ಪುಸ್ತಕ ಲೋಕಜ್ಞಾನದ ಬೆಳಕಿಂಡಿ : ವಿ.ಆರ್ ಸುದರ್ಶನ

ಸಂಜೆವಾಣಿ ವಾರ್ತೆ
ಬೀದರ್ : ಜ.೨೯:ಬೀದರ ಒಂದು ಅಪೂರ್ವ ನೆಲ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಕಟ್ಟಿಕೊಟ್ಟರು ವೀರಲೋಕ ಬುಕ್ಸನ ವೀರಕಪುತ್ರ ಶ್ರೀನಿವಾಸ ಅವರ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಪುಸ್ತಕ ಸಂತೆ ಬಹಳ ಅರ್ಥಪೂರ್ಣವಾಗಿದೆ ಎಂದು ಮಾಜಿ ಸಭಾಪತಿಗಳಾದ ವಿ.ಆರ್ ಸುದರ್ಶನ ಅವರು ಹೇಳಿದರು.

ಭಾಷೆ, ನೆಲ, ಜಲ ಸಮಸ್ಯೆ ಇದ್ದರೂ ಸೌಹಾರ್ದತೆ ಈ ನಾಡಿನ ಅಂತಃ ಶಕ್ತಿಯಾಗಿದೆ ಪಂಪ, ವಚನಕಾರರು, ಕೀರ್ತನ, ದಾಸರ ಚಿಂತನೆ ಸಾಹಿತ್ಯ ಮೂಲಕ ನಮಗೆ ದಕ್ಕಿದ್ದು ಈ ಪುಸ್ತಕದಿಂದ ಪುಸ್ತಕ ನಿರಂತರ ಆಲೋಚನೆ ಅರಿವು, ಜ್ಞಾನ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತವೆ ಇದು ಹೀಗೆ ಮುಂದುವರೆಯಲಿ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅದ್ಯಕ್ಷರಾ ಡಾ.ಮಾನಸ ಅವರು ಮಾತನಾಡಿ ಪುಸ್ತಕ ಸಂತೆ ಒಂದು ಮಹಾಕಾವ್ಯ, ಇದು ಸಮಾರೋಪ ಅಲ್ಲ ಆರಂಭ.
ವೀರಕಪುತ್ರ ಶ್ರೀನಿವಾಸ, ಭಾಲ್ಕಿ ಶ್ರೀ, ಕಸಾಪ ಸುರೇಶ ಚನಶೆಟ್ಟಿ ಗುರುನಾತ ರಾಜಗೀರಾ ಅವರ ಪುಸ್ತಕ ಸಂತೆ ಕನಸು ನನಸು ಮಾಡಿದಕ್ಕೆ ಅಭಿನಂದನೆಗಳು ಸಲ್ಲಿಸಿದರು.

ಪುಸ್ತಕ ಸಂಸ್ಕೃತಿ ಹೊರಗೆ ಉಳಿಯಿತು.
ದೇವಾಲಯ ಸಂಸ್ಕೃತಿ ಒಳಗೆ ಬಂತು.
ಭಕ್ತಿ ಪ್ರಧಾನ ದೇಶದಲ್ಲಿ
ಅಗರಬತ್ತಿ, ಕರ್ಪೂರ ಮಾಲಿಕ ಕೋಟ್ಯಧಿಪತಿ ಆಗಿ ಶ್ರೀಮಂತನಾದ, ಪ್ರಕಾಶಕ ಬಡವನಾದ ತೀರ್ಥಕ್ಕೆ, ಮಂಗಳಾರತಿಗೆ ನೂರಿನ್ನೂರು ಹಾಕುವ ಜನ ಪುಸ್ತಕಕ್ಕೆ ೫೦ರೂ ಕೊಡಲಾರರು ಎಂದು ಕಳವಳ ವ್ಯಕ್ತಪಡಿಸಿದರು.

ಮೇನಕಾ ಪಾಟೀಲ ಅವರ ಮೌನದೊಳಗಿನ ಮಾತು ಎಂಬ ಕೃತಿ ಬಿಡುಗಡೆಗೊಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ ಅವರು ಬೀದರಿನ ಜನತೆಗೆ ಮನದಾಳದ ಧನ್ಯವಾದಗಳನ್ನು ತಿಳಿಸಿದರು. ಏಕೆಂದರೆ ಬೀದರಿನಲ್ಲಿ ಪುಸ್ತಕ ಸಂತೆ ಅತ್ಯಂತ ಯಶಸ್ವಿಯಾಗಿದೆ. ಇಲ್ಲಿ ಬರುವ ಮುನ್ನ ಅನೇಕರು ಹೆದರಿಸಿದ್ದರು. ಬೀದರಿನಲ್ಲಿ ಪುಸ್ತಕಗಳು ಮಾರಾಟವಾಗುವುದಿಲ್ಲ. ಅಲ್ಲಿ ಓದುಗರು ಇಲ್ಲವೇ ಇಲ್ಲ ಅಂತ ಹೇಳಿದ್ದರು. ಆದರೆ ಕಳೆದ ಮೂರು ದಿನದಿಂದ ಸಾವಿರಾರು ಜನರು ಪುಸ್ತಕ ಸಂತೆಗೆ ಬಂದಿದ್ದಾರೆ. ಲಕ್ಷಾಂತರ ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ.

ಆ ಕಾರಣದಿಂದ ಬೀದರ್ ಕನ್ನಡಿಗರ ಭದ್ರಕೋಟೆಯೆಂಬ ಸಂದೇಶ ರಾಜ್ಯಕ್ಕೆ ರವಾನೆಯಾಗಿದೆ. ಈ ಸಂತೆ ಯಶಸ್ವಿಯಾದ ಕಾರಣದಿಂದ ರಾಜ್ಯದ ಬೇರೆ ಬೇರೆ ಭಾಗಗಳಿಂದ ನಮ್ಮಲ್ಲೂ ಪುಸ್ತಕ ಸಂತೆ ಮಾಡಿ ಎಂಬ ಮನವಿಗಳು ಬರುತ್ತಿವೆ. ಅದರ ಶ್ರೇಯಸ್ಸು ಬೀದರ್ ಜನತೆಗೆ ಸಲ್ಲಬೇಕು ಎಂದು ನುಡಿದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಹಿರೇಮಠ ಸಂಸ್ಥಾನ ಭಾಲ್ಕಿಯ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅವರು ಈ ಪುಸ್ತಕ ಸಂತೆ ಅಭುತಪೂರ್ವ ಯಶಸ್ಸು ಕಂಡಿದೆ ಡಾ.ಬಸವಲಿಂಗ ಪಟ್ಟದ್ದೇವರಿಗೆ ಪುಸ್ತಕ ಎಂದರೆ ಅಚ್ಚುಮೆಚ್ಚು ಇದರ ಯಶಸ್ಸನ್ನ ನಮ್ಮ ಗುರುಗಳಿಗೆ ಅರ್ಪಿಸುತ್ತೆವೆ ಎಂದರು. ಇದಕ್ಕಾಗಿ ಶ್ರಮಿಸಿದ ಎಲ್ಲರಿಗು ಧನ್ಯವಾದಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜಶೇಖರ ಸ್ವಾಮಿ ಗೋರ್ಟಾ, ಕಸಾಪ ಜಿಲ್ಲಾದ್ಯಕ್ಷ ಸುರೇಶ ಚನ್ನಶೇಟ್ಟಿ, ಗುರುನಾಥ ರಾಜಗೀರಾ, ಆದೀಶ ವಾಲಿ, ತಿಮ್ಮೆಗೌಡ, ವಿಜಯಕುಮಾರ ಸೋನಾರೆ, ಶಿವಕುಮಾರ ಕಟ್ಟೆ, ಬಾಬುರಾವ ದಾನಿ, ಟಿ.ಎಮ್ ಮಚ್ಚೆ, ಡಾ.ಬಸವರಾಜ ಬಲ್ಲೂರ, ಶಿವಶಂಕರ ಟೋಕರೆ, ಮೇನಕಾ ಪಾಟೀಲ ಇದ್ದರು.