ಸಮಾಜದಲ್ಲಿ ಗುರುವಿಗೆ ದೇವರ ಸ್ಥಾನ ಅರ್ಥಪೂರ್ಣ – ಅನಿಲ್ ಕುಮಾರ್

ಕೋಲಾರ, ಸೆ,೬- ಸಮಾಜದಲ್ಲಿ ತಂದೆ ತಾಯಿ ನಂತರದಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯ ಜೂತೆಗೆ ಬುದ್ದಿಯನ್ನು ಕಲಿಸಿಸುವಂತ ಶಿಕ್ಷಕರು ಶಿಲ್ಪಿಗಳಿದಂತೆ ಸಮಾಜದಲ್ಲಿ ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸುವವರು. ವಿದ್ಯಾರ್ಥಿಗಳಲ್ಲಿ ಅಡಗಿರುವಂತ ಪ್ರತಿಭೆಯನ್ನು ಬೆಳಕಿಗೆ ತರುವಂತ ಸಾಮಾರ್ಥ್ಯ ಗುರುವಿಗೆ ಮಾತ್ರ ಇದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವುದರಿಂದ ಅವರಿಗೆ ಸಮಾಜದಲ್ಲಿ ದೇವರ ಸ್ಥಾನ ನೀಡಿರುವುದು ಸಮಾಂಜಸವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಅಭಿಪ್ರಾಯ ಪಟ್ಟರು,


ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಡಾ. ರಾಧಕೃಷ್ಣ ಸರ್ವೆಪಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಅವರು ಮಾತನಾಡುತ್ತಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಗುಣಮಟ್ಟ ಹಾಗೂ ಮೂಲ ಭೂತ ಸೌಲಭ್ಯಗಳ ವ್ಯತ್ಯಾಸದಿಂದ ದಾಖಲಾತಿಯ ಸಂಖ್ಯೆ ಕಡಿಮೆಯಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತ ಪರಿಸ್ಥಿತಿ ಉಂಟಾಗಿದೆ. ಈ ಸಂಬಂಧವಾಗಿ ನಾನು ಅಸಧಿವೇಶನದಲ್ಲಿಯೂ ಚರ್ಚಿಸಿ ಸಚಿವರ ಗಮನ ಸೆಳೆದು ಸರ್ಕಾರಿ ಶಾಲಾ ಕಾಲೇಜುಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿರುವುದಾಗಿ ಹೇಳಿದರು.


ಪೋಷಕರಿಗೆ ಇಂಗೀಷ್ ವ್ಯಾಮೋಹದಿಂದಾಗಿ ಖಾಸಗಿ ಶಾಲೆಗಳತ್ತ ಹೆಚ್ಚು ಅಕರ್ಷಿತರಾಗುತ್ತಾರೆ. ಸರ್ಕಾರಿ ಶಾಲೆ ಬಡವರು ಕಲಿಯುವ ಶಾಲೆ ಎಂಬ ಕೀಳಿರಮೆ ಕೆಲವರಲ್ಲಿ ಇರುವುದು ತಪ್ಪು ತಿಳುವಳಿಕೆಯಾಗಿದೆ. ಸಮಾಜದಲ್ಲಿ ಸಾಧನೆ ಮಾಡಿದರುವಂತ ಎಲ್ಲ ಗಣ್ಯರು, ಸಾಧಕರು ಬಹುತೇಕ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರಾಗಿದ್ದಾರೆ ಎಂದು ಅನೇಕರನ್ನು ಉದಾಹರಿಸಿದ ಅವರು ವಸತಿ ಶಾಲೆಗಳು ಹೆಚ್ಚು ಪ್ರಗತಿ ಸಾಧಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.


ರಾಜ್ಯದಲ್ಲಿ ೨ ಸಾವಿರ ಕೆ.ಪಿ.ಎಸ್. ಶಾಲೆಗಳನ್ನು ಮುಖ್ಯ ಮಂತ್ರಿಗಳು ಮಂಜೂರು ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ೩-೫ ಶಾಲೆಗಳನ್ನು ಮಂಜೂರು ಮಾಡಿದ್ದು ನಮ್ಮ ಕೋಲಾರ ಜಿಲ್ಲೆಯ ಹುತ್ತೂರು ಹಾಗೂ ಕ್ಯಾಸಂಬಳ್ಳಿ ವ್ಯಾಪ್ತಿಯಲ್ಲಿ ಶೀಘ್ರದಲ್ಲಿ ಶಂಕು ಸ್ಥಾಪನೆ ಮಾಡಲಾಗುವುದು ಎಂದ ಅವರು ಪ್ರತಿಯೊಬ್ಬರಿಗೂ ನಮ್ಮ ಊರು- ನಮ್ಮ ಶಾಲೆ ಎಂಬ ಅಭಿಮಾನ ಇರಬೇಕು ಉನ್ನತ ಸ್ಥಾನದ ಅನುಕೊಲಕರ ಪರಿಸ್ಥಿತಿ ಹೊಂದಿರುವರು ತಮ್ಮ ಊರು-ಶಾಲೆಯ ಅಭಿವೃದ್ದಿ ಸರ್ಕಾರದ ಜೂತೆ ಕೈ ಜೋಡಿಸುವಂತಾಗ ಬೇಕೆಂದು ಮನವಿ ಮಾಡಿದರು.


ಎಷ್ಟೆ ಉನ್ನತ ಸ್ಥಾನದಲ್ಲಿದ್ದರೂ ಅವರನ್ನು ಗುರುಗಳೆಂದು ಕರೆಯಲು ಸಾಧ್ಯವಿಲ್ಲ. ಯಾರೂ ವಿದ್ಯೆ,ಬುದ್ದಿ ಕಲಿಸಿರುತ್ತಾರೂ ಅವರನ್ನು ಮಾತ್ರ ನಾವುಗಳು ಗುರುಗಳೆಂದು ಕರೆಯಲು ಸಾಧ್ಯ. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದಂತ ಸಾವಿತ್ರಿ ಬಾಪುಲೆ ಕ್ರಾಂತಿಕಾರಿ ಮಹಿಳೆಯಾಗಿದ್ದಾರೆ. ಶಿಕ್ಷಕರಿಗೆ ಶಿಕ್ಷಣದೊಂದಿಗೆ ಈ ಸಮಾಜವನ್ನು ಕಟ್ಟುವಂತ ರಾಷ್ಟ್ರದ ಭವಿಷ್ಯವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಇದೆಯೆಂಬುವುದು ಮರೆಯ ಬಾರದು ಎಂದರು.


ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ಭವನ ನಿರ್ಮಾಣ ಬಹುವರ್ಷಗಳ ಕನಸಾಗಿದೆ. ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳು ಶಿಕ್ಷಕರ ದಿನಾಚರಣೆಯೆಂದು ಆಶ್ವಾಸನೆ ನೀಡಿ ಹೋಗುವುದು ಸಹಜವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಸೆನೆಟ್ ಸದಸ್ಯ ಸೀಸಂದ್ರ ಗೋಪಾಲ್.ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್, ಶಿಕ್ಷಕರ ವಿವಿಧ ಸಂಘಟನೆಗಳ ಅಧ್ಯಕ್ಷರಾದ ಚೌಡಪ್ಪ. ಎಂ.ನಾಗರಾಜ್. ಶಿವಕುಮಾರ್, ಸಿ.ರಮೇಶ್‌ಗೌಡ, ರವಿಕುಮಾರ್, ಎಸ್.ಮುನಿಯಪ್ಪ. ಜಿ.ಶ್ರೀನಿವಾಸ್, ಸದಾನಂದ, ಮುಂತಾದವರು ಉಪಸ್ಥಿತರಿದ್ದರು.