ಅಪ್ರತಿಮ ಜನನಾಯಕ ಡಾ.ಬಾಬು ಜಗಜೀವನ ರಾಮ್

ಕಲಬುರಗಿ :ಜು.6:ಬಾಬೂಜಿ ಎಂದು ಜನರ ಪ್ರೀತಿ ಗಳಿಸಿರುವ ಡಾ.ಬಾಬು ಜಗಜೀವಬರಾಮ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಧೀಮಂತ ರಾಜಕಾರಣಿ. ಶೋಷಿತರ ಹಕ್ಕುಗಳಿಗಾಗಿ ಅವರು ಹೋರಾಡಿದ್ದಾರೆ ಮತ್ತು ವಿವಿಧ ಖಾತೆಯ ಸಚಿವರಾಗಿ ದೇಶಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಡಾ.ಬಾಬು ಜಗಜೀವನರಾಮ್ ರ 39ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ, ಅವರು ಮಾತನಾಡುತ್ತಿದ್ದರು.
ಬಾಬುಜೀಯವರು ಸತತವಾಗಿ 30 ವರ್ಷಗಳ ಕಾಲ ಕೇಂದ್ರ ಶಾಸಕಾಂಗದ ಸದಸ್ಯರಾಗಿದ್ದರು.
ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕ್ಯಾಬಿನೆಟ್ ಸಚಿವ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರ ಅಧಿಕಾರವನ್ನು ರಾಷ್ಟ್ರದ ಅಭಿವೃದ್ಧಿಗಾಗಿ ಸಲ್ಲಿಸಿದ್ದಾರೆ. ಅವರಲ್ಲಿರುವ ದೇಶಪ್ರೇಮ, ಅಭಿವೃದ್ಧಿಯ ತುಡಿತ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ ಹಾಗೂ ವಿದ್ಯಾರ್ಥಿಗಳು ಇದ್ದರು.