
ಕಲಬುರಗಿ,ಜ.5-ಮೊಬೈಲ್ ಇಂದಿನ ಯುವ ಪೀಳಿಗೆಯ ಕೈಯಲ್ಲಿ ಮೊಬೈಲ್ಸು ಅದರೊಳಗಿನ ಗೇಮ್ಸು ಬಂದಾಗಿನಿಂದ ಹಳೆ ಕಾಲದ ಲಗೋರಿ, ಖೋ ಖೋ, ಚಕಾರ, ಆಣೆಕಲ್ಲು, ಮುಟ್ಟಾಟ ಇನ್ನಿತರ ಆಟಗಳು ನೆನಪಿನಂಗಳಕ್ಕೆ ಜಾರಿ ಹೋಗಿವೆ ಅದೇ ರೀತಿ ಸ್ವದೇಸಿ ಸಂಗೀತವಾದ ಹಾರ್ಮೋನಿಯಮ್, ತಬಲಾ ವಾದ್ಯಗಳು ಆ ಕಾಲಕ್ಕೆ ಕಿವಿಗಷ್ಟೇ ಅಲ್ಲ ಮನಸ್ಸಿಗೂ ತಂಪೆರೆಯುವಂಥ ದಿನಗಳಿದ್ದವು. ಆದರೆ ಈ ಕಾಲದ ಯುವ ಪೀಳಿಗೆ ಕೇಳುವ ವಿದೇಶಿ ಮ್ಯೂಸಿಕ್ಕು, ರಸ್ತೆ ಮೇಲೆ ಡಿಜೆ ಹಾಕಿಕೊಂಡು ಕುಣಿಯುವ ರೆಡಿಮೇಡ್ ಸಂಗೀತಕ್ಕೆ ಮಾರು ಹೋಗಿ ದೇಸಿ ಕಲೆ ತೆರೆಮರೆಯಲ್ಲಿ ಮುಚ್ಚಿ ಹೋಗುತ್ತಿದ್ದು ಕಲಾಸಾರಂಗ ಸಂಸ್ಥೆಯ ಮೂಲಕ ಏರ್ಪಡಿಸಿದ “ಜಾನಪದ ವರುಷ ಜಾಣರ ಹರುಷ” ಎಂಬ ಕಾರ್ಯಕ್ರಮದ ವೇದಿಕೆ ನನ್ನ ಆ ಕಾಲದ ದೇಸಿ ಸಂಗೀತ ನೆನಪಾಯಿತೆಂದು ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮುಲಗೆ ಹೇಳಿದರು.
ನಗರದ ಕಲಾಮಂಡಳನಲ್ಲಿ ಕಲಾಸಾರಂಗ ಸಾಂಸ್ಕೃತಿಕ ಹಾಗೂ ವಿವಿದೋದ್ದೇಶ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ “ಜಾನಪದ ವರಷ ಜಾಣರ ಹರುಷ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಉಪಸ್ಥಿತಿ ವಹಿಸಿದ ಚಿಂಚೋಳಿ ತಾಲೂಕಿನ ಸ್ತೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ನರಸಮ್ಮ ಲಕ್ಷ್ಮಣ ಆವುಂಟಿ ಅವರು ಮಾತನಾಡಿ, ಕೆಲೆಯನ್ನು ಬೆಳೆಸುವ ಕಲಾವಿದರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಗುಲ್ಬರ್ಗಾ ನಗರದಲ್ಲಿದ್ದರೂ ಹಳ್ಳಿ ಸೊಗಡಿನ ಕಲೆಯಲ್ಲಿ ಇದ್ದ ಹಾಗೆನಸುತ್ತಿದ್ದು ಕಾರ್ಯಕ್ರಮದ ಟೈಟಲಿನ ಹಾಗೆ ಈ ವರುಷ ಜಾನಪದ ವರುಷವಾಗಲಿ ಕಲಾಸಾರಂಗ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಏರ್ಪಡಿಸುವ ಮೂಲಕ ನಮಗೆಲ್ಲಾ ಹರುಷ ನೀಡಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಚಿತ್ತಾಪೂರ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಚನ್ನವೀರ ಕಣ್ಣಿಗಿ ಅವರು ತಮ್ಮ ಮಾತಿನಲ್ಲಿ ಈ ತರಹದ ಕಾರ್ಯಕ್ರಮಗಳು ಇಂದಿನ ಮಕ್ಕಳಲ್ಲಿ ನೋಡಬೇಕೆಂದು ಬರಬೇಕು ತಂದೆ ತಾಯಿಯರು ಮಕ್ಕಳಿಗೆ ಈ ಥರದ ವೇದಿಕೆಗೆ ಕರೆತಂದಾಗ ಮಾತ್ರ ಜಾನಪದ ಕಲೆ ಅಳೆಯದೇ ಉಳಿಯಲು ಸಾಧ್ಯ ಎಂದು ಹೇಳಿದರು.
ವಿಶ್ವವಿದ್ಯಾಲಯದ ಜಾನದಪ ವಿಭಾಗದ ಸಂಶೋಧಕ ಜಗನ್ನಾಥ, ಸಂಗೀತ ಶಿಕ್ಷಕರು ಮತ್ತು ಕಲಾ ಪೆÇೀಷಕರಾದ ಲಲಿತಾ ಹರಿಕೃಷ್ಣ, ಗುರುದೇವಿ ನೃತ್ಯ ಕಲಾ ಸಂಸ್ಥೆ ಅಧ್ಯಕ್ಷರಾದ ಗುರುದೇವಿ ಮಂಜುನಾಥ ಸಮಾಜ ಸೇವಕರಾದ ಮಹಾಂತೇಶ ಕುನ್ನೂರ, ಮಹಾಂತೇಶ ದೊಡ್ಡಮನಿ, ಹೈದರಾಬಾದ ಕರ್ನಾಟಕ ಸಿದ್ಧಾರ್ಥ ಸೇವಾ ಸಂಸ್ಥೆಯ ಅಧ್ಯಕ್ಷರಾದ ನಂದಕುಮಾರ ಎಂ. ತಳಕೇರಿ ಇನ್ನಿತರರು ವೇದಿಕೆ ಹಂಚಿಕೊಂಡರು.
ಬಾಲಪ್ರತಿಭೆ ಪ್ರಶಸ್ತಿ : ನಗರದ ಗುರುದೇವಿ ನೃತ್ಯ ಕಲಾ ಮಂದಿರದ ಗೌರಿ ಸ್ವಾಮಿ ವಿವೇಕಾನಂದ ಗೊಂಗ್ಡೆ, ದಾನೇಶ್ವರಿ ಸೋಮಶೇಖರ ಹಿರೇಮ, ಕಾವ್ಯ ವೆಂಕಟೇಶ ಕುಂಬಾರ, ಸಹನಾ ಮಲ್ಲಿಕಾರ್ಜುನ ಸುತಾರ ಎಂಬ 4 ವಿದ್ಯಾರ್ಥಿನಿಯರಿಗೆ ಬಾಲ ಪ್ರತಿಭೆ ಎಂಬ ಬಿರುದು ನೀಡಲಾಯಿತು ಹಾಗೆಯೇ ನೃತ್ಯ ಶಿಕ್ಷಕಿ ಸಂಗೀತಾ ಎಂ. ಪಡಶೆಟ್ಟಿ ಅವರಿಗೆ “ಬಿಸಿಲೂರ ನಾಟ್ಯರಾಣಿ” ಎಂಬ ಬಿರುದಿನೊಂದಿಗೆ ಗೌರವ ಸಲ್ಲಿಸಲಾಯಿತು.
ಆದರ್ಶ ದಂಪತಿಗಳು ಬಿರುದು:
ಸಮಾಜದಲ್ಲಿ ತಮ್ಮದೇ ವೈಶಿಷ್ಠ್ಯತೆ ಮೂಲಕ ಸಮಾಜದಲ್ಲಿ ಗಮನ ಸೆಳೆದಂತಹ ಶರಣಮ್ಮ ರುಕ್ಮೇಶ ಭಂಡಾರಿ, ಸುನೀತಾ ಸುರೇಶ ದೇಶಪಾಂಡೆ, ಅಶ್ವಿನಿ ಶ್ರೀಕಾಂತ ಚಿಮ್ಮಾ ದಂಪತಿಗಳಿಗೆ ಆದರ್ಷ ದಂಪತಿ ಎಂಬ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ಎರಡುವರೆ ದಶಕಗಳ ಕಾಲ ಸಂಜೆವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಶಿವಶರಣಪ್ಪ ದೇವನೂರ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಲಾಯಿತು.
ನಂತರ ಗುರುದೇವಿ ನೃತ್ಯ ತಂಡದಿಂದ ಭರತನಾಟ್ಯ, ಕುಸನೂರಿನ ಮಾಳಿಂಗರಾಯ ನೇತೃತ್ವದಲ್ಲಿ ಡೊಳ್ಳುಕುಣಿತ, ಜಗತ್ ಬಡಾವಣೆಯ ನಾಗಭೂಷಣ ಅಗಸ್ತತೀರ್ಥ ನೇತೃತ್ವದಲ್ಲಿ ಸುಗಮ ಸಂಗೀತ ಚಿಂಚೋಳಿ ತಾಲೂಕಿನ ಯಲಕಪಳ್ಳಿಯ ಹಿರಿಯರಾದ ಚನ್ನಯ್ಯಸ್ವಾಮಿ ನೇತೃತ್ವದಲ್ಲಿ ಭಜನಾಪದ ಕಾರ್ಯಕ್ರಮದಲ್ಲಿ ರಂಗು ತಂದವು. ಸಂಸ್ಥೆಯ ಅಧ್ಯಕ್ಷತೆಯು ಐಶ್ವರ್ಯ ದೇಗಲಮಡಿ ವಹಿಸಿದ್ದರು. ಯಲೀಷ ಸಿಂಹ, ಶಿವಶಂಕರ ಪಾಟೀಲ, ಸುನೀಲ ಸಿಂಗೆ, ಆಕಾಶ ಹೀರಾಪೂರ ಇನ್ನಿತರರಿಗೆ ಸತ್ಕರಿಸಲಾಯಿತು. ಸದ್ಯರಾದ ಅಭಯ ಪ್ರಕಾಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

























