಬ್ ಅಲಿ ಖಾನ್, ಯೂಸುಫ್, ಮುಬೀನ್ ಝಕಾಮ್ ಮುಂತಾದ ಉರ್ದು ಬರಹಗಾರರು ಮತ್ತು ಬುದ್ಧಿಜೀವಿಗಳು ಉಪಸ್ಥಿತರಿದ್ದರು