ಯುವಕರ ಶಕ್ತಿ ಸಂಜೀವಿನಿ ಸ್ವಾಮಿ ವಿವೇಕಾನಂದ

ಕಲಬುರಗಿ:ಜ.12: ಶ್ರೇಷ್ಟ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ನೀಡಿರುವ ತತ್ವ, ಸಂದೇಶ ಸಾರ್ವಕಾಲಿಕ ಹಾಗೂ ಯುವಕರ ಶಕ್ತಿ ಸಂಜೀವಿನಿಯಾಗಿದೆ ಎಂದು ಪ್ರಾಚಾರ್ಯರ ರವೀಂದ್ರಕುಮಾರ ಸಿ. ಬಟಗೇರಿ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದಿಂದಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಸ್ವಾಮಿ ವಿವೇಕಾನಂದರ163ನೇ ಜನ್ಮದಿನೋತ್ಸವ-ರಾಷ್ಟ್ರೀಯ ಯುವ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ್ ಮಾತನಾಡಿ,ವಪ್ರತಿಯೊಬ್ಬರು ಸಕಾರಾತ್ಮಕಚಿಂತನೆ ಮೈಗೂಡಿಸಕೊಂಡು ಕಾರ್ಯ ನಿರ್ವಹಿಸಿದರೆ ಉನ್ನತವಾದ ಸಾಧನೆಯಾಗುತ್ತದೆ. ದೇಶದಿಂದ ಪಡೆದ ಜ್ಞಾನವನ್ನು, ದೇಶದ ಒಳೊತಿಗಾಗಿ ಬಳಸಬೇಕೆಂಬ ವಿವೇಕಾನಂದರ ತತ್ವವನ್ನು ಅಳವಡಿಸಿಕೊಳ್ಳಬೇಕು. ವಿವೇಕಾನಂದರು ಯುವಕರ ಬಗ್ಗೆ ಅಪಾರವಾದ ನಂಬಿಕೆ, ಕಾಳಜಿ ಹೊಂದಿದ್ದರು. ದೇಶದ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿ, ಭಾರತದಕೀರ್ತಿ ಪತಾಕೆಯನ್ನುಎಲ್ಲೆಡೆ ಪಸರಿಸುವಂತೆ ಮಾಡಿದ ಮಹಾನ ಚೇತನಶಕ್ತಿಯಾಗಿದ್ದಾರೆ. ಅವರ ಸಂದೇಶಯುವಶಕ್ತಿ ಅಳವಡಿಸಿಕೊಂಡು ದೇಶಕ್ಕೆಅಮೂಲ್ಯವಾದ ಕೊಡುಗೆಯನ್ನು ನೀಡಬೇಕೆಂದರು.

      ವಿವೇಕಾನಂದರು  ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು.ಯುವ ಸಮೂಹಕ್ಕೆ ದಾರಿದೀಪವಾಗಿದ್ದಾರೆ. ದೇಶದ ಯುವಶಕ್ತಿಯ ಸಂಪೂರ್ಣ ಸದುಪಯೋಗವಾಗಬೇಕು. ವಿದ್ಯಾರ್ಥಿ ದಿಸೆಯಿಂದಲೇ ನಿಗದಿತಗುರಿ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.         ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅಸ್ಮಾ  ಜಬೀನ್, ಮಲ್ಲಿಕಾರ್ಜುನ ದೊಡ್ಡಮನಿ, ಸುವರ್ಣಲತಾ ಭಂಡಾರಿ,  ನಯಿಮಾ ನಾಹಿದ್, ಮಲ್ಲಪ್ಪ ರಂಜಣಗಿ, ಗ್ರಂಥಪಾಲಕ ಲಿಂಗರಾಜ ಹಿರೇಗೌಡ, ಪ್ರದಸ ಪ್ರೇಮಾ ಸುರಪುರ, ದ್ವಿದಸ ರಾಮಚಂದ್ರ ಚವ್ಹಾಣ, ಅತಿಥಿ ಉಪನ್ಯಾಸಕರಾದ ವೀರೇಶ್ ಗೋಗಿ, ಶರಣು ಸುರಪುರ, ಅಲಿಯಾ ತಬಸ್ಸುಮ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.