
ಕೋಲಾರ,ಆ,೩೧-ಪಕ್ಷದ ಸಂಘಟನೆಗೆ ಶ್ರಮಿಸಿದರೆ ಪಕ್ಷವು ತಡವಾಗಿಯಾದರೂ ಗುರುತಿಸುತ್ತದೆ ಎಂಬುವುದಕ್ಕ ಎಲ್.ಎ.ಮಂಜುನಾಥ್ ಸಾಕ್ಷೀಕರಿಸಿದ್ದಾರೆ.ಮಂಜುನಾಥ್ ಸರ್ಕಾರಿ ಉದ್ಯೋಗದಲ್ಲಿದ್ದು ನಂತರದಲ್ಲಿ ಅವರು ಪಕ್ಷಕ್ಕಾಗಿ ದುಡಿದಿರುವುದನ್ನು ಗುರುತಿಸಿ ಸರ್ಕಾರದ ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಕೋಲಾರ ಜಿಲ್ಲಾ ತಿಗಳ ವಹ್ನಿಕುಲ ಕ್ಷತ್ರಿಯ ಸಮನ್ವಯ ಸಮಿತಿ, ಜಿಲ್ಲಾ ಸಮಿತಿಯ ಯುವ ವೇದಿಕೆ< ಶ್ರೀ ದ್ರೌಪತಿ ಧರ್ಮರಾಯಸ್ವಾಮಿ ಕ್ರೆಡಿಟ್ ಕೋ ಅಪರೇಟರ್ ಸೊಸೈಟಿ ಜಿಲ್ಲಾ ಕರಗದ ದೇವಾಲಯ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ತಿಗಳ ಸಮುದಾಯದ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಎಲ್.ಎ.ಮಂಜುನಾಥ್‌ಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿಭಾಗವಹಿಸಿ ಅವರು ಮಾತನಾಡಿದರು.
ಈ ಸ್ಥಾನ ನೀಡಲು ಜಿಲ್ಲೆಯ ಮತ್ತು ರಾಜ್ಯದ ಅನೇಕ ನಾಯಕರು ಅನುಮೋದಿಸಿ ಸಹಕಾರ ನೀಡಿದ್ದಾರೆ. ಮುಂದೆಯೂ ನಿಗಮಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ನಿಯೋಗವು ಮುಖ್ಯ ಮಂತ್ರಿ ಬಳಿ ತೆರಳಿ ಮಂಜೂರು ಮಾಡಿಸುವುದಾಗಿ ರಾಜ್ಯ ಸಮಾಜ ಕಲ್ಯಾಣ ಸಚಿವ ಕೆ.ಹೆಚ್.ಮುನಿಯಪ್ಪ ಭರವಸೆ ನೀಡಿದರು.
ಎಲ್.ಎ.ಮಂಜುನಾಥ್‌ರನ್ನು ಅಧ್ಯಕ್ಷರನ್ನಾಗಿ ಮಾಡಲು ಶಾಸಕ ಕೊತ್ತೂರು ಮಂಜುನಾಥ್, ನಸ್ಸೀರ್ ಆಹ್ಮದ್, ಜಮೀರ್ ಆಹ್ಮದ್, ನಂಜೇಗೌಡ, ಎಂ.ಸಿ.ವೇಣುಗೋಪಾಲ್, ಎಂಎಲ್.ಸಿ. ರಮೇಶ್, ನರೇಂದ್ರಬಾಬು ಸೇರಿದಂತೆ ಎಲ್ಲರು ಸಹಕಾರ ನೀಡಿದ ಹಿನ್ನಲೆಯಲ್ಲಿ ಆಗಿನ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ನೇಮಕ ಮಾಡಿದರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊತ್ತೂರು.ಡಾ.ಜಿ.,ಮಂಜುನಾಥ್ ಮಾತನಾಡಿ,ನಿಗಮದ ಅಧ್ಯಕ್ಷ ಸ್ಥಾನ ವಹಿಸಿ ಕೊಂಡ ಮೇಲೆ ಜವಾಬ್ದಾರಿಯುತ ಶಾಶ್ವತವಾದ ಕೆಲಸಗಳನ್ನು ಮಾಡಿದಾಗ ಮಾತ್ರ ಸಾರ್ಥಕವಾಗಲಿದೆ. ನಿಗಮಕ್ಕೆ ಅನುದಾನ ಕೊಡಿಸಲು ನಾವೆಲ್ಲಾ ಸಹಕಾರ ನೀಡುತ್ತೇವೆ ಎಂದ ಅವರು ನಿಮ್ಮ ಆಡಳಿತದಲ್ಲಿ ಪ್ರಮುಖವಾಗಿ ಶಿಕ್ಷಣ, ಉದ್ಯೋಗ,ಹಾಗೂ ವೃತ್ತಿಗೆ ಹೆಚ್ಚಿನ ಒತ್ತು ನೀಡ ಬೇಕು.
ಶಾಶ್ವತವಾದ ಕೆಲಸಗಳನ್ನು ಮಾಡಿದಾಗ ಮಾತ್ರ ಜನಮಾಸದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಜನರ ಮತ್ತು ಸರ್ಕಾರದ ನಂಬಿಕೆ, ವಿಶ್ವಾಸಗಳನ್ನು ಉಳಿಸಿ ಕೊಳ್ಳುವಂತಾಗ ಬೇಕೆಂದು ಕಿವಿ ಮಾತು ತಿಳಿಸಿದರು,
ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡ ಮಾತನಾಡಿ ರಾಜ್ಯದಲ್ಲಿ ತಳ ಸಮುದಾಯವಾದ ತಿಗಳ ಸಮುದಾಯದ ಅಭಿವೃದ್ದಿಗೆ ಕಾಂಗ್ರೇಸ್ ನಿಗಮ ರಚಿಸಿರುವುದು ಪ್ರಥಮವಾಗಿದ್ದು ಅದರಲ್ಲೂ ನಮ್ಮ ಜಿಲ್ಲೆಯವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಇತಿಹಾಸದ ದಾಖಲೆಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಸಿ. ವೇಣುಗೋಪಾಲ್ ಮಾತನಾಡಿ,ಸಣ್ಣ ಸಮುದಾಯಗಳು ಸ್ವಾಭಿಮಾನಕ್ಕೆ ಅಂಜಬಾರದು ಸ್ವಾಭಿಮಾನದಿಂದ ಬದುಕುವ ಹಕ್ಕು ಪ್ರತಿಯೊಬ್ಬರಿಗೊ ಇದೆ. ಸ್ವಾರ್ಥಕ್ಕಾಗಿ ಅಧಿಕಾರವನ್ನು ದುರ್‍ಬಳಿಸದೆ ಸಾರ್ವಜನಿಕರ ಹಿತಕ್ಕಾಗಿ ಸದ್ಬಳಿಸಿ ಕೊಂಡಲ್ಲಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಿರಿ, ನಾಯಕರಾದವರೂ ಅವಕಾಶಗಳನ್ನು ಕೊಡುವಲ್ಲಿ ಯಾರಿಗೂ ತಾರತಮ್ಯ ಮಾಡದೆ ಸಮಾಜಿಕ ನ್ಯಾಯ ದೊರಕಿಸಿ ಕೊಡಬೇಕೆಂದರು.
ಇದಕ್ಕೂ ಮುನ್ನು ಅಭಿನಂದನ ಪುರಸ್ಕೃತರಾದ ಕರ್ನಾಟಕ ರಾಜ್ಯ ತಿಗಳ ಸಮುದಾಯ ಅಭಿವೃದ್ದಿ ನಿಗಮದ ಆಧ್ಯಕ್ಷರಾಗ ಎಲ್.ಎ.ಮಂಜುನಾಥ್ ಪ್ರಸ್ತಾವಿಕ ನುಡಿಗಳಾಡಿದರು
ಕಾರ್ಯಕ್ರಮದಲ್ಲಿ ಶಿವನಾಪುರ ವಹ್ನಿಕುಲ ಕ್ಷತ್ರಿಯ ಗುರುಪೀಠ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿ ಮತ್ತು ದೇವನಹಳ್ಳಿ ತಾಲ್ಲೂಕಿನ ಮಳ್ಳಳಿ ಶ್ರೀ ದ್ರೌಪತಿ ಆದಿಶಕ್ತಿ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ಬಾಲಯೋಗಿ ಸಾಯಿ ಮಂಜುನಾಥ್ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಉದ್ಘಾಟಿಸಿ ಆಶೀರ್ವಾಚನ ನೀಡಿದರು.
ಪಲ್ಲವಿ ಮಣಿ ಮಾತನಾಡಿದರು.ವೇದಿಕೆಯಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಮೀನಾರಾಯಣ್, ಮುಖಂಡರಾದ ಪ್ರಸಾದ್ ಬಾಬು, ಜಯದೇವ್, (ಬಿ.ಬಿ.ಎಂ.ಪಿ)ಹೆಚ್.ಬಸವರಾಜ್ ತಿಗಳ ಸಮುದಾಯದ ಗೌರವಾಧ್ಯಕ್ಷ ಎಂ.ವೆಂಕಟೇಶ್. ವೇಮಗಲ್ ಪ.ಪಂ.ಬಿ.ಎಂ.ನಾಗೇಶ್, ವೈ.ಜಗದೀಶ್, ರಾಮಕೃಷ್ಣಮೂರ್ತಿ, ದಾಸರಹಳ್ಳಿ ಮಂಜುನಾಥ್, ಮಾಲೂರು ವೆಂಕಟೇಶ್, ಕ್ಯಾರೆಟ್ ರಾಮಣ್ಣ, ಅಂಜನಪ್ಪ, ಗೋವಿಂದರಾಜ್, ರಾಮಕೃಷ್ಣಪ್ಪ, ವರುಣ್, ಮುನಿವೀರಪ್ಪ, ನವೀನಾ. ಮುನಿನಾಗಪ್ಪ, ರಾಜಪ್ಪ, ಮುನಿರತ್ನ, ಜಯರಾಮ್ ಮುಂತದವರು ಉಪಸ್ಥಿತರಿದ್ದರರು.

































