
ಬೀದರ:ಫೆ.2: ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಆಯುರ್ವೇದ ಕ್ಷೇತ್ರಕ್ಕೆ ಬಲ ತುಂಬಲು 3 ಹೊಸ ‘ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ’ ಸ್ಥಾಪನೆಯನ್ನು ಘೋಷಿಸಿದ್ದಾರೆ. ಇದು ಸಂಶೋಧನೆ ಮತ್ತು ಉತ್ತಮ ಆರೋಗ್ಯ ಸೇವೆಗೆ ಹೊಸ ವೇಗ ನೀಡಲಿದೆ ಹಾಗೂ ಮಧುಮೇಹ ಹಾಗೂ ಕ್ಯಾನ್ಸರಿಗೆ ಸಂಬಂಧ ಪಟ್ಟ 17 ಔಷಧಿ ಹಾಗೂ 7 ದುರ್ಬಲ ಕಾಯಿಲೆ ಮತ್ತು ಮೇಲಿನ ದರ ಇಳಿಸಲಾಗಿದೆ.
2026-27 ಕೇಂದ್ರ ಬಜೆಟ್‍ನಲ್ಲಿ ರೈತರಿಗೆ ಬಂಪರ್ ಕೊಡುಗೆಗಳು:20 ಲಕ್ಷ ಕೋಟಿ ಕೃಷಿ ಸಾಲದ ಗುರಿ ಕೃಷಿಯಲ್ಲಿ ಂI & ಡ್ರೋನ್ ಕ್ರಾಂತಿ 11.8 ಕೋಟಿ ರೈತರಿಗೆ Pಒ-ಏISಂಓ ನೆರವು ನೈಸರ್ಗಿಕ ಕೃಷಿ & ಮತ್ಸ್ಯ ಸಂಪದಕ್ಕೆ ವಿಶೇಷ ಒತ್ತು ರೈತರ ಬಾಳಲ್ಲಿ ಸಮೃದ್ಧಿಯ ಖಾತ್ರಿ, ಇದು ಮೋದಿ ಗ್ಯಾರಂಟಿ ಶಿಕ್ಷಣವೇ ವಿಕಸಿತ ಭಾರತದ ಅಡಿಪಾಯ.ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಸ್ಥಾಪನೆ, 5 ವಿಶ್ವವಿದ್ಯಾಲಯ ಹಾಗೂ ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ವಸತಿ ಗೃಹಗಳು ಹಾಗೂ ಖಗೋಳದ ಅಧ್ಯಯನಕ್ಕೆ ಹೊಸ ಮೂಲಸೌಕರ್ಯ ಹೀಗೆ ಇಂದಿನ ಕೇಂದ್ರ ಬಜೆಟ್ ಶಿಕ್ಷಣ ಕ್ಷೇತ್ರಕ್ಕೂ ಭವಿಷ್ಯಮುಖಿ ಬಲ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

























