Home ಜಿಲ್ಲೆ ಕಲಬುರಗಿ ನಂಬಿಕೆ, ಕಡಿಮೆ ವೆಚ್ಚದಲ್ಲಿ ಮನೆಗೆ ತಲುಪಿಸುವ ವಿಶ್ವಾಸದ ಸೇವೆಯೇ ಅಂಚೆ

ನಂಬಿಕೆ, ಕಡಿಮೆ ವೆಚ್ಚದಲ್ಲಿ ಮನೆಗೆ ತಲುಪಿಸುವ ವಿಶ್ವಾಸದ ಸೇವೆಯೇ ಅಂಚೆ

ಕಲಬುರಗಿ:ಅಂಚೆ ಇದು ನಗರ ಮತ್ತು ಹಳ್ಳಿಯ ನಡುವಿನ ಅಂತರವನ್ನುಕಡಿಮೆ ಮಾಡುತ್ತಒಬ್ಬ ವ್ಯಕ್ತಿಯ ಸಂದೇಶ, ಹಣ, ವಸ್ತು, ದಾಖಲೆಗಳನ್ನು ಇತರರಿಗೆ ಸುರಕ್ಷಿತವಾಗಿಕಡಿಮೆ ವೆಚ್ಚದಲ್ಲಿತಲುಪಿಸುವ ಸೇವೆಯೆ ಅಂಚೆ.ಅಧೀಕೃತ ಮತ್ತು ಭಾವನಾತ್ಮಕ ಸಂವಹನಕ್ಕೆ ವಿಶ್ವಾಸ ಮತ್ತು ನಂಬಿಕೆಗೆ ಇನ್ನೊಂದು ಹೆಸರೆ ಅಂಚೆ ಎಂದುಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿಅಂಚೆದಾರನಿಗೆ ಸನ್ಮಾನಿಸಿ ಮಾತನಾಡಿದರು.
ಅಕ್ಟೋಬರ್ 9, “ವಿಶ್ವ ಅಂಚೆ ದಿನದ” ನಿಮಿತ್ಯಕೋಟನೂರಿನಕಾಕಾ ಲೇಔಟ್‍ನಲ್ಲಿನಿವೃತ್ತಅಂಚೆದಾರನಾದಶಿವಶರಣಪ್ಪ ಪರಪ್ಪಗೋಳ ತಾಡತೆಗನೂರಅವರಿಗೆಅಂಡಗಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ವಿಶೇಷ ದಿನವನ್ನುಅರ್ಥಪೂರ್ಣವಾಗಿಆಚರಿಸಲಾಯಿತು.
ವಕೀಲರಾದ ವಿನೋದಕುಮಾರಜನೇವರಿ, ಡಾ. ವಿವೇಕಾನಂದ ಬುಳ್ಳಾ, ಜನಪದಕಲಾವಿದ ವಿಶ್ವನಾಥ ತೋಟ್ನಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ಕೋಟನೂರ ಬಸವರಾಜ ಹೂಗಾರ, ಪ್ರಶಾಂತ ನಂದಿಕೂರ, ನಿವೃತ್ತಎ.ಎಸ್.ಐ. ಮಲ್ಲಿಕಾರ್ಜುನ ಪೂಜಾರಿ, ದಿನೇಶ ದೊಡ್ಡಮನಿ, ಶಿವಶರಣಪ್ಪ ಅಮೃತ ಪೂಜಾರಿ, ಬಸವರಾಜಕುಂಬಾರ, ನಿವೃತ್ತ ಪಿ.ಎಸ್.ಐ. ಚೌಡಪ್ಪ, ಶಿವಾಜಿ ಕುಂಬಾರ, ಓಂ ಪ್ರಕಾಶ ನಾಸಿ, ಮಲ್ಲಿಕಾರ್ಜುನಕೋಟೆ ನೀಲಹಳ್ಳಿ, ವಿಶ್ವನಾಥ ಬಂಗಾರಿ ಉಪಸ್ಥಿತರಿದ್ದರು.