ಸಿಂದಗಿ : ಅ.17:ವಿವಿಧ ಬೇಡಿಕೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಇಲ್ಲಿನ ಬಿಜೆಪಿ ಮಂಡಲ ರೈತ ಮೋರ್ಚಾ ನೇತ್ರತ್ವದಲ್ಲಿ ಆಹೋರಾತ್ರಿ ನಡೆದಿರುವ ಬೃಹತ್ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು ರೈತರ ಅಪಾರ ಬೆಂಬಲ ವ್ಯಕ್ತವಾಗಿದೆ.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಆರಂಭಗೊಂಡ ಧರಣಿ ಸತ್ಯಾಗ್ರಹದಲ್ಲಿ ಹೋರಾಟಗಾರರು ಧರಣಿ ಸತ್ಯಾಗ್ರಹದಲ್ಲಿಯೆ ಊಟ ಮಾಡುವುದು ಸಂಜೆಯಾಗುತ್ತಿದ್ದಂತೆಯೆ ಡೊಳ್ಳಿನ ಹಾಡುಗಳು ಭಜನೆ ಮೂಲಕ ಜಾಗರಣೆ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ರೈತ ಸಂಕುಲ ಸಂಕಷ್ಠದಲ್ಲಿದ್ದು ಸೂಕ್ತ ಪರಿಹಾರ ನೀಡುವವರೆಗೂ ಹೋರಾಟ ಹಿಂದಕ್ಕೆ ಪಡೆಯುವದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಶಾಸಕ ರಮೇಶ ಬೂಸನೂರ, ಮಂಡಳ ಅಧ್ಯಕ್ಷ ಸಂತೋಷ ಪಾಟೀಲ, ರೈತ ಮೋರ್ಚಾ ಅಧ್ಯಕ್ಷ ಪೀರು ಕೆರೂರ ನೇತ್ರತ್ವದಲ್ಲಿ ನಡೆದಿರುವ 3 ನೇ ದಿನದ ಸತ್ಯಾಗ್ರಹಕ್ಕೆ ಜಿಲ್ಲೆಯ ವಿವಿಧ ಬಿಜೆಪಿ ನಾಯಕರು ಬೆಟ್ಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ದೇವರಹಿಪ್ಪರಗಿ, ಮಾಜಿ ಶಾಸಕ ಸೋಮನಗೌಡ ಪಾಟೀಲ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ, ಚುದಾನಂದ ಚಲವಾದಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಗೀತಾ ಚೌಧರಿ, ಪ್ರಭುಗೌಡ ಪಾಟೀಲ, ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮಲ್ಲಿಕಾರ್ಜುನ ಜೋಗೂರ, ಎಸ್.ಎ.ಪಾಟೀಲ, ಮತ್ತಿತರರು ಬೆಟ್ಟಿ ನೀಡಿ ಬೆಂಬಲ ವ್ಯಕ್ತಪಡಿಸಿ ರಾಜ್ಯ ಸರಕಾರದ ವಿರುದ್ದ ತೀವೃ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಹೋರಾಟದ ನೇತ್ರತ್ವ ವಹಿಸಿರುವ ಮಾಜಿ ಶಾಸಕ ರಮೇಶ ಬೂಸನೂರ ಮಾತನಾಡಿ ಪರಿಹಾರ ಬಿಡುಗಡೆ ಮಾಡುವ ದಿನಾಂಕ ಪ್ರಕಟಿಸಿದರೆ ಹೋರಾಟ ಹಿಂದಕ್ಕೆ ಪಡೆಯಲಾಗುವುದು ನಿಮ್ಮ ಬೊಕ್ಕಸ ಖಾಲಿಯಾಗಿದೆ ದಮ್ಮು ತಾಕತ್ತು ಇದ್ದರೆ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ನಿಯೋಗ ಹೋಗಿ ವಾಸ್ತವಾಂಶ ತಿಳಿಸಬೇಕು. ಸಿಂದಗಿ ಮತ್ತು ಆಲಮೇಲ ಬಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದೆ. ನದಿ ಪಾತ್ರದ ಜನತೆಯ ಜೊತೆಗೆ ಎರಡು ತಾಲೂಕುಗಳ ಎಲ್ಲಹಳ್ಳಿಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಆದರೂ ಆಡಳಿತ ವ್ಯವಸ್ಥೆ ರೈತರಿಗೆ ಸ್ಪಂದಿಸುತ್ತಿಲ್ಲ. ಬೆಳೆ ಹಾನಿ ಸಮೀಕ್ಷೆ ಸರಿಯಾಗಿ ಮಾಡುತ್ತಿಲ್ಲ. ಕೇಂದ್ರ ಸರಕಾರಕ್ಕೂ ಕೂಡಾ ನಿಖರ ಮಾಹಿತಿ ಕೊಡುತ್ತಿಲ್ಲ. ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ರೈತರು ತೀವೃ ಸಂಕಷ್ಠದಲ್ಲಿದ್ದರೂ ಸಹ ಅವರ ನೆರವಿಗೆ ಬರುತ್ತಿಲ್ಲ ಎಂದು ಅರೋಪಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕರವೆ ಮುಖಂಡ ಸಂತೋಷ ಪಾಟೀಲ ಡಂಬಳ ರೈತ ಮೋರ್ಚಾ ಅಧ್ಯಕ್ಷ ಪೀರು ಕೆರೂರ, ಶ್ರೀಕಾಂತ ಬಿಜಾಪೂರ, ಬಿಜೆಪಿ ಮುಖಂಡ ಗುರು ತಳವಾರ, ಮುಖಂಡರಾದ ಶ್ರೀಶೈಲ ಮಾಗಣಗೇರಿ, ಬಿ.ಎಚ್.ಬಿರಾದಾರ, ಶಿಲ್ಪಾ ಕುದರಗೊಂಡ, ಶ್ರೀಶೈಲ ಚಳ್ಳಗಿ, ಮಲ್ಲು ಸಾವಳಸಂಗ, ಪ್ರಶಾಂತ ಕದ್ದರಕಿ, ಅಶೋಕ ನಾರಾಯಾಣಪೂರ, ಸಿದ್ರಾಮ ಅನಗೊಂಡ, ಬಸವರಾಜ ಹೂಗಾರ. ರಮೇಶ ಹೆಬ್ಬಾಳ, ಸಂಜೀವ ಪಾಟೀಲ, ಹರೀಶ ಎಂಟಮಾನ. ಬಸವರಾಜ ಸಜ್ಜನ್, ಮತ್ತಿತರಿದ್ದರು.






















