Home ಜಿಲ್ಲೆ ಕಲಬುರಗಿ ಸ್ವತಂತ್ರವಾಗಿ ಬದುಕಿದ ಪೂಜ್ಯ ಡಾ.ಅಪ್ಪ

ಸ್ವತಂತ್ರವಾಗಿ ಬದುಕಿದ ಪೂಜ್ಯ ಡಾ.ಅಪ್ಪ

ಕಲಬುರಗಿ :ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಸ್ವತಂತ್ರವಾಗಿ ಬದುಕಿದ ಮಹಾದಾರ್ಶನಿಕರು ಎಂದು ಶರಣಬಸವ ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ ಹೇಳಿದರು.

ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಸ್ವಾತಂತ್ರ್ಯ ಪರಿಕಲ್ಪನೆ ವಿಷಯ ಕುರಿತು ಮಾತನಾಡಿ, ಪೂಜ್ಯರ ಸ್ವಾತಂತ್ರ್ಯ ಪರಿಕಲ್ಪನೆ ಕಠಿಣ ಪರಿಶ್ರಮ ಮತ್ತು ಸಂಪಾದಿಸಿದ ನೈಜತೆಯಾಗಿದೆ. ಸ್ವಾತಂತ್ರ್ಯ ಎಂದರೆ ಕೇವಲ ಬಂಧನಗಳಿಂದ ಮುಕ್ತವಾಗಿರುವುದಲ್ಲ. ವ್ಯಕ್ತಿಯು ತನ್ನ ವಿಚಾರ, ಜ್ಞಾನ, ವಿವೇಕ ಮತ್ತು ಸಾಮಥ್ರ್ಯವನ್ನು ಸ್ವತಂತ್ರವಾಗಿ ಬಳಸಿಕೊಂಡು ಗೌರವಯುತವಾಗಿ ಬದುಕುವ ಅವಕಾಶವೇ ನಿಜವಾದ ಸ್ವಾತಂತ್ರ್ಯ.
ಈ ದೃಷ್ಟಿಯಿಂದ ನೋಡಿದಾಗ, ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಜ್ಞಾನ, ಶಿಕ್ಷಣ, ಸಮಾನತೆ, ಸ್ವಾವಲಂಬನೆ ಮತ್ತು ಮಾನವೀಯ ಸೇವೆಯೊಂದಿಗೆ ಜೋಡಿಸಬಹುದು. ಪೂಜ್ಯ ಡಾ. ಅಪ್ಪ ಅವರ ಜೀವನ ಮತ್ತು ಕಾರ್ಯಗಳನ್ನು ಆಧರಿಸಿ ಸ್ವಾತಂತ್ರ್ಯದ ಪರಿಕಲ್ಪನೆ ‘ಅನ್ನದಿಂದ ದೇಹಕ್ಕೆ ಸ್ವಾತಂತ್ರ್ಯ, ಜ್ಞಾನದಿಂದ ಮನಸ್ಸಿಗೆ ಸ್ವಾತಂತ್ರ್ಯ, ಶಿಕ್ಷಣದಿಂದ ಬದುಕಿಗೆ ಸ್ವಾವಲಂಬನೆ, ಸಮಾನತೆಯಿಂದ ಸಮಾಜಕ್ಕೆ ಸ್ವಾತಂತ್ರ್ಯ ಮತ್ತು ದಾಸೋಹದಿಂದ ಮಾನವೀಯತೆಗೆ ಅರ್ಥವಾಗಿದೆ.
ಸ್ವತಂತ್ರವಾಗಿ ವಿಚಾರ ಮಾಡಬೇಕು, ಸ್ವತಂತ್ರವಾಗಿ ಸ್ವತಂತ್ರವಾಗಿ ಮಾತನಾಡಬೇಕು, ಸ್ವತಂತ್ರವಾಗಿ ಬದುಕಬೇಕು ಎಂಬುವುದು ಪೂಜ್ಯರ ನಿರಂತರ ಸಂದೇಶವಾಗಿತ್ತು. ಮಹಿಳಾ ಸಬಲೀಕರಣ ಮಾಡುವುದರ ಮೂಲಕ ಮಹಿಳೆಯರಿಗೆ ನೀಡಿದ ಸ್ವತಂತ್ರ್ಯವಾಗಿತ್ತು. ಕಾಯಕ ಮತ್ತು ದಾಸೋಹದ ಮೂಲಕ ಸ್ವಾತಂತ್ರ್ಯದೊರಕಿಸಿದರು. ಅವರು ತಮ್ಮ ಜೀವನದುದ್ದಕ್ಕೂ ಸ್ವತಂತ್ರವಾಗಿ ಬದುಕಿದವರು. ಸ್ವತಂತ್ರ ವಿಶ್ವವಿದ್ಯಾಲಯ ನಿರ್ಮಿಸಿದ ಮಹಾ ಮೇಧಾವಿ. ದೇಶ ಸ್ವಾತಂತ್ರ್ಯ ಸಿಕ್ಕ ದಿನವೇ ಅವರು ದೇಹತ್ಯಾಗ ಮಾಡಿರುವುದು ಕಾಕತಾಳಿಯವಾಗಿದೆ. ಹೀಗಾಗಿ ಅವರ ಸ್ವಾತಂತ್ರ್ಯಪರಿಕಲ್ಪನೆ ದಾಸೋಹವು ವ್ಯಕ್ತಿಯ ಮುಕ್ತಿಯಿಂದ ಸಮಾಜದ ಮುಕ್ತಿಯವರೆಗೆ ಸಾಗುವ ಮಾನವೀಯ ಚಿಂತನೆಯಾಗಿದೆ. ಇದೇ ಕಾರಣಕ್ಕೆ ಅವರ ದಾಸೋಹ ಪರಂಪರೆ ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.