Home ಜಿಲ್ಲೆ ಬೇಂದ್ರೆ ಸಾಹಿತ್ಯಶಕ್ತಿಯ ಛಾಯೆ ವಾಜಪೇಯಿ ಬರಹದಲ್ಲಿತ್ತು

ಬೇಂದ್ರೆ ಸಾಹಿತ್ಯಶಕ್ತಿಯ ಛಾಯೆ ವಾಜಪೇಯಿ ಬರಹದಲ್ಲಿತ್ತು

ಲಕ್ಷ್ಮೇಶ್ವರ,ಅ೧೦: ಬೇಂದ್ರೆ ಅವರ ಸಾಹಿತ್ಯ ಶಕ್ತಿಯಲ್ಲಿ ಕಾಣುವ ಸೃಜನಶೀಲತೆ, ಭಾ?ೆಯ ಮೇಲಿನ ಹಿಡಿತ ಹಾಗೂ ಬದುಕಿನ ಸೂಕ್ಷ್ಮತೆಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಡುವ ಸಾಮರ್ಥ್ಯದ ಛಾಯೆ ಸಾಹಿತಿ, ರಂಗಕರ್ಮಿ, ಗೀತರಚನೆಕಾರ, ಪತ್ರಕರ್ತರಾಗಿದ್ದ ದಿ. ಗೋಪಾಲ ವಾಜಪೇಯಿ(ಗೋವಾ) ಅವರ ಬರಹಗಳಲ್ಲಿಯೂ ಕಾಣುತ್ತದೆ ಎಂದು ಸಾಹಿತಿ ರಮೇಶ ನವಲೆ ಹೇಳಿದರು.


ಪಟ್ಟಣದ ಶಂಕರಭಾರತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿ?Àತ್ತಿನ ವತಿಯಿಂದ ಆಯೋಜಿಸಿದ್ದ ಮಾಸದ ಮಾತು?೪೩' ಕಾರ್ಯಕ್ರಮದಲ್ಲಿ ದಿ. ಗೋಪಾಲ ವಾಜಪೇಯಿ ಅವರ ಸಾಧನೆಯ ಹಾದಿ ಕುರಿತು ಅವರು ಮಾತನಾಡಿದರು. ಪಂಪನ ತಿರುಳ್ಗನ್ನಡ ಪುಲಿಗೆರೆಯ ಸುತ ವಾಜಪೇಯಿ ಅವರು ಪತ್ರಿಕೋದ್ಯಮದ ಜತೆಗೆ ಸಾಹಿತ್ಯ, ನಾಟಕ, ಸಿನಿಮಾ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಉತ್ತರ ಕರ್ನಾಟಕದ ನೆಲ, ನುಡಿ, ಬದುಕು ಹಾಗೂ ಸಂಸ್ಕೃತಿಯ ಸೂಕ್ಷ್ಮತೆಗಳನ್ನು ತಮ್ಮ ಬರಹ ಮತ್ತು ಸೃಜನಶೀಲ ಕೃತಿಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದರು. ಭಾ?Éಯನ್ನು ಸಂದರ್ಭಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಅವರ ಸಾಮರ್ಥ್ಯ ಗಮನಾರ್ಹವಾಗಿತ್ತು ಎಂದರು. ರAಗಭೂಮಿಯಲ್ಲಿ ನಾಟಕ ರಚನೆ ಹಾಗೂ ಅನುವಾದದ ಮೂಲಕ ಕೊಡುಗೆ ನೀಡಿದ್ದ ಅವರು, ದೊಡ್ಡಪ್ಪ’ ಸೇರಿದಂತೆ ಕೃತಿಗಳ ಮೂಲಕ ತಮ್ಮ ರಂಗಪ್ರಜ್ಞೆ ಮೆರೆದಿದ್ದರು. ಚಿತ್ರರಂಗದಲ್ಲಿಯೂ ನಾಗಮಂಡಲ', ಸಂಗ್ಯಾ ಬಾಳ್ಯಾ’, ಸಿಂಗಾರೆವ್ವ' ಸೇರಿದಂತೆ ಚಿತ್ರಗಳಿಗೆ ಗೀತೆ ರಚಿಸಿ ಗಮನ ಸೆಳೆದಿದ್ದರು. ನಾಗಮಂಡಲ’ದ ಗೀತೆಗಳ ಮೂಲಕ ಅವರ ಕಾವ್ಯಶಕ್ತಿ ಮತ್ತ?ÀÄ್ಟ ಜನರಿಗೆ ಪರಿಚಯವಾಯಿತು ಎಂದು ಹೇಳಿದರು.


ಸಹೋದರ ಗಿರೀಶ ವಾಜಪೇಯಿ ಮಾತನಾಡಿ ಬಹುಮುಖ ಪ್ರತಿಭೆಯಾಗಿದ್ದರೂ ಗೋಪಾಲ ವಾಜಪೇಯಿ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಗೆ ದೊರೆಯಬೇಕಾದ?ÀÄ್ಟ ಬೆಳಕು ಸಿಕ್ಕಿಲ್ಲ. ಅವರ ನಾಟಕ, ಪತ್ರಿಕಾ ಬರಹ, ಗೀತಸಾಹಿತ್ಯ, ಸಿನಿಮಾ ಹಾಗೂ ರಂಗಚಟುವಟಿಕೆಗಳನ್ನು ಸಮಗ್ರವಾಗಿ ದಾಖಲಿಸಿ ಅಧ್ಯಯನ ನಡೆಸಬೇಕಿದೆ. ಇದರಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದ ಹಲವು ಮಹತ್ವದ ಅಂಶಗಳು ಬೆಳಕಿಗೆ ಬರಲಿವೆ ಎಂದರು.


ಪುತ್ರ ವಿಶ್ವಾಸ ಗೋಪಾಲ ವಾಜಪೇಯಿ ಅವರು ತಂದೆಯ ಅಪರೂಪದ ವ್ಯಕ್ತಿತ್ವದ ಕುರಿತು ಮಾತನಾಡಿ ಕೆಲವೇ ದಿನಗಳಲ್ಲಿ ಅವರ ಸಾಹಿತ್ಯ ಸೇವೆಯ ಕುರಿತ ಪುಸ್ತಕ ಬಿಡುಗಡೆಯಾಗಲಿದೆ ಎಂದರು.


ತಾಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕ ನುಡಿದರು. ಕಾರ್ಯಕ್ರಮದಲ್ಲಿ ಗೋಪಾಲ ಪಡ್ನೀಸ್, ಬಸವೇಶ ಮಹಾಂತಶೆಟ್ಟರ, ಗುರುರಾಜ ಪಾಟೀಲಕುಲಕರ್ಣಿ, ಅರವಿಂದ ದೇಶಪಾಂಡೆ, ಸಿ.ಜೆ ಹಿರೇಮಠ, ಎಸ್.ಎಫ್ ಆದಿ, ಗುರು ಮೆಡ್ಲೇರಿ, ಬಿ.ಕೆ ಕುಲಕರ್ಣಿ, ಡಾ. ಎಸ್.ಜಿ ಹೂವಿನ, ಮಾಲಾದೇವಿ ದಂದರಗಿ, ಡಿ.ಪಿ ಹೇಮಾದ್ರಿ ಸೇರಿ ಅನೇಕರು ಉಪಸ್ಥಿತರಿದ್ದರು. ಕಸಾಪ ಪದಾಧಿಕಾರಿಗಳಾದ ಎಂ.ಎಸ್ ಚಾಕಲಬ್ಬಿ, ಈರಣ್ಣ ಗಾಣಿಗೇರ, ನಾಗರಾಜ ಮಜ್ಜಿಗುಡ್ಡ, ಶಂಕರ ಶಿಳ್ಳಿನ ನಿರ್ವಹಿಸಿದರು. ಪತ್ರಕರ್ತ ಮಲ್ಲು ಕಳಸಾಪುರ ಹಾಗೂ ಕು. ಪಂಚಮಿ ಅಂಬಿಗೇರ ಅವರು ವಾಜಪೇಯಿ ರಚಿಸಿದ ಗೀತೆಗಳನ್ನು ಪ್ರಸ್ತುತಪಡಿಸಿದರು.