ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ ಕಿಡಿಗೇಡಿಗೆ ಕಠಿಣ ಶಿಕ್ಷೆ ವಿಧಿಸಬೇಕು ; ಅರವಿಂದ ವ್ಹಿ. ಗುತ್ತೇದಾರ

ಅಫಜಲಪುರ ;ಅ.18: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ, ಭಯ ಹುಟ್ಟಿಸುವ ಕೆಲಸ ಮಾಡಿರುವ ಕಿಡಿಗೇಡಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೆ.ಎಂ.ಎಫ್. ಮಾಜಿ ನಿರ್ದೇಶಕರು ಹಾಗೂ ಉದ್ಯಮಿಗಳಾದ ಅರವಿಂದ ವ್ಹಿ.ಗುತ್ತೇದಾರ ಅವರು ಒತ್ತಾಯಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ ಚಟುವಟಿಕೆ ಮಾಡುವುದಕ್ಕೆ ನಿಬರ್ಂಧ ಹಾಕಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಮನವಿ ಪತ್ರ ಬರೆದಿದ್ದರು. ಕೆಲವೊಂದು ಕಿಡಿಗೇಡಿಗಳು ಸಚಿವರಿಗೆ ಪೆÇೀನ್ ಮೂಲಕ ಅವಾಚ್ಯ ಶಬ್ದಗಳಿಂದ ತುಚ್ಯವಾಗಿ ಮಾತನಾಡಿ, ಅವರ ಕುಟುಂಬದ ಸದಸ್ಯರಿಗೂ ಸಹ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದ ಕಿಡಿಗೇಡಿಗೆ ಬಂಧಿಸಿದ್ದು ಸಂತೋಷದ ವಿಷಯ. ಆದರೆ, ಧಮಕಿ ಹಾಕಿದ ಕಿಡಿಗೇಡಿಗೆ ಕೂಡಲೇ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ತಿಳಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು, ಯಾವುದೇ ರೀತಿಯ ಇಂಥ ಗೊಡ್ಡು ಬೆದರಿಕೆಗಳು ಹೆದರದೆ ಜನಸೇವೆ ಮುಂದುವರೆಸಲಿ. ಅವರ ಜೊತೆಗೆ ನಾವೆಲ್ಲರೂ ಬೆನ್ನೆಲುಬಾಗಿ ಇರುತ್ತೇವೆ. ನಾಡಿನ ಬಡ, ಮದ್ಯಮ ಹಾಗೂ ಹಿಂದುಳಿದ ಮಕ್ಕಳ ಭವಿಷ್ಯಕ್ಕಾಗಿ ಧ್ವನಿ ಎತ್ತಿರುವ ಪ್ರಿಯಾಂಕ್ ಖರ್ಗೆ ಅವರ ಕಾರ್ಯ ಕರ್ನಾಟಕ ಅಷ್ಟೇ ಅಲ್ಲದೇ ದೇಶಾದ್ಯಂತ ಅವರನ್ನು ಶ್ಲಾಂಘಿಸುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಅರವಿಂದ ಗುತ್ತೇದಾರ ತಿಳಿಸಿದರು.