
ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೩೧: ಕಲ್ಲು, ಮಣ್ಣು ಸೇರಿದಂತೆ ಗುಂಡಾರಗಳಲ್ಲಿ ದೇವರಿಲ್ಲ. ತನ್ನ ತಾನರಿವಿನ ಮೂಲಕ ಮನುಷ್ಯನ ಅಂಗ-ಗುಣಗಳಲ್ಲಿ ಅಡಗಿರುವ ದೈವತ್ವವನ್ನು ಅರಿತುಕೊಂಡಾಗ ಮನಸ್ಸಿಗೆ ಆಳವಾದ ಮಾನಸಿಕ ಶಾಂತಿ ದೊರೆಯುತ್ತದೆ ಎಂದು ಪ್ರೊ. ಜೆ.ಎಸ್. ಪಾಟೀಲ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ೨೨ನೇ ಶರಣತತ್ವ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ‘ಶರಣರು ಕಂಡ ದೇವರ ಸ್ವರೂಪ’ ವಿಷಯ ಕುರಿತು ಅವರು ಮಾತನಾಡಿದರು.
ಅಜ್ಜಳಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗ ದಾವಣಗೆರೆ ಇವರ ಪ್ರಾಯೋಜಕತ್ವದಲ್ಲಿ ನಡೆದ ಕಮ್ಮಟದ ಷಟ್ಸ್ಥಲ ಧ್ವಜಾರೋಹಣವನ್ನು ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ವಿ.ಸಿ. ನಾಗಠಾಣ ನೆರವೇರಿಸಿದರು.
ಪ.ಪೂ. ಶ್ರೀ ಬಸವಲಿಂಗ ಮಹಾಸ್ವಾಮಿಗಳು ಜ್ಞಾನಯೋಗಾಶ್ರಮ ಅವರು ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಮನಗೂಳಿಯ ಪೂಜ್ಯ ವಿರಕ್ತಿಶಾನಂದ ಸ್ವಾಮೀಜಿ ಅವರು ಸಾರ್ಥಕ ಬದುಕಿಗಾಗಿ ಶರಣಧರ್ಮದ ಮಹತ್ವ ಕುರಿತು ಮಾತನಾಡಿದರು.
ದಾವಣಗೆರೆ ಬಸವ ಬಳಗದ ಅಧ್ಯಕ್ಷೆ ಶರಣೆ ಭುವನೇಶ್ವರಿ ತಾಯಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಂಬುನಾಥ ಕಂಚಾಣಿ ಮಾತನಾಡಿದರು.
ವೇದಿಕೆಯಲ್ಲಿ ಮಾತೋಶ್ರೀ ಸಿಂದಗಿ ತಾಯಿ ಹಾಗೂ ಚಂದ್ರಶೇಖರ ಇಟಗಿ ಉಪಸ್ಥಿತರಿದ್ದರು. ಶರಣ ರುದ್ರಪ್ಪನವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಭಾಷ್ ಕನ್ನೂರು ಅವರು ಕಾರ್ಯಕ್ರಮ ನಿರೂಪಿಸಿದರು.
ಶರಣತತ್ವ ಕಮ್ಮಟದಲ್ಲಿ ಶರಣರ ವಿಚಾರಧಾರೆ, ಶರಣಧರ್ಮ ಹಾಗೂ ಸಾರ್ಥಕ ಬದುಕಿನ ಮೌಲ್ಯಗಳ ಕುರಿತು ಚಿಂತನ-ಮAಥನ ನಡೆಯಿತು.





















