ಸೋಲೆ ಗೆಲುವಿನ ಸೋಪಾನ

ಕೊಲ್ಹಾರ: ಸೆ.1:ಸೋಲೆ ಗೆಲುವಿನ ಸೋಪಾನ, ಸೋತವರು ಕುಗ್ಗದೆ, ಗೆದ್ದವರು ಬೀಗದೆ ಅದನ್ನು ಸಮಾನವಾಗಿ ಸ್ವೀಕರಿಸಬೇಕು.ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ ಮತ್ತು ಕ್ರೀಡೆ ಶಾರೀರಿಕವಾಗಿ ಮಾನಸಿಕವಾಗಿ ಮನುಷ್ಯ ನನ್ನು ಸದೃಢವಾಗಿಸುತ್ತದೆ ಎಂದು ಶ್ರೀ ಸಂಗಮೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಎಸ್ ಬಿ ಪತಂಗಿ ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾ ವರ್ಧಕ ಸಂಘದ ಪ್ರೌಢ ಶಾಲಾ ಆವರಣದಲ್ಲಿ ಭಾನುವಾರ ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಶ್ರೀ ಸಂಗಮೇಶ ವಿದ್ಯಾವರ್ಧಕ ಸಂಘ ಸಹಯೋಗದಲ್ಲಿಹಮ್ಮಿಕೊಂಡ ಕೊ ಲ್ಹಾರ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.

ನಂತರ ತಾಲ್ಲೂಕು ನೌಕರರ ಸಂಫ ದ ಅಧ್ಯಕ್ಷ ಶಿವಾನಂದ ಮಂಗನವರ ಮಾತನಾಡಿ,ನಾಡಕಟ್ಟಲು ಅಂದು ಮೈಸೂರು ಸಂಸ್ಥಾನದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ನಮ್ಮ ಕನ್ನಡ ನಾಡು ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ಕನ್ನಡಿಗರನ್ನು ಒಂದು ಗೂಡಿಸುವ ಉದ್ದೇಶದಿಂದ ಈ ದಸರಾ ಕ್ರೀಡಾಕೂಟವನ್ನು ಪ್ರಾರಂಭಿಸಿದರು.ನಾಡಿನ ದಸರಾ ಉತ್ಸವದಲ್ಲಿ ಕ್ರೀಡಾ ಪಟುಗಳು ವಿವಿಧ ಭಾಗಗಳಿಂದ ಭಾಗವಹಿಸಿ ನಾಡಿನ ಕನ್ನಡಿಗರು ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಕೆಲಸ ನಾಲ್ವಡಿ ಕೃಷ್ಣರಾಜ ಒಡೆಯರು ಮಾಡಿದರು ಎಂದರು.

ಈ ವೇಳೆ ಕಲ್ಹಾರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಶ್ರೀ ಸಂಗಮೇಶ್ವರ ವಿದ್ಯಾ ವರ್ಧಕಸಂಘದ ಅಧ್ಯಕ್ಷ ಬಿ ಯು ಗಿಡ್ಡಪ್ಪಗೋಳ ಸಸಿಗೆ ನಿರುಣಿಸುವ ಮೂಲಕ ಉದ್ಘಾಟಿಸಿದರು.

ಈ ವೇಳೆ ದೈಹಿಕ ಶಿಕ್ಷಣಾಧಿಕಾರಿ ಎಸ್ ಎಸ್ ಅವಟಿ ,ನಿವೃತ್ತ ದೈಹಿಕ ಶಿಕ್ಷಕರಾದ ಎಸ್ ಎಂ ಬರಗಿ, ಕೆ ಜಿ ಹಳ್ಳೂರ, ಅಧ್ಯಕ್ಷ ಎಂ ಜಿ ಪಾಟೀಲ, ಶಿರಸ್ತೇದಾರ, ಕೃಷ್ಣಾ ಗುಡೂರ, ಮುಖ್ಯ ಶಿಕ್ಷಕರಾದ ಆರ್ ಕೆ ಉಮರಾಣಿ, ವಾಯ್ ಜಿ ಶಿರೋಳ, ಅಧ್ಯಕ್ಷ ಸುರೇಶ ಬಿರಾದಾರ ಸೇರಿದಂತೆ ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.