
ಕಲಬುರಗಿ:ಮಕ್ಕಳಲ್ಲಿ ಉನ್ನತ ನೀತಿ-ನೈತಿಕತೆ ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ, ‘ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್’ (ಂIಆSಔ) ವಿದ್ಯಾರ್ಥಿ ಸಂಘಟನೆಯು ಮಹಾತ್ಮ ಜ್ಯೋತಿಬಾ ಫುಲೆ ಅವರ ೨೦೦ನೇ ಜನ್ಮ ವರ್ಷಾಚರಣೆಯ ಅಂಗವಾಗಿ ದಿನಾಂಕ ೧೫/೧೦/೨೦೨೬ ರಂದು ಶಹಾಬಾದ್ನಲ್ಲಿ ಒಂದು ದಿನದ ‘ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನ ಶಿಬಿರ’ವನ್ನು ಆಯೋಜಿಸಿತ್ತು.
ಈ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಂIಏಏಒS ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗಣಪತರಾವ್ ಕೆ. ಮಾನೆ ಅವರು, “ಇಂದಿನ ಪ್ರಸ್ತುತ ಸಮಾಜದಲ್ಲಿ ಆಳುವ ಸರ್ಕಾರಗಳು ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಅಶ್ಲೀಲತೆಯನ್ನು ಹರಿಬಿಡುತ್ತಿವೆ. ಕ್ರೌರ್ಯದಿಂದ ಕೂಡಿದ ಸಿನಿಮಾಗಳು ಮಕ್ಕಳ ಮನಸ್ಸನ್ನು ವಿಕೃತಗೊಳಿಸುತ್ತಿದ್ದು, ಕೊಲೆ, ದರೋಡೆ ಹಾಗೂ ಅತ್ಯಾಚಾರಗಳಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ಪ್ರಚೋದಿಸುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ಉನ್ನತ ಮತ್ತು ಸುಸಂಸ್ಕೃತ ಸಮಾಜದ ಕನಸಿನೊಂದಿಗೆ ಭಾರತದ ನವೋದಯದ ಚಿಂತಕರು ಹಾಗೂ ಅನೇಕ ಕ್ರಾಂತಿಕಾರಿ ಹೋರಾಟಗಾರರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಆದರೆ ದುರಂತವೆAದರೆ, ಯಾವ ಸಮಾಜಕ್ಕಾಗಿ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಖುದಿರಾಮ್ ಬೋಸ್ ಅವರಂತಹ ಮಹಾನಾಯಕರು ಪ್ರಾಣತ್ಯಾಗ ಮಾಡಿದರೋ, ಅವರ ನೈಜ ಇತಿಹಾಸ ಮತ್ತು ವಿಚಾರಗಳನ್ನು ಆಳುವ ಸರ್ಕಾರಗಳು ಮರೆಮಾಚುತ್ತಿವೆ. ಪರಿಣಾಮವಾಗಿ, ಇಂದಿನ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಮಾನವೀಯ ಮೌಲ್ಯಗಳ ಹಾಗೂ ವಿಚಾರಗಳ ಅಧಃಪತನವಾಗುತ್ತಿದೆ. ಆದ್ದರಿಂದ ಇಂದಿನ ಮಕ್ಕಳು ಮತ್ತು ಯುವಕರು ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ವಿಚಾರಗಳು, ಮತ್ತು ಸಂಘರ್ಷ ಬರಿತ ಜೀವನದ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ಈ ವ್ಯಕ್ತಿತ್ವ ವಿಕಾಸನ ಶಿಬಿರದಲ್ಲಿ ಮಕ್ಕಳಿಗೆ ಮಹಾತ್ಮ ಜ್ಯೋತಿಬಾ ಫುಲೆ ಅವರ ಜೀವನ ಚರಿತ್ರೆಯ ಕುರಿತು ಚರ್ಚೆ ಮತ್ತು ಸಂವಾದ, ಕಿರುಚಿತ್ರ ಪ್ರದರ್ಶನ ಹಾಗೂ ಆಟೋಟಗಳು ಸೇರಿದಂತೆ ಹಲವು ವಿಶಿಷ್ಟ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಈ ಶಿಬಿರದಲ್ಲಿ ಎಐಡಿಎಸ್ಒ ಜಿಲ್ಲಾ ಖಜಾಂಚಿಗಳಾದ ಸ್ಪೂರ್ತಿ ಗುರುಜಲ್ಕರ್ ಸದಸ್ಯರಾದ ಬಾಬು ಪವರ್, ಅಜಯ್ ಗುರುಜಲ್ಕರ್, ಬೃಂದಾ ,ಬಿಂದು, ಸೃಷ್ಟಿ, ಚೇತನ ಹಾಗೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದರು





















