ಬೆಂಗಳೂರು, ಸೆ. ೧೯-ವೀರಶೈವ ಲಿಂಗಾಯತರ ಹೆಗಲ ಮೇಲೆ ಕೋವಿ ಇಟ್ಟು ಹಿಂದೂ ಸಮಾಜ ಒಡೆಯುವ ಹುನ್ನಾರ ಎಂದು ವೀರಶೈವ ಲಿಂಗಾಯತ ಮುಖಂಡ ಅವಿನ್ ಆರಾಧ್ಯ ಹೇಳಿದರು
ಜಾತಿ ಗಣತಿಯಲ್ಲಿ ಹೊಸ ಜಾತಿಗಳನ್ನು ಹಾಗೂ ಧರ್ಮದ ಕಾಲಂನಲ್ಲಿ ಇತರೆ ಎಂಬುದನ್ನು ಸೇರಿಸಿ ಗೊಂದಲವನ್ನು ಉಂಟು ಮಾಡಿ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟನ್ನು ಒಡೆಯುವ ಮಾಡುವ ಉದ್ದೇಶದಿಂದ ಕೆಲ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ
ಹಿಂದೂ ಧರ್ಮಗಳ ಜಾತಿಗೆ ಕ್ರೈಸ್ತ ಎಂಬ ಲೇಬಲ್ ಅನ್ನು ಅಂಟಿಸುವ ಮೂಲಕ ಏನನ್ನು ಸಾಧಿಸಲು ಹೊರಟಿದೆ.
ಅಭಿವೃದ್ಧಿ ಕಾರ್ಯಗಳಲ್ಲಿ ತೊಡುಗುವುದರ ಬದಲು ಧರ್ಮ ಜಾತಿಗಳಲ್ಲಿ ಗೊಂದಲ ಉಂಟು ಮಾಡುವ ಕೆಲಸಗಳಾಗುತ್ತಿದೆ. ಬೆಂಗಳೂರಿನಲ್ಲಿರುವ ಗುಂಡಿಗಳ ಬಗ್ಗೆ ಗಮನ ಹರಿಸಿದರೆ ಸಾಕಾಗಿದೆ.
ಅದರ ಬದಲು ಇಲ್ಲದ ಗೊಂದಲ ಬೇಡವಾಗಿದೆ. ಸರಿಯಾದ ಸಿದ್ದತೆಯಿಲ್ಲದ ಜಾತಿಗಣತಿ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಪೋಲು ಮಾಡುವುದು ತಪ್ಪು. ಎಂದು ಅವರು ತಿಳಿಸಿದ್ದಾರೆ.
ಮಾನವ ಧರ್ಮವನ್ನು ಜಗತ್ತಿಗೆ ಪ್ರತಿಪಾದಿಸಿದ ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಮುಂದಾಗಿರುವುದು ವಿಪರ್ಯಾಸವೇ ಸರಿ. ಎಂದಿದ್ದಾರೆ.



























