ವಿದ್ಯಾರ್ಥಿನಿಯರಲ್ಲಿನ ಸೃಜನಶೀಲತೆ ಹೊರಹಾಕುವುದೇ ರಂಗೋಲಿ ಸ್ಪರ್ಧೆಯ ಮುಖ್ಯ ಉದ್ದೇಶ

ಗುರುಮಠಕಲ್:ಜ.೧೪:ಮಕರ ಸಂಕ್ರಾAತಿ ಹಬ್ಬದ ಪ್ರಯುಕ್ತ ಹಾಗೂ ವಿದ್ಯಾರ್ಥಿನಿಯರಲ್ಲಿ ಅಡಗಿರುವ ಕಲೆಯನ್ನು ಹೊರಹಾಕುವ ಉದ್ದೇಶದಿಂದ ಈ ಸ್ಪರ್ಧೆ ಯನ್ನು ಆಯೋಜಿಸಲಾಗಿದೆ ಎಂದು ವಿಜಯ ಕುಮಾರ ನಿರೇಟಿಯವರು ಹೇಳಿದರು. ಸ್ಥಳೀಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಕರ ಸಂಕ್ರಾAತಿ ಹಬ್ಬದ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಸ್ಪರ್ಧೆಯು ಅತ್ಯಂತ ಸಡಗರ-ಸಂಭ್ರಮದಿAದ ಜರುಗಿತು ಈ ಸಂಧರ್ಭ ದಲ್ಲಿ ಮಾತನಾಡಿದ ಅವರು
ಹಬ್ಬದ ಸಂಪ್ರದಾಯವನ್ನು ಉಳಿಸುವ ಮತ್ತು ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸೃಜನಶೀಲತೆಯನ್ನು ಹೊರಹಾಕುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರು ಬಿಡಿಸಿದ ಬಣ್ಣಬಣ್ಣದ ರಂಗೋಲಿಗಳಿAದ ಕಂಗೊಳಿಸುತ್ತಿತು, ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ ವಿಧ್ಯಾರ್ಥಿನಿಯರು ತಾವು ಗುರಿಯನ್ನು ಇಟ್ಟುಕೊಂಡು ವಿಧ್ಯಾಭ್ಯಾಸ ಕಡೆ ಹೆಚ್ಚು ಸಮಯವನ್ನು ಕಳೆಯಬೆಕು ಹೆಚ್ಚುವರಿ ತಾಸು ಓದುವುದರಿಂದ ನಮ್ಮಗೆ ಬೆನ್ನು ನೋವು ಆಗುತ್ತಿದೆ ಎಂದು ನಾವು ಯಾವಾಗಲೂ ಹಿಂಜರಿಯಬಾರದು ಆ ನೋವು ನಮ್ಮ ಕುಟುಂಬಕ್ಕೆ ಬೆನ್ನೆಲುಬುಯಾಗಿ ನಿಲ್ಲಬೇಕು ಎಂದು ವಿದ್ಯಾರ್ಥಿನಿಯರಿಗೆ ಶಿಕ್ಷಣವೆ ಶಕ್ತಿ ಎನ್ನುವ ಮಾತು ಹೆಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ. ಸಂಕ್ರಾAತಿಯ ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ರಂಗೋಲಿ ಸ್ಪರ್ಧೆಯ ಮೂಲಕ ಕಲೆ ಮತ್ತು ಸಂಪ್ರದಾಯವನ್ನು ಪ್ರದರ್ಶಿಸಿರುವುದು ಶ್ಲಾಘನೀಯ,” ಎಂದು ತಿಳಿಸಿದರು.ವೈವಿಧ್ಯಮಯ ರಂಗೋಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ಸಂಕ್ರಾAತಿ ಹಬ್ಬದ ಪ್ರತಿಬಿಂಬವಾದ ಎಳ್ಳು-ಬೆಲ್ಲ, ಕುಂಭ, ಸೂರ್ಯ ಮತ್ತು ಗ್ರಾಮೀಣ ಬದುಕನ್ನು ಬಿಂಬಿಸುವ ಚಿತ್ರಗಳನ್ನು ರಂಗೋಲಿಯಲ್ಲಿ ಮೂಡಿಸಿ ಎಲ್ಲರ ಗಮನ ಸೆಳೆದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಜಯಕುಮಾರ್ ನಿರೆಟಿ ಅವರ ವತಿಯಿಂದ ಬಹುಮಾನಗಳನ್ನು ನೀಡಲಾಯಿತು ಪ್ರಥಮ ಬಹುಮಾನ ರಾಧಿಕ ತಂದೆ ರಾಜಪ್ಪ,
ದ್ವಿತೀಯ ಬಹುಮಾನ ಲಕ್ಷ್ಮಿ ರಾಠೋಡ್ ತಂದೆ ಬಸ್ಯಾನಾಯಕ, ತೃತೀಯ ಬಹುಮಾನ ಉಮಾ ತಂದೆ ಆಶಪ್ಪ ಪಡೆದರು, ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿನಿಯರಿಗೆ ಸಮಾಧಾನಕರ ಬಹುಮನ ನೀಡಿದರು.
ಕಾರ್ಯಕ್ರಮದಲ್ಲಿ ಸಿ ಪಿ ಐ ವಿರಣ್ಣ ದೊಡ್ಡಮನಿ, ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹೊಸಮನಿ, ನಿತ್ಯಾನಂದ ಬುದಿ, ಪಾಶಾಪ್ಯಾರೆ ಉಪನ್ಯಾಸಕರಾದ ವೆಂಕಟರೆಡ್ಡಿ, ಪದ್ಮಮ್ಮ, ನಂದಿಕಿಶೋರ್, ರಾಮುಲು ಹಾಗೂ ಪರಶುರಾಮ, ಹಾಗೂ ಲಾಲಪ್ಪ ತಲಾರಿ, ರಮೇಶ್ ಹಡಪದ , ಕಾಶಪ್ಪ ಅವರು ಉಪಸ್ಥಿತರಿದ್ದು, ಸ್ಪರ್ಧೆಯನ್ನು ವೀಕ್ಷಿಸಿ ವಿದ್ಯಾರ್ಥಿನಿಯರನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊAಡರು.