Home ಜಿಲ್ಲೆ ಕಲಬುರಗಿ ಕಲ್ಯಾಣನಾಡಿನಲ್ಲಿ ಅಂದು ಹಚ್ಚಿದ ಕನ್ನಡ ಜ್ಯೋತಿ ಇಂದಿಗೂ ಪ್ರಜ್ವಲಿಸುತ್ತಿದೆ: ಲೋಕಾಯುಕ್ತರಾದ ಸಿದ್ದರಾಜು ಸಿ.

ಕಲ್ಯಾಣನಾಡಿನಲ್ಲಿ ಅಂದು ಹಚ್ಚಿದ ಕನ್ನಡ ಜ್ಯೋತಿ ಇಂದಿಗೂ ಪ್ರಜ್ವಲಿಸುತ್ತಿದೆ: ಲೋಕಾಯುಕ್ತರಾದ ಸಿದ್ದರಾಜು ಸಿ.

ಕಲಬುರಗಿ:ಫೆ.13:ಕಲ್ಯಾಣ ನಾಡು ಕನ್ನಡ ಭಾಷೆಯ ಫಲವತ್ತಾದ ಭೂಮಿಯಾಗಿ ಜಗತ್ತಿಗೆ ಫಲ ಕೊಡುವ ಶಕ್ತಿಯಾಗಿದೆ ಎಂದು ಕಲಬುರಗಿಯ ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಅಧಿಕ್ಷಕರಾದ ಮಾನ್ಯ ಶ್ರೀ ಸಿದ್ದರಾಜು ಸಿ. ಹೇಳಿದರು. ಕಲಬುರಗಿ ನಗರದ ಎಸ್ ಎಮ್ ಪಂಡಿತ ರಂಗಮಂದಿರದಲ್ಲಿ ಬಸವ ಕನ್ನಡ ಕಾನ್ವೆಂಟ್ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಕಲ್ಯಾಣ ನಾಡು ಎಂದರೆ ಕೇವಲ ಒಂದು ಭೌಗೋಳಿಕ ಭಾಗವಲ್ಲ, ಅದು ಶ್ರೀಮಂತ ಸಂಸ್ಕøತಿ, ಇತಿಹಾಸ ಮತ್ತು ಸಾಹಿತ್ಯದ ನೆಲೆಬೀಡು. ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಕನ್ನಡಕ್ಕೆ ಅಪಾರ ಕೀರ್ತಿ ತಂದಿದ್ದಾರೆ. ಕನ್ನಡ ಭಾಷೆ ನಮ್ಮ ಅಸ್ತಿತ್ವದ ಆಧಾರ. ಅದು ನಮ್ಮ ಮಾತೃಭಾಷೆ, ನಮ್ಮ ಭಾವನೆಗಳ ಧ್ವನಿ. ಜಾಗತೀಕರಣದ ಯುಗದಲ್ಲಿ ಇಂಗ್ಲಿಷ್ ಅಗತ್ಯವಾದರೂ,ಮಾತೃ ಭಾಷೆ ಹೃದಯದಲ್ಲಿಟ್ಟು ಪೂಜಿಸಬೇಕು. ಕಲ್ಯಾಣ ನಾಡಿನಲ್ಲಿ ಅಂದು ಹಚ್ಚಿದ ಕನ್ನಡ ಜ್ಯೋತಿ ಇಂದಿಗೂ ಪ್ರಜ್ವಲಿಸುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅಥಿತಿಗಳಾದ ಸಂಶೋದಕ ಸಾಹಿತಿಗಳಾದ ಮೂಡಬಿ ಗುಂಡೆರಾವ ಮಾತನಾಡುತ್ತ
ಇಂದಿನ ಸಂಧರ್ಭದಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ಜನ ಜೀವನ ಸಾಗಿಸುತ್ತಿದ್ದ ಸಂಧರ್ಭದಲ್ಲಿಯೂ ಬಸವ ಕನ್ನಡ ಕಾನ್ವೆಂಟ್ ಶಾಲೆ ಸುಮಾರು 18 ವರ್ಷದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿರುವದು ಶ್ಲಾಘನೀಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ಇಂದಿನ ದಿನದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣ ಸಂಧರ್ಭದಲ್ಲಿಯು ಬಸವ ಕನ್ನಡ ಕಾನ್ವೆಂಟ್ ಶಾಲೆ ಅತಿ ಹಿಂದೂಳಿದ ಪ್ರದೇಶದಲ್ಲಿ ಸ್ಥಾಪಿಸಿ ನಗರ ಹಾಗೂ ಗ್ರಾಮೀಣ ಭಾಗದ ರೈತ,ಕಾರ್ಮಿಕರ, ಬಡವರ ಮಕ್ಕಳಿಗೆ ಕನ್ನಡದಲ್ಲಿ ಉತ್ತಮ ಶಿಕ್ಷಣ ನೀಡಿ ಸೇವೆಗೈಯುವ ಸಂಸ್ಥೆಯಾಗಿದೆ ಎಂದರು.ವೇದಿಕೆಯ ಮೇಲೆ ಗುಲಬರ್ಗಾ ವಿಶ್ವ ವಿದ್ಯಾಲಯದ ನಿವೃತ್ತ ಕುಲಸಚಿವರಾದ ರೇವಣಸಿದ್ಧಪ್ಪ ದೊಡ್ಡಮನಿ, ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಶರಣಬಸಪ್ಪ ಪಾಟೀಲ ಅಷ್ಟಗಿ, ಪ್ರಾಧ್ಯಾಪಕರಾದ ಡಾ. ಶಿವಶರಣಪ್ಪ ಮೋತಕಪಳ್ಳಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎಸ್ ದೇಶಮುಖ, ಸಂಸ್ಥೆಯ ಅಧ್ಯಕ್ಷರಾದ ಶಿಲುಬಾಯಿ ಬಿರಾದಾರ, ಸಂಸ್ಥಾಪಕರಾದ ನೀಲಕಂಠರಾವ ಬಿರಾದಾರ ಉಪಸ್ಥಿತರಿದ್ದರು. ಇದೆ ಸಂಧರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಸಂಸ್ಥೆ ಮುನ್ನಡೆಸಲು ಕಾರಣಿಕರ್ತರಾದ ಸಂಸ್ಥೆ ಅಧ್ಯಕ್ಷರಾದ ಶಿಲುಬಾಯಿ ಹಾಗೂ ನೀಲಕಂಠರಾವ ಬಿರಾದಾರ ದಂಪತಿಗಳಿಗೆ ಜನ್ಮದಾತಾ ವಿ ಎಸ್ ಅಟ್ಟೂರ ಟ್ರಸ್ಟ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.
ಶ್ರವಣಕುಮಾರ ಮಠ ಹಾಗೂ ಮಲಕಾರಿಪೂಜಾರಿ ಸಂಗೀತ ಸೇವೆ ಸಲ್ಲಿಸಿದರು. ಮಕ್ಕಳು ಸಂಸ್ಕೃತಿಕ ಕಾರ್ಯಕ್ರಮದೊಂದಿಗೆ ನೆರೆದವರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಗೌಡೇಶ ಬಿರಾದಾರ,ಡಾ. ರವಿರಾಜ ಬಿರಾದಾರ, ಸಂತೋಷ, ಶಿವರಾಜ ರೇವೂರ, ಶಿಕ್ಷಕರಾದ ಭಾರತಿ ಹಿರೇಮಠ, ಅಶ್ವಿನಿ ಪಾಟೀಲ,
ಮಹೇಶ್ವರಿ ಹಿರೇಮಠ, ಸ್ವಾತಿ, ಬಸಮ್ಮ,ಕಾವೇರಿ,ರತ್ನಾಕಲಾ,ಮೀನಾಕ್ಷಿ,
ಮಮತಾ, ಮಲ್ಲಮ್ಮ ಹಾಗೂ ವಿದ್ಯಾರ್ಥಿಗಳು, ಪಾಲಕರು, ಪೆÇೀಷಕರು ಸೇರಿದಂತೆ ಅನೇಕ ಜನ ಭಾಗವಹಿಸಿದರು.
ಈಶ್ವರಿ ದೇವಿ ಸಂಗಡಿಗರು ಪ್ರಾರ್ಥಿಸಿದರು.
ಚೌಡಪ್ಪ ಹರಳಯ್ಯ ಹಾಗೂ ರೇಣುಕಾ ಬಿರಾದಾರ ನಿರೂಪಿಸಿದರು. ಶ್ವೇತಾ ತುಪ್ಪದ ಸ್ವಾಗತಿಸಿದರು.
ಮುಖ್ಯ ಗುರುಗಳಾದ ದ್ರಾಕ್ಷಾಯಿಣಿ ಪಾಟೀಲ ವಾರ್ಷಿಕ ವರದಿ ಮಂಡಿ ಸಿದರು.ರುಕ್ಮಿಣಿ ಮಕ್ಕಳ ಪ್ರಶಸ್ತಿ ವಿವರಣೆ ನೀಡಿದರು.ಅಶ್ವಿನಿ ಪಾಟೀಲ ವಂದಿಸಿದರು.