ಕೊಳದಂತೆ ಭಾಸವಾಗುತ್ತಿರುವ ಪಿಚರ್ಡ್ ರಸ್ತೆ ಸವಾರರ ಪರದಾಟ

ಕೆಜಿಎಫ್:ಸೆ:೧೨: ಕಳೆದ ೧ ವಾರದಿಂದ ನಗರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಜನರು ವಾಹನ ಸವಾರರು ಹೈರಾಣಾಗಿದ್ದು ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದರು ರಸ್ತೆಯಲ್ಲಿ ನಿಲ್ಲುವ ನೀರನ್ನು ಹೊರ ಹಾಕುವ ಕೆಲಸಕ್ಕೆ ನಗರಸಭೆ ಮುಂದಾಗಿಲ್ಲ ಎಂಬ ಅಸಮಾಧನವನ್ನು ನಾಗರೀಕರು ಹೊರ ಹಾಕುತ್ತಿದ್ದಾರೆ.


ನಗರದಲ್ಲಿ ಕಳೆದ ೧ ವಾರದಿಂದ ಸಂಜೆಯಾದರೆ ಸಾಕು ಬಿಟ್ಟುಬಿಡದೆ ವರುಣ ತನ್ನ ಪ್ರತಾಪವನ್ನು ತೋರಿಸುತ್ತಿದ್ದು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದರೆ ಕೆಲವು ರಸ್ತೆಗಳಲ್ಲಿ ನೀರು ನಿಲ್ಲುವುದು ಅಲ್ಲದೆ ನೀರಿನೊಂದಿಗೆ ಮಣ್ಣು ಬಂದು ರಸ್ತೆಯಲ್ಲೆ ಮಣ್ಣು ಆಗುತ್ತಿದ್ದರು ಸ್ಥಳೀಯ ಆಡಳಿತ ನಿರ್ವಹಿಸುತ್ತಿರುವ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.


ನಗರದ ಪಿಚರ್ಡ್ ರಸ್ತೆಯಲ್ಲಿ ಮಳೆ ಬಂದರೆ ಸಾಕು ರಸ್ತೆಯಲ್ಲೆ ನೀರು ತುಂಬಿ ವಾಹನ ಸವಾರರು ಒಡಾಟ ನಡೆಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ ಆದರೆ ಇದೇ ರಸ್ತೆಯಲ್ಲಿ ಒಡಾಟ ನಡೆಸುವ ಜನಪ್ರತಿನಿಧಿಗಳು ಇತ್ತ ಗಮನವನ್ನೇ ಹರಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ .