Home ಜಿಲ್ಲೆ ಅದೃಶ್ಯದ ಗುರು ಸದಾ ಕಾಯುತ್ತಾನೆ:ಮಾತೋಶ್ರೀ ವಿದ್ಯಾ ದೇವಿ

ಅದೃಶ್ಯದ ಗುರು ಸದಾ ಕಾಯುತ್ತಾನೆ:ಮಾತೋಶ್ರೀ ವಿದ್ಯಾ ದೇವಿ

ಸೈದಾಪುರ: ಫೆ.27:ಅದೃಶ್ಯ ರೂಪದಲ್ಲಿರುವ ಗುರು ನಮ್ಮನ್ನು ಸದಾ ಕಾಯುತ್ತಾನೆ. ಭಕ್ತರು ಶ್ರದ್ಧಾ-ಭಕ್ತಿಯೊಂದಿಗೆ ಗುರುವಿನ ಸೇವೆ ಮಾಡಿ ಎಂದು ಮಾತೋಶ್ರೀ ವಿದ್ಯಾ ದೇವಿ ಆರ್ಶೀವಚನ ನೀಡಿದರು.
ಪಟ್ಟಣದ ಶ್ರೀ ಸಿದ್ಧ ಚೇತನಾಶ್ರಮ ಸಿದ್ಧಾರೂಢ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತವಾಗಿ ನಡೆದ 11 ದಿನಗಳ ಪ್ರವಚನ ಮಹಾಸಂಪನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೃಢ ಮನಸ್ಸಿನಿಂದ ಹಾಗೂ ಗುರುಭಕ್ತಿ ಸೇವೆಯಿಂದ ಸಾಧನೆ ಮಾಡಬಹುದು. ಮಠ ಮಾನ್ಯಗಳಲ್ಲಿನ ಗುರು ಸನ್ನಿಧಾನದಲ್ಲಿ ಸದಾಕಾಲವೂ ಶಾಂತಿ, ನೆಮ್ಮದಿ, ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ಸಂಸ್ಕøತಿ, ಸಂಸ್ಕಾರವನ್ನು ಮನೆಯಲ್ಲಿ ಕಲಿಸಿ ಗುರುವಿನ ಸೇವೆ ಮಾಡಿ ಗುರುವಿನ ಕೃಪೆ ಮತ್ತು ಆಶೀರ್ವಾದ ಪಡೆಯಿರಿ ಎಂದರು.
ಈ ಸಂದರ್ಭದಲ್ಲಿ ಪ್ರೇಮರಾಜ್ ದೊಕಾ, ಕೆ.ಬಿ ಬನ್ನಯ್ಯ, ಮಲ್ಲುಗೌಡ ಸೈದಾಪುರ, ವಿಶ್ವನಾಥ ಪಾಟೀಲ್ ಚಿಗಾನೂರು, ಬಾಲಪ್ಪ ವಿಶ್ವಕರ್ಮ, ವೀರರೆಡ್ಡಿ ಪಾಟೀಲ್ ಬಾಲಚೇಡ, ಪ್ರಭು ವಡವಟ್, ತಾಯಪ್ಪ ಚಿಗರಿ, ಸತೀಶ, ವಸಂತಮ್ಮ ಪಾಟೀಲ್, ರುದ್ರಮ್ಮ ಸ್ವಾಮಿ, ಸರಸ್ವತಿ ಸಜ್ಜನ, ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು.