
ಕಲಬುರಗಿ, ಮಾ.24: ದೇವರ ದಾಸಿಮಯ್ಯನವರ ಪವಾಡ ಇವತ್ತಿಗೂ ಜೀವಂತ ಸಾಕ್ಷಿಯಾಗಿದೆ. ಮುದನೂರಿಗೆ ಹೋಗಿ ನೋಡಿ, ಏಳು ತೀರ್ಥಗಳಿಂದ ಪುಟಿದೇಳುವ ನೀರು ಇವತ್ತಿಗೂ ಹರಿಯುತ್ತದೆ, ಬರಗಾಲದಲ್ಲೂ ಅದು ಬತ್ತುವುದಿಲ್ಲ. ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮಪ್ರಭು ಪಾಟೀಲ ಹೇಳಿದರು.
ಸೋಮವಾರ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ದೇವರ ದಾಸಿಮಯ್ಯ ಭಾವ ಚಿತ್ರಕ್ಕೆ ಪುಷ್ಫಾರ್ಚನೆ ಮಾಡಿ ಮಾತನಾಡಿದರು.
ದಾಸಿಮಯ್ಯನವರು ಅಪ್ಪಟ ಶಿವಭಕ್ತರು. ಒಮ್ಮೆ ಭೀಕರ ಬರಗಾಲ ಬಂದಾಗ ಇವರು ದಾಸೋಹ ನಡೆಸಲು ಹರಸಾಹಸ ಪಟ್ಟ ಕಥೆಗಳು ಅವರ ಜೀವನ ಚರಿತ್ರೆಯಲ್ಲಿ ಬರುತ್ತವೆ. ಇವರು ಸರಳ ಕನ್ನಡದಲ್ಲಿ ಗಹನವಾದ ತತ್ವಗಳನ್ನು ವಚನಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸಿದರು ಎಂದು ಮೊಲೆ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾದ ಎಂಬ ವಚನ ಸ್ಮರಿಸಿದರು.
ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಐಟಿಬಿಟಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ, ನೀವು ಎಸ್ಟಿಮೇಟ್ ತಯಾರು ಮಾಡಿಕೊಂಡು ಬನ್ನಿ, ಜಾಗ ಕೊಡಿಸಿ ನೇಕಾರರ ಭವನ ಮಾಡಿಕೊಡುತ್ತೇವೆ ಎಂದಿದ್ದಾರೆ, ನಾನು ಕೂಡ ಶಾಸಕನಾಗಿ ನನ್ನ ಅನುದಾನದಿಂದ ಹಣವನ್ನು ನೀಡುತ್ತೇನೆ. ನಿಮ್ಮ ಧ್ವನಿಯಾಗಿ ವಿಧಾನಸೌಧದಲ್ಲಿ ನಾನು ಇರುತ್ತೇನೆ. “ಇಂತಹ ಪುಣ್ಯಾತ್ಮರ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡುತ್ತಿದ್ದೀರಿ.” ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣುಕುಮಾರ ಎಂ.ವೈ. ಪಾಟೀಲ ಅವರು ಈ ಹಿಂದೆ ಬೈರಾಮಡಿಗೆಯಂತಹ ಗ್ರಾಮಗಳಲ್ಲಿ ನೂಲಿನ ಕೆಲಸಗಳು ವ್ಯಾಪಕವಾಗಿದ್ದವು. ಆದರೆ ಕಾಲಾನಂತರದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಈ ವೃತ್ತಿ ಕಮ್ಮಿಯಾಗಿದ್ದು, ಜನರು ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ ಎಂದು ಸ್ಮರಿಸಿದರು.
ಬಸವಾದಿ ಶರಣರ ಮತ್ತು ದೇವರ ದಾಸಿಮಯ್ಯನವರ ವಚನಗಳ ಆದರ್ಶದಂತೆ ಸಮಾಜವು ಸಂಘಟಿತವಾಗಿ ಶಕ್ತಿಯುತವಾಗಬೇಕು ಹಾಗೂ ಸಮಾಜದ ಪ್ರತಿಯೊಂದು ಕಾರ್ಯಕ್ಕೂ ತಾವು ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕರು ಮತ್ತು ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕಟ್ಟ ಬೆಂಗಳೂರು ಎಮ್.ಡಿ. ಲಕ್ಷ್ಮೀನಾರಾಯಣ ಅವರು ಮಾತನಾಡಿ “ನೇಕಾರರ ಶಕ್ತಿ ಕೇವಲ ಮತಕ್ಕೆ ಸೀಮಿತವಾಗದೆ, ಅವರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಸರ್ಕಾರ ಒತ್ತು ನೀಡಬೇಕು” ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಕೇಂದ್ರವಾದ ಕಲಬುರಗಿಯಲ್ಲಿ ಸಮುದಾಯದ ಚಟುವಟಿಕೆಗಳಿಗಾಗಿ ಸುಸಜ್ಜಿತ ‘ನೇಕಾರ ಭವನ’ ನಿರ್ಮಿಸಬೇಕು. ಇದಕ್ಕೆ ಶಾಸಕರು ತಮ್ಮ ಶಕ್ತಿಯನ್ನು ಬಳಸಿ ಸರ್ಕಾರದಿಂದ ಅನುದಾನ ಕೊಡಿಸಬೇಕೆಂದು ಒತ್ತಾಯಿಸಲಾಯಿತು.
ಸಿದ್ಧಾಶ್ರಮ ವಿರಕ್ತ ಮಠ ಮೈಂದರಗಿಯ ಶ್ರೀ ಮ.ನಿ.ಪ್ರ. ಮೃತ್ಯುಂಜಯ ಮಹಾಸ್ವಾಮಿಗಳು ಅವರು ಮಾತನಾಡಿ, ದಾಸಿಮಯ್ಯನವರು ರಚಿಸಿದ 179 ವಚನಗಳನ್ನೇ ಆಧಾರವಾಗಿಟ್ಟುಕೊಂಡು 12ನೇ ಶತಮಾನದ ಶರಣರು ಕಾಯಕವೇ ಕೈಲಾಸ ಎಂದು ತಮ್ಮ ಜೀವನ ನಡೆಸಿದ್ದಾರೆ. ಭಕ್ತಿ ಯಾರಂತೆ ಮಾಡಬೇಕು ಅಂತ ಕೇಳಿದರೆ ದೇವರ ದಾಸಿಮಯ್ಯನವರಂತೆ ಭಕ್ತಿ ಮಾಡಬೇಕು ಎಂಬ ಮಾತನ್ನು ಬಸವಾದಿ ಶರಣರು ಹೇಳಿದ್ದಾರೆ.
ಹೆಣ್ಣು ಸಾಕ್ಷಾತ್ ಭಗವಂತಿ ಮತ್ತು ಪಾರ್ವತಿ ಸ್ವರೂಪಿ ಎಂಬ ಸಿದ್ಧರಾಮರ ಮಾತನ್ನು ಪುನರುಚ್ಚರಿಸುತ್ತಾ, ಹೆಣ್ಣು ಅಥವಾ ಗಂಡು ಎಂಬ ಭೇದವಿಲ್ಲದೆ ಎಲ್ಲರೊಳಗೂ ಇರುವ ಆತ್ಮ ಪರಮಾತ್ಮನ ಸ್ವರೂಪ ಎಂದು ದಾಸಿಮಯ್ಯನವರು ಸಾರಿದ್ದಾರೆ.
ಕಲಬುರಗಿ ಅನನ್ಯ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಕರುಣಾ ಜಮದಾರಖಾನಿ, ಅವರು ವಿಶೇಷ ಉಪನ್ಯಾಸದ ಮೂಲಕ ದೇವರ ದಾಸಿಮಯ್ಯನವರ ಜೀವನ ಸಾರ, ವಚನಗಳ ಸಾರ, ಮುಂತಾದ ವಿಷಯಗಳ ಸಂಕ್ಷಿಪ್ತ ಮಾಹಿತಿ ತಿಳಿಸಿದರು.
ಸಮಾಜ ಸೇವೆ ಸಲ್ಲಿಸಿದ ಶಾಸಕರು ಮತ್ತು ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕಟ್ಟ ಬೆಂಗಳೂರು, ಮಹಿಳಾ ವಿಭಾಗದಿಂದ ರುಕ್ಕಿಣಿ ಗಣೇಶ ಸಂಗಾ ನೇಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅದೇ ರೀತಿ ಇನ್ನೂ ಎಂಟು ಜನರಿಗೆ ದೇವರ ದಾಸಿಮಯ್ಯ ಜೀವಮಾನ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಎ. ನಾಸಿ ಅವರು ಸ್ವಾಗತಿಸಿದರು.






















