ಕಮಲಾಪುರ:ಸೆ.7:ಸಮಾಜ, ಸಂಸ್ಕøತಿ, ಆಚಾರ, ವಿಚಾರದ ತಿಳುವಳಿಕೆ ಮೂಡಿಸಿ ಉತ್ತಮ ನಾಗರಿಕರನ್ನಾಗಿ ವ್ಯಕ್ತಿತ್ವ ರೂಪಿಸುವ ಅರಿವನ್ನು ಒದಗಿಸವ ಮೂಲ ವ್ಯಕ್ತಿಯೆ ಗುರು ಎಂದು ತಡೋಳಾದ ಗುರುಕುಲಾಶ್ರಮದ ರಾಜೇಶ್ವರ ಶಿವಾಚಾರ್ಯ ತಿಳಿಸಿದರು.
ಪಟ್ಟಣದ ಆಕೃತಿ ಬಿರಾದಾರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 2004-2005ರ ಪೂರ್ವದ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಕಲಿಕೆಗಾಗಿ ಶಿಕ್ಷಕರು ಮಕ್ಕಳನ್ನು ಶಿಕ್ಷಿಸುತ್ತಿದ್ದರು. ಅದು ದ್ವೇಷ ಅಲ್ಲ ಮಾತೃಹೃದಯದ ಕಾಳಜಿಯಾಗಿತ್ತು. ಆ ಕಾಳಜಿ ಇಂದಿನ ನೇಪಥ್ಯಕ್ಕೆ ಸರಿದ ಶಿಕ್ಷಕರಲ್ಲಿ ಕಾಣಲು ಸಾಧ್ಯವಿಲ್ಲ. ಶಿಕ್ಷಕರನ್ನು ಬಿಸಿಯೂಟದಿಂದ ಮುಕ್ತರನ್ನಾಗಿಸಬೇಕು. ಅನವಶ್ಯಕ ತರಬೇತಿಯಲ್ಲಿ, ಸಂಘ, ಸಂಸ್ಥೆ ಚಟುವಟಿಕೆಗಳಲ್ಲಿ ಕಾಲ ಕಳೆಯುತ್ತಿರುವುದರಿಂದ ಮಕ್ಕಳ ಕಡೆ ಗಮನ ಕೊಡಲಾಗುತ್ತಿಲ್ಲ. ಸರ್ಕಾರ ಶಾಲೆ, ಶಿಕ್ಷಕರಿದ್ದರೂ ಖಾಸಗಿ ಶಿಕ್ಷಣ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷ ಗಟ್ಟಲೆ ದುಡ್ಡು ಸುರಿಯುತ್ತಿದ್ದಾರೆ. ಇದೂ ಕೂಡಾ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದ್ದ. ಶಿಕ್ಷಣ, ಆರೋಗ್ಯ, ನ್ಯಾಯ ಎಲ್ಲರಿಗೂ ಉಚಿತವಾಗಿ ದೊರೆಯಬೇಕು. ಶಿಕ್ಷಣದಲ್ಲ, ಧರ್ಮ, ಅರ್ಥ, ಕಾಮ, ಮೋಕ್ಷ ಇರಬೇಕು. ದುಡ್ಡು ಸುರಿದು ದುಡ್ಡು ಮಾಡುವ ಮೆಕಾಲೆ ಶಿಕ್ಷಣ ನೀತಿ ಕಿತ್ತೊಗೆಯಬೇಕು. ಪ್ರತಿಭೆ ಬಡವರ ಜೋಪಡಿಯಲ್ಲಿ ಹುಟ್ಟುತ್ತದೆ. ಶಾಲೆಗಳು ಅದನ್ನು ಪೆÇೀಷಿಸುವ ಪ್ರಾಮಾಣಿಕ ಬದುಕಿನ ಪ್ರೇರಣಾ ಕೇಂದ್ರಗಳಾಗಬೇಕು. ಮಾತೃ, ಪಿತೃ, ಆಚಾರ್ಯ, ರಾಷ್ಟ್ರ ದೇವೂಭವ ಎಂಬ ವಿಚಾರ ಅಳವಡಿಸಿಕೊಳ್ಳಬೇಕು. ಶಿಕ್ಷಕರ ತವರೂರಾದ ಕಮಲಾಪುರದಲ್ಲಿನ ಈ ಭವ್ಯ ಕಾರ್ಯಕ್ರಮ ಇಲ್ಲಿನ ಮಣ್ಣಿನ ಮಕ್ಕಳಲ್ಲಿ ಶಿಕ್ಷಕರಿಗಿರು ಗೌರವ ಮನಗಾಣಿಸುತ್ತದೆ ಎಂದರು.
ತೆರೆದ ಟ್ರ್ಯಾಕ್ಟರ್ ನಲ್ಲಿ ಶಿಕ್ಷಕರನ್ನು ಕೂರಿಸಿ ಬಸವೇಶ್ವರ ವೃತ್ತದಿಂದ ಪಟ್ಟಣದ ವಿವಿಧ ಭೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು, ಬ್ಯಾಂಡ್ ಬಾಜಾ ಸದ್ದಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.120 ಕ್ಕಿಂತ ಹೆಚ್ಚು ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಬಬಲಾದ ಗುರುಪಾದಲಿಂಗ ಮಹಾಶಿವಯೋಗಿ, ಸೊಂತನ ಅಭಿನವ ಶರಣ ಶಂಕರಲಿಂಗ ಮಹಾರಾಜ, ನಿವೃತ್ತ ಶಿಕ್ಷಕ ಪುಂಡಲೀಕರಾವ ಚಿರಡೆ, ನಿವೃತ್ತ ಪ್ರಾಚಾರ್ಯ ಎಮ್.ಕೆ.ನಜೀರ ಅಹಮ್ಮದ್, ಕೆ.ಎಮ್. ಪಾಟೀಲ, ಮಾತೆ ಜ್ಞಾನೇಶ್ವರಿ, ಕಂಟೆಪ್ಪ ಸೂಗೂರ, ಗುರುರಾಜ ಮಾಟೂರ ವಿದ್ಯಾರ್ಥಿ ಮುಖಂಡ ವಿಜಯಕುಮಾರ ಸುಗೂರ, ಬಸವರಾಜ ಶೇರಿ, ಶಾಂತಾ ಚಂಡ್ರಕಿ, ಭವಾನಿ ಜೋಶಿ, ಬಸವಾನಂದ ಗೊಬ್ಬರವಾಡಿ, ಶಿವಾ ದೋಶೆಟ್ಟಿ, ಡಾ.ತೀರ್ಥಕುಮಾರ ಬೆಳಕೋಟಾ, ಶಶಿಧರ ಮಾಕಾ, ಡಾ.ಜ್ಯೋತೀರ್ಮಯ ಖಡಕೆ, ಸುರೇಖಾ ವೀರಶೆಟ್ಟಿ, ನಾಗರಾಜ ಮಂಠಾಳ, ಗುರುರಾಜ ಕೋರಿ, ಸತೀಶ ಮಾಟೂರ, ಜಿತೇಂದ್ರ ಪಾಟೀಲ, ಸುಧಾ ಮಾಟೂರ, ಸುಜಾತಾ ಪಾಟೀಲ, ವೀರೇಶ ಸುಗೂರ, ನೇತ್ರಾವತಿ ರಾಂಪೂರ, ವನಿತಾ ದೋಶೆಟ್ಟಿ, ಶಿಲ್ಪಾ ಕಲ್ಕಿ, ಗುಂಡಪ್ಪ ಮೋಳಕೇರಿ, ರವೀಂದ್ರ ಬಿ.ಕೆ, ಹೈದರಾಲಿ, ವಿಷ್ಣುವರ್ಧನ ಪಂಚಾಳ, ಸುಭಾಷ ಗೈದನಕರ್, ಸಿದ್ದಮ್ಮ ಜಾಂತಿ, ಸಾಯಿನಾಥ ಮಾಟೂರ, ಶೈಲಜಾ ಸುಗೂರ, ಸುಹಾಸಿನಿ ಹಾಲು, ಅಂಬಿಕಾ ಉಪ್ಪಿನ, ಸಂಜು ಕುಮ್ಮಣ, ಗಾಯತ್ರಿ, ಅರುಣಾ ಮತ್ತಿತರರು ಹಾಜರಿದ್ದರು.























