Home ಜಿಲ್ಲೆ ಯುವಕರು ಬಲಿಷ್ಠವಾದರೆ ಮಾತ್ರ ರಾಷ್ಟ್ರ ಬಲಿಷ್ಠ :ವಾನಖಂಡೆ

ಯುವಕರು ಬಲಿಷ್ಠವಾದರೆ ಮಾತ್ರ ರಾಷ್ಟ್ರ ಬಲಿಷ್ಠ :ವಾನಖಂಡೆ

ಸಂಜೆ ವಾಣಿ ವಾರ್ತಾ
ಕಮಲನಗರ; ಯುವಕರು ಬಲಿಷ್ಠ ವಾದರೆ ಮಾತ್ರ ರಾಷ್ಟ್ರ ಬಲಿಷ್ಠ ಎಂದು ಸಿವಿಲ್ ಜಡ್ಜ್ ಮತ್ತು ಜೆ ಏಮ್ ಎಫ್ ಸಿ ನ್ಯಾಯಾಧೀಶರಾದ ವಿನಾಯಕ ವಾನಖಂಡೆ ಎಂದರು

ತಾಲೂಕಿನ ಠಾಣಾ ಕುಶನೂರು ಗ್ರಾಮ ಪಂಚಾಯಿತಿ ಗ್ರಾಮದಲ್ಲಿ ಶ್ರೀ ಮಾಣಿಕರಾವ ಪಾಟೀಲ್ ರೂರಲ್ ಪಾಲಿಟೆಕ್ನಿಕ್ ಠಾಣಾ ಕುಶನೂರು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇmಠಿoತಿeಡಿeಜ ಙouಣh, Sಣಡಿoಟಿgeಡಿ Iಟಿಜiಚಿ/ ಸಶಕ್ತ ಯುವ, ಸಶಕ್ತ ಭಾರತ ಜಾಗೃತಿ ಅಭಿಯಾನ ಅಡಿಯಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಯುವಕರಾದವರು ದೇಶವನ್ನು ಪ್ರೀತಿಸಬೇಕು ಯಾವಾಗಲೂ ಈ ಭೂತಾಯಿಯನ್ನು ಕಾಪಾಡಿದಾಗ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಶಿವರಾಜ್ ಶೆಟ್ಕರ್, ಸಹಾಯಕ ಸರ್ಕಾರಿ ಅಭಿಯೋಜಕರು ಔರಾದ, ಶ್ರೀ ಬಾಲಾಜಿ ಕಂಬಾರ್, ಅಧ್ಯಕ್ಷರು ತಾಲೂಕು ವಕೀಲರ ಸಂಘ ಔರಾದ, ಸುಧೀರ್ ಮಡಿವಾಳ, ವಕೀಲರು ಔರಾದ ಮತ್ತು ಶ್ರೀ ರಾಜಶೇಖರ ಮೂದ್ಧಾ ಪ್ರಾಂಶುಪಾಲರು ಶ್ರೀ ಮಾಣಿಕರಾವ ಪಾಟೀಲ್ ರೂರಲ್ ಪಾಲಿಟೆಕ್ನಿಕ್ ಠಾಣಾ ಕುಶನೂರು, ಶ್ರೀ ಶೇಕ್ ಷಾ ಪಟೇಲ್, ಉಪ ನಿರೀಕ್ಷಕರು ಪೊಲೀಸ್ ಠಾಣೆ ಕುಶ್ನೂರ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.