ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿದ ಘಟನೆ ಖಂಡನೀಯ

ಕಮಲಾಪೂರ: ಜ.10:ಹುಬ್ಬಳಿಯಲ್ಲಿ ಪೆÇಲೀಸರು ಮಹಿಳೆಯನ್ನು ನಡೆಸಿಕೊಂಡ ರೀತಿ ನಾಚಿಕೆಗೇಡು, ಕಾಂಗ್ರೆಸ್ ಕಾಪೆರ್Çರೇಟರ್ ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆಯ ಮೇಲೆ ದರ್ಪ ಪ್ರದರ್ಶಿಸಿರುವುದು ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರು ಹಾಗೂ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಮುಖಂಡ ಸುರೇಶ ರಾಠೋಡ ಅವರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಘಟನೆಗೆ ಕಾರಣರಾದ ಪೆÇಲೀಸರ ವಿರುದ್ಧ ಹಾಗೂ ಈ ಪಿತೂರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೂಡಲೇ ಜರುಗಿಸಬೇಕು” ಎಂದೂ ಅವರು ಆಗ್ರಹಿಸಿದ್ದಾರೆ. ”ಈ ಘಟನೆ ಖಂಡನೀಯ. ಕಣ್ಣುಮುಚ್ಚಿ ಕುಳಿತಿರುವ ಗೃಹ ಸಚಿವರ ಆಡಳಿತ,ಖುರ್ಚಿ ಕಿತ್ತಾಟದಲ್ಲಿ ಮುಳುಗಿರುವ ಸಿಎಂ ಡಿಸಿಎಂ ನಾಟಕದಿಂದ ರಾಜ್ಯದ ಜನ ಭಯದ ವಾತಾವರಣದಲ್ಲಿ ಬದುಕುವ ದುಸ್ಥಿತಿಯಲ್ಲಿದ್ದಾರೆ.” ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ಕಾರ್ಯಕರ್ತೆಯನ್ನು ಪೆÇೀಲಿಸರು ವಿವಸ್ತ್ರಗೊಳಿಸಿ ಥಳಿಸಿದ ಘಟನೆಗೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು ಇದು ಅಕ್ಷಮ್ಯ ಅಪರಾಧವಾಗಿದೆ. ಮಹಿಳೆಯರಿಗೆ ಸುರಕ್ಷತೆ ಮುಖ್ಯ.ಮೊದಲು ಮಹಿಳಾ ಸುರಕ್ಷತೆ ಕುರಿತು ಯೋಚಿಸಿ,ಸಮಾಜದಲ್ಲಿ ಪೆÇೀಲಿಸ ವ್ಯವಸ್ಥೆ ಇರುವುದು ಕಾನೂನು ಸುವ್ಯವಸ್ಥೆ ಮತ್ತು ಸಮಾಜದ ಶಾಂತಿ ಕಾಪಾಡಲು ಹೊರತು ಗೂಂಡಾಗಿರಿ ಮಾಡಲು ಅಲ್ಲ, ಬಿಜೆಪಿ ಮಹಿಳೆಯ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದಿವರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಮತ್ತು ಇಂತಹ ಘಟನೆಗಳು ಮುಂದೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.