
ಅಥಣಿ :ಆ.೪: ನಿರ್ಗತಿಕ ಅನಾಥ ಮತ್ತು ಎಚ್‌ಐವಿ ಪೀಡಿದ ಮಕ್ಕಳ ಸಂರಕ್ಷಣೆ ಜೊತೆಗೆ ಅನೇಕ ಸಮಾಜಮುಖಿಗೆ ಸೇವೆಗಳನ್ನು ಮಾಡುತ್ತಿರುವ ನಿಜಪ್ಪ ಹಿರೇಮನಿ ದಂಪತಿಗಳ ಕಾರ್ಯ ಶ್ಲಾಘನೀಯ ಎಂದು ಶೇಗುಣಸಿ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಮಲಾಬಾದ ಗ್ರಾಮದಲ್ಲಿರುವ ವಿಮೋಚನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಇಳಕಲ್ಲದ ಲಿಂ.ಮಹಾAತ ಶಿವಯೋಗಿಗಳ ಜಯಂತಿ ಅಂಗವಾಗಿ ‘ವ್ಯಸನ ಮುಕ್ತ ದಿನಾಚರಣೆ’ ಮತ್ತು ಮಹಾಂತ ಮಂದಾರ ಪ್ರಶಸ್ತಿ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಹಸಿದವರಿಗೆ ಅನ್ನ, ಆಶ್ರಯ ನೀಡುವುದರ ಜೊತೆಗೆ ಅನಾಥ ಮಕ್ಕಳ ಬಾಳಿನಲ್ಲಿ ಬೆಳಕು ಮೂಡಿಸುತ್ತಿರುವ ಅವರ ಕಾಯಕ ಅತ್ಯಂತ ಶ್ರೇಷ್ಠವಾದದ್ದು, ಅವರ ಸೇವೆಯನ್ನು ಗುರುತಿಸಿ ವಿಮೋಚನಾ ಸಂಸ್ಥೆ ನೀಡುತ್ತಿರುವ ಮಹಾಂತ ಮಂದಾರ ಪ್ರಶಸ್ತಿ ಅವರಿಗೆ ಇನ್ನಷ್ಟು ಪ್ರೇರಣೆ ನೀಡಲಿದೆ.ಅವರ ಈ ಶ್ರೇಷ್ಠ ಕಾಯಕ ನಿರಂತರವಾಗಿ ಜರುಗಲಿ ಎಂದರು
ಇಳಕಲ್ಲದ ಡಾ.ಮಹಾಂತ ಶಿವಯೋಗಿಗಳು ನಾಡಿನುದ್ದಗಲಕ್ಕೂ ಸಂಚರಿಸಿ ದುಶ್ಚಟ ಬಿಡಿಸಿ ಬಸವತತ್ವ ಬೋಧಿಸಿದರು. ಅವರ ಮಾರ್ಗದರ್ಶನದಲ್ಲಿ ಬಿ ಎಲ್ ಪಾಟೀಲ್ ವಕೀಲರು ವಿಮೋಚನಾ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ನೊಂದವರ ಬಾಳಿಗೆ ಬೆಳಕಾಗಿದ್ದಾರೆ ಎಂದು ಶ್ಲಾಘಸಿದರು.
ಸಮಾರಂಭವನ್ನು ಉದ್ಗಾಟಿಸಿದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಲಯದ ಶಾಸಕ ಅರವಿಂದ ಬೆಲ್ಲದ ಮಾತನಾಡಿ ಡಾ. ಮಹಾಂತ ಸ್ವಾಮೀಜಿ ಅವರು ೧೯೭೫ರಲ್ಲಿ ಪ್ರಾರಂಭಿಸಿದ ವ್ಯಸನಮುಕ್ತ ಸಾಮಾಜಿಕ ಆಂದೋಲನವು ಸಮಾಜ ಪರಿವರ್ತನೆಗೆ ಸಹಕಾರಿಯಾಗಿದ್ದು, ಜನರ ದುಶ್ಚಟಗಳನ್ನು ಬಿಡಿಸಲು ಜೋಳಿಗೆ ಹಿಡಿದು ಭಿಕ್ಷೆ ಬೇಡುವ ಮೂಲಕ ಸಮಾಜದಲ್ಲಿ ದೊಡ್ಡ ಪರಿವರ್ತನೆ ತಂದ ಒಂದು ವಿಶಿಷ್ಟ ಹಾಗೂ ಅಸಾಮಾನ್ಯ ಕ್ರಾಂತಿಯಾಗಿದೆ. ಅವರ ಸ್ಮರಣೆಯ ಹೆಸರಿನಲ್ಲಿ ಇನ್ನೂ ಜನ ಸಂಸ್ಥೆಯು ನಿಸ್ವಾರ್ಥದಿಂದ ಸಮಾಜಮುಖಿ ಸೇವೆ ಸಲ್ಲಿಸುವವರನ್ನ ಗುರುತಿಸಿ ಮಹಾಂತ ಮಂದಾರ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಡಿಭಾಗದ ಪ್ರದೇಶದಲ್ಲಿ ವಿಮೋಚನಾ ಸಂಸ್ಥೆಯ ಮೂಲಕ ಹಿರಿಯ ನ್ಯಾಯವಾದಿ ಬಿ ಎಲ್ ಪಾಟೀಲ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನಾಂಗದ ಮಕ್ಕಳಿಗೆ, ಬಡವರ ಮತ್ತು ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಮೋಚನಾ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಮೂಲಕ ಬಡವರ ಬದುಕಿಗೆ ಆಸರೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಅರವಿಂದ ದೇಶಪಾಂಡೆ ಸಾಂಸ್ಕೃತಿಕ ನಾಯಕ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿ, ಇಳಕಲ್ಲದ ಡಾ.ಮಹಾಂತ ಶಿವಯೋಗಿಗಳು, ಗದುಗಿನ ಡಾ.ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ನನಗೆ ಪ್ರೇರಕ ಶಕ್ತಿಯಾಗಿದ್ದಾರೆ. ಪುರಾಣ, ಪ್ರವಚನಕ್ಕಿಂತ ಜನರ ದುಶ್ಚಟ ಬಿಡಿಸಿ ಸರಿದಾರಿಗೆ ತರುವಲ್ಲಿ ಶ್ರಮಿಸಿದ ಪೂಜ್ಯರು ಬಡಜನರ ಉದ್ದಾರಕ್ಕೆ ನನಗೆ ದಾರಿ ತೋರಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಡೆದು ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ವಿಮೋಚನ ಸಂಸ್ಥೆಯನ್ನ ಆರಂಭಿಸಿದವು. ಈ ಸಂಸ್ಥೆ ಇಂದು ಹೆಮ್ಮೆರವಾಗಿ ಬೆಳೆಯುತ್ತಿರುವುದು ನಮ್ಮೆಲ್ಲರಿಗೆ ಸಂತಸ. ಇಳಕಲ್ಲದ ಮಹಾಂತ ಶಿವಯೋಗಿಗಳ ಜಯಂತಿಯನ್ನು ಸರ್ಕಾರ ವ್ಯಸನ ಮುಕ್ತ ದಿನಾಚರಣೆ ಎಂದು ಆಚರಿಸುತ್ತಿದೆ. ಈ ದಿನ ಆಚರಣೆಯ ಜೊತೆಗೆ ವಿಮೋಚನಾ ಸಂಸ್ಥೆಯಿAದ ಸಮಾಜಮುಖಿ ಸೇವೆ ಸಲ್ಲಿಸುವವರಿಗೆ ಮಹಾಂತ ಮಂದಾರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅಥಣಿ ಪಟ್ಟಣದಲ್ಲಿ ಕೃಪಾ ಮತ್ತು ಆರೋಗ್ಯ ಸೇವಾ ಸಂಸ್ಥೆಯ ಮೂಲಕ ಅನಾಥ ಮತ್ತು ಎ???ವಿ ಪೀಡಿದ ಮಕ್ಕಳ ಸಂರಕ್ಷಣೆ ಮಾಡುತ್ತಿರುವ ನಿಜಪ್ಪ ಹಿರೇಮನಿ ದಂಪತಿಗಳಿಗೆ, ಚಮಕೇರಿಯ ಸುಕನ್ಯಾ ಆಶ್ರಮದ ಮಹದೇವ ಬಿರಾದಾರ ದಂಪತಿಗಳಿಗೆ, ಮೈಸೂರಿನ ಶ್ರೀಧರ ಚಕ್ರವರ್ತಿ, ಶರದ ಸವದಿ ಅವರಿಗೆ ಡಾ. ಮಹಾಂತ ಶಿವಯೋಗಿಗಳ ಹೆಸರಿನಲ್ಲಿ ಕೊಡ ಮಾಡುವ “ಮಹಾಂತ ಮಂದಾರ ಪ್ರಸಸ್ತಿ -೨೦೨೬ ” ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಥಣಿಯ ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ, ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತ ಚಿದಾನಂದ ಗುರುಸ್ವಾಮಿ ಮಾತನಾಡಿದರು.
ಈ ವೇಳೆ ಶಿಕ್ಷಣ ಪ್ರೇಮಿ ಅರುಣ ಯಲಗುದ್ರಿ, ಲಕ್ಷ್ಮೀಕಾಂತ ಕುಲಕರ್ಣಿ, ಶಾಂತಾದೇವಿ ಪಾಟೀಲ, ಮಂಜುನಾಥ ಪಾಟೀಲ, ಎಸ್.ಆರ್.ಪಾಟೀಲ, ಭಾರತಿ ಬಿಜಾಪುರ, ಎಂ.ಬಿ.ತೊಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅನಾಥ ಮಕ್ಕಳ ಸಂರಕ್ಷಣೆ ಜೊತೆಗೆ ಈಗ ವೃದ್ರಾಶ್ರಮವನ್ನು ಆರಂಭಿಸಿದ್ದೇವೆ. ನನ್ನ ತಾಯಿಯ ಮಾರ್ಗದರ್ಶನದಂತೆ ಚಿಕ್ಕ ವಯಸ್ಸಿನಿಂದಲೇ ಸಮಾಜಮುಖಿ ಸೇವೆ ಮಾಡುತ್ತಾ ಬಂದಿದ್ದೇನೆ. ನಿರ್ಗತಿಕರು, ಅನಾಥರು ಮತ್ತು ಮಾನಸಿಕ ಕಾಯಿಲೆಯಿಂದ ಬಳಲುವವರ ಸೇವೆ ಮಾಡುತ್ತಿರುವುದರದಲ್ಲಿ ನನಗೆ ಸಂತೃಪ್ತಿ ಇದೆ. ದೇವರ ಕೃಪೆ ಮತ್ತು ದಾನಿಗಳ ಸಹಕಾರ ಇರುವವರಿಗೆ ಇಂತಹ ಕಾರ್ಯಗಳನ್ನು ಮಾಡುತ್ತೇವೆ.
- ನಿಜಪ್ಪ ಹಿರೇಮನಿ,
ಮಹಾಂತ ಮಂದಾರ ಪ್ರಶಸ್ತಿ ಪುರಸ್ಕೃತರು.































