
ಕರಜಗಿ:ಡಿ.5:ಕೃಷಿಯಲ್ಲಿ ನಾವು ಪ್ರಗತಿ ಹೊಂದಿದರೆ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು
ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಘಟಕ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಮ್ಮಿಕೊಂಡಿದ್ದ ಜಲಾನಯನ (ವಾಟರ್ ಶೆಡ್) ಮಹೋತ್ಸವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಾರತ ಕೃಷಿ ಪ್ರಧಾನ ದೇಶವಾಗಿದ್ದು ನೂರಕ್ಕೆ ಎಂಬತ್ತರಷ್ಟು ಗ್ರಾಮೀಣ ಪ್ರದೇಶದ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ.ಒಕ್ಕಲುತನ ಅವರ ಮೂಲ ಕಸಬು ಆಗಿದೆ. ರೈತರು ದೇಶದ ಬೆನ್ನೆಲುಬು ದೇಶದ ಆಸ್ತಿಯಾಗಿದ್ದಾರೆ.ಎಲ್ಲರನ್ನು ಬದುಕಿಸುವ ಶಕ್ತಿ ರೈತರಲ್ಲಿದೆ.ಕೃಷಿ ಕ್ಷೇತ್ರದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ.ಸರ್ಕಾರ ಕೂಡ ವಿವಿಧ ಇಲಾಖೆಗಳ ಮೂಲಕ ರೈತರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಸರ್ಕಾರ ನೀಡಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ ಗ್ರಾ ಪಂ ಅಧ್ಯಕ್ಷ ಬಿ ರಾಜು ಸಾಯಬಣ್ಣ ಬೆನಕನಹಳ್ಳಿ ರಾಮನಗರ ಗ್ರಾ ಪಂ ಅಧ್ಯಕ್ಷೆ ಕಮಲಾಬಾಯಿ ಅಳ್ಳಗಿ ಕೃಷಿ ಉಪ ನಿರ್ದೇಶಕ ಬಾಲರಾಜ ರಂಗರಾವ ಸಹಾಯಕ ಕೃಷಿ ನಿರ್ದೇಶಕ ಎಚ್ ಎಸ್ ಗಡಗಿಮನಿ ಸೈಫನಸಾಬ ಮುಲ್ಲಾ ಅರಣ್ಯ ಇಲಾಖೆಯ ಮುಜಬುದ್ದೀನ ಕೃಷಿ ಅಧಿಕಾರಿ ಚನ್ನಬಸಯ್ಯ ಹಿರೇಮಠ ಮಹಾದೇವಪ್ಪ ಕರೂಟಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಪ್ರಕಾಶ ಜಮಾದಾರ ಶಿವಾನಂದ ಗಾಡಿಸಾಹುಕಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ ಶರಣು ಕುಂಬಾರ ಸಿದ್ರಾಮಪ್ಪ ಹಿರೇಕುರುಬರ ಸಿದ್ದಪ್ಪ ಹತ್ತರಕಿ ಅಣ್ಣಾರಾವ ಮುಜಗೊಂಡ ಜಟ್ಟೆಪ್ಪ ಭುಯ್ಯಾರ ಷಡಕ್ಷರಿ ತಂಬಾಕೆ ಬಸಣ್ಣ ಜಕಾಪೂರ ವಿವೇಕಾನಂದ ಕೋಗಟನೂರ ಮಿಟ್ಟುಸಾಬ ರುಕ್ಮೋದ್ದಿನ ಮಾಳಪ್ಪ ಪೂಜಾರಿ ಅಭಿಷೇಕ ರೋಡಗಿ ಸಿದ್ದಪ್ಪ ಗೋಪಗೊಂಡ ಯಶ್ವಂತ ಕರೂಟಿ ಮಹಾಂತೇಶ ಕರೂಟಿ ಶಿಕ್ಷಕ ದತ್ತಪ್ಪ ಡೊಂಬಾಳೆ ವೇಣುಮಾಧವ ಅವಧಾನಿ ಸಂತೋಷ ಅಲ್ಲಾಪೂರ ಜಗದೀಶ ದೇಶಟ್ಟಿ ಸಂಜೀವ ನನ್ನಾಜಿ ಮಹಿಬೂಬ ಗೌರ ಶ್ರೀಕಾಂತ ನಿವರಗಿ ರಾಜಶೇಖರ ಪ್ಯಾಟಿ ಶರಣಪ್ಪ ಕರಜಗಿ ಶರಣಪ್ಪ ಕರಜಗಿ ಮಲ್ಲಿಕಾರ್ಜುನ ಕರೂಟಿ ಇತರರಿದ್ದರು
























